ಪಿ.ಯು.ಸಿ. ಪಲಿತಾಂಶದಲ್ಲಿ ಯಾವ ಜಿಲ್ಲೆ ಯಾವ ಸ್ಥಾನ : ಉತ್ತರಕನ್ನಡದಲ್ಲಿ ಯಾವ ತಾಲೂಕು ಅಗ್ರಸ್ಥಾನ…?

2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದ ಅಂಕಿ ಅಂಶಗಳು ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಒಟ್ಟಾರೆ ಶೇ. 91.9 ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ ಒಟ್ಟು 11,998 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 11,023 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯ ತಾಲ್ಲೂಕುಗಳ ಪೈಕಿ ಶಿರಸಿ ತಾಲ್ಲೂಕು ಶೇ. 96.7 ರಷ್ಟು ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿದ್ದು, ಕುಮಟಾ ತಾಲ್ಲೂಕು ಶೇ. 96.3 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಇದೇ ವೇಳೆ ಮುಂಡಗೋಡ (ಶೇ. 93.8) ಮತ್ತು ಹೊನ್ನಾವರ (ಶೇ. 92.9) ತಾಲ್ಲೂಕುಗಳು ಉತ್ತಮ ಸಾಧನೆ ಮಾಡಿವೆ.

ಉಳಿದಂತೆ ಸಿದ್ದಾಪುರ (ಶೇ. 91.7), ಜೋಯಿಡಾ (ಶೇ. 92.4) ಹಾಗೂ ಅಂಕೋಲಾ (ಶೇ. 90.5) ತಾಲ್ಲೂಕುಗಳೂ ಗಮನಾರ್ಹ ಫಲಿತಾಂಶ ದಾಖಲಿಸಿವೆ. ಆದರೆ ದಾಂಡೇಲಿ (ಶೇ. 83.1) ಮತ್ತು ಕಾರವಾರ (ಶೇ. 85.9) ತಾಲ್ಲೂಕುಗಳು ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿವೆ.

ವಿಭಾಗವಾರು ನೋಡುವುದಾದರೆ, ವಿಜ್ಞಾನ (Science) ವಿಭಾಗ ಜಿಲ್ಲೆಯಲ್ಲಿ ಅತ್ಯಧಿಕ ಶೇ. 94.7 ರಷ್ಟು ಫಲಿತಾಂಶ ಪಡೆದಿದೆ. ವಾಣಿಜ್ಯ (Commerce) ವಿಭಾಗದಲ್ಲಿ ಶೇ. 93.2 ಮತ್ತು ಕಲಾ (Arts) ವಿಭಾಗದಲ್ಲಿ ಶೇ. 83.9 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶೇಷವಾಗಿ ಶಿರಸಿ ಮತ್ತು ಕುಮಟಾ ತಾಲ್ಲೂಕುಗಳಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶವು ಶೇ. 95 ಕ್ಕಿಂತ ಹೆಚ್ಚಾಗಿದೆ.

ಪಿಯು ಕಾಲೇಜುಗಳ ಫಲಿತಾಂಶದಲ್ಲಿ, ಅನುದಾನ ರಹಿತ (Unaided) ಕಾಲೇಜುಗಳು ಶೇ. 96.6 ರಷ್ಟು ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿವೆ. ಸರ್ಕಾರಿ ಪಿಯು ಕಾಲೇಜುಗಳು ಶೇ. 91.2, ಅನುದಾನಿತ (Aided) ಕಾಲೇಜುಗಳು ಶೇ. 88.5, ಮತ್ತು ವಸತಿ ಪಿಯು ಕಾಲೇಜುಗಳು ಶೇ. 91.6 ರಷ್ಟು ಫಲಿತಾಂಶ ದಾಖಲಿಸಿವೆ.

ಒಟ್ಟಾರೆಯಾಗಿ ಜಿಲ್ಲೆಯ ಫಲಿತಾಂಶವು ಆಶಾದಾಯಕವಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾವಾರು ಪಲಿತಾಂಶಕ್ಕಾಗಿ ವೀಕ್ಷಿಸಿ…

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*