ದಿಶಾ ಇಂಟರ್ ನ್ಯಾಶನಲ್ ಸ್ಕೂಲ್ & ಪಿ.ಯು. ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲು 25 ಶಿಕ್ಷಕರಿಗೆ ಅರ್ಜಿ ಆಹ್ವಾನ : ದಾಂಡೇಲಿ ಮತ್ತು ಅಂಕೋಲಾದಲ್ಲಿ ಸಂದರ್ಶನ

ಎಮ್.ಎ., ಎಮ್.ಎಸ್ಸಿ, ಬಿ.ಎಸ್ಸಿ, ಬಿ.ಎಡ್ ಸೇರಿದಂತೆ ಹಲವು ವಿದ್ಯಾರ್ಹತೆಯುಳ್ಳ 25 ಶಿಕ್ಷಕ | ಶಿಕ್ಷಕಿಯರಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಎಪ್ರಿಲ್ 12 ಮತ್ತು 13 ರಂದು ದಾಂಡೇಲಿ ಮತ್ತು ಅಂಕೋಲಾದಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತರು ಸಂದರ್ಶನದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಮುಖ್ಯಸ್ಥರು ಮನವಿ ಮಾಡಿದ್ದಾರೆ‌

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಮಾತೋಶ್ರಿ ಮಲ್ಲಮ್ಮ ಬೇವಿನಮರದ ಟ್ರಸ್ಟನ ದಿಶಾ ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಪಿ.ಯು. ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲು 25 ಶಿಕ್ಷಕರು | ಶಿಕ್ಷಕಿಯರು ಬೇಕಾಗಿದ್ದಾರೆ. ಸಿ.ಬಿ.ಎಸ್.ಸಿ. ರೆಸಿಡಿಯನ್ಸಿ ಸ್ಕೂಲ್ (ಪ್ರಾಥಮಿಕ ಮತ್ತು ಪ್ರೌಢ) ನಲ್ಲಿ ಕಾರ್ಯ ನಿರ್ವಹಿಸಲು ಸೋಶಿಯಲ್ ಸಾಯಿನ್ಸ್ – 2, ಮೆಥಮೆಟಿಕ್ಸ್ – 4, ಇಂಗ್ಲೀಷ – 4, ಹಿಂದಿ- 2, ಇ.ವಿ.ಎಸ್.- 3, ಕಂಪ್ಯೂಟರ – 2 , ಪಿ.ಯು. ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಬಯಾಲಜಿ -2, ಮೆಥ್ಸ್ – 2, ಕೆಮೆಸ್ಟ್ರೀ – 2 ಹುದ್ದೆಗಳು ಸೇರಿದಂತೆ ಒಟ್ಟೂ 25 ಹುದ್ದೆಗಳಿಗಾಗಿ ಸಂದರ್ಶನಕ್ಕೆ ಕರೆಯಲಾಗಿದೆ‌. ಆಯ್ಕೆಯಾದವರಿಗೆ ಊಟ, ವಸತಿಯ ಜೊತೆಗೆ ಉತ್ತಮ ವೇತನ ನೀಡಲಾಗುತ್ತದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಸಂದರ್ಶನ: ಈ ಶಿಕ್ಷಕ | ಶಿಕ್ಷಕಿಯರ ಸಂದರ್ಶನ ಎಪ್ರಿಲ್ 12 , ರವಿವಾರದಂದು ಮುಂಜಾನೆ 10 ಗಂಟೆಯಿಂದ ದಾಂಡೇಲಿಯ ರೋಟರಿ ಶಾಲೆಯಲ್ಲಿ ಹಾಗೂ ಎಪ್ರಿಲ್ 13, ಸೋಮವಾರ ಮುಂಜಾನೆ 10 ಗಂಟೆಯಿಂದ ಅಂಕೋಲಾದ ಪೂರ್ಣಪ್ರಜ್ಞಾ ಕರುಣಾ ಸೈನ್ಸ್ & ಕಾಮರ್ಸ್ ಪಿ.ಯು. ಕಾಲೇಜಿನಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ 8105017137 ಅಥವಾ 9606477544 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಕರಪತ್ರ ನೋಡಿ…

j

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*