ಮತ್ತಷ್ಟು ವಿಸ್ತಾರಗೊಂಡ ಕಾಳಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶ: ಪರಿಸರ ಸಚಿವಾಲಯ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ
ಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ.
ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು
ಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ
ಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

ಅರಣ್ಯದ ಅಂಚಿನಿಂದ 10 ಕಿ.ಮೀ. ವರೆಗಿನ
ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು
ಗುರುತಿಸಲಾಗಿದೆ. ಭೀಮಗಢ ವನ್ಯಜೀವಿ ಧಾಮವು‌ ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ ಪಶ್ಚಿಮ‌ ದಿಕ್ಕಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿಲ್ಲ. ಈಶಾನ್ಯದಲ್ಲಿ 5 ಕಿ.ಮೀ.ಯಿಂದ 10 ಕಿ.ಮೀ,‌ಪೂರ್ವದಲ್ಲಿ 1 ಕಿ.ಮೀ.ಯಿಂದ 7 ಕಿ.ಮೀ. ವರೆಗೆ
3 ಪರಿಸರ ಸೂಕ್ಷ್ಮ ಪ್ರದೇಶ ಎಂದು
ಗುರುತಿಸಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ 75 ಚ.ಕಿ.ಮೀ ಕಂದಾಯ ಪ್ರದೇಶ, 84 ಚ.ಕಿ.ಮೀ ಕಂದಾಯ ಗ್ರಾಮಗಳು ಹಾಗೂ 503 ಚ.ಕಿ.ಮೀ. ಅರಣ್ಯ ಸೇರಿವೆ. ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.

ಅಂತಿಮ ಅಧಿಸೂಚನೆ ಪ್ರಕಟಗೊಂಡ ಬಳಿಕ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಲಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು. ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ ಈ ಪ್ರಕ್ರಿಯೆ ನಡೆಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

About ಬಿ.ಎನ್‌. ವಾಸರೆ 704 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*