ಅಪ್ರಾಪ್ತ ವಯಸ್ಸಿನ ಮಗಳ ಅಪಹರಣವಾಗಿದೆ ಎಂದು ದೂರು ನೀಡಿದ ತಂದೆ

ತನ್ನ‌ ಮಗಳಿಗಿನ್ನೂ ಹದಿನೆಂಟು ವರ್ಷ ತುಂಬಿಲ್ಲ. ಅವಳಿನ್ನೂ ಅಪ್ರಾಪ್ತ ವಯಸ್ಸಿನವಳಿದ್ದಾಳೆ. ಮನೆಯಲ್ಲಿದ್ದ ಆಕೆ ಬುಧವಾರದಿಂದ‌ ಕಾಣುತ್ತಿಲ್ಲ. ಎಲ್ಲಡೆ ಹುಡುಕಾಡಿದ್ದೇವೆ. ಸಂಬಂಧಿಕರ‌ ಮನೆಯಲ್ಲೂ ವಿಚಾರಿಸಿದ್ದೇವೆ. ಆದರೆ ಮಗಳ ಸುಳಿವು ಸಿಕ್ಕಿಲ್ಲ. ಹಾಗಾಗಿ‌ ಮಗಳು ಯಾರಿಂದಲೋ ಅಪಹರಿಸಲ್ಪಟ್ಟಿರಬಹುದೆಂದು ದೂರು ನೀಡುತ್ತಿದ್ದೇವೆ ಎಂದು ತಂದೆ ಹೇಳಿಕೊಂಡಿದ್ದಾರೆ.

ಇದು‌ ನಡೆದಿದ್ದು ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದಲಗಲಿ. ಅಲ್ಲಿಯ ನಿವಾಸಿಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಬಾಲಕಿ ಕಳೆದ ಬುಧವಾರ ಮಧ್ಯಾಹ್ನ ಸಮಯದಲ್ಲಿ ಮನೆಯಿಂದ ಯಾರಿಗೂ ತಿಳಿಸದೇ ಹೊರಟು ಕಾಣೆಯಾಗಿರುವ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆಯವರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಬಾಲಕಿ ಪತ್ತೆಯಾಗದೇ ಇದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬ, ಯಾರೋ ಆಕೆಯನ್ನು ಆಮಿಷ ಒಡ್ಡಿ ಪುಸಲಾಯಿಸಿ ಅಥವಾ ಅಪಹರಿಸಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.. ಕಾಣೆಯಾಗಿರುವ ಬಾಲಕಿಯನ್ನು ಎಲ್ಲೆಡೆ ಹುಡುಕಾಡಿದ ನಂತರವೇ ಠಾಣೆಗೆ ದೂರು ನೀಡಲಾಗಿದ್ದು, ಇದರಿಂದ ದೂರು ನೀಡಲು ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಶೋಧ ಕಾರ್ಯ ಆರಂಭಿಸಿದ್ದು, ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*