ಪ್ರಸಕ್ತ ವರ್ಷದ ದ್ವಿತೀಯ ಪಿ.ಯು.ಸಿ. ಪಲಿತಾಂಶದಲ್ಲಿ ಶಿರಸಿಯ ಎಮ್.ಇ.ಎಸ್. ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭೂಮಿಕಾ ದೇವಿದಾಸ ನಾಯಕ ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದು ಜಿಲ್ಲೆಗೆ ಹೆಸರು ತಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು (ಮೂಲತಃ ಮಂಡುಮನೆ ಬೆಲೇಕೇರಿ) ಅಗಸೂರಿನ ಪ್ರಸಿದ್ಧ ನಾಟಕ ಕಲಾವಿದರು, ನಿರ್ದೇಶಕರಾದ ಬಿ.ಡಿ.ನಾಯಕ ಹಸಗೂ ದಿ.ಭಾರತಿ ನಾಯಕ ಇವರ ಮೊಮ್ಮಗಳಾದ ಕುಮಾರಿ ಭೂಮಿಕಾ ವಿಶೇಷ ಶಿಕ್ಷಕ ರಾಜ್ಯಪ್ರಶಸ್ತಿ ಪುರಸ್ಕೃತರಾದ ದೇವಿದಾಸ ನಾಯಕ ಹಾಗೂ ಶಿಕ್ಷಕಿ ಮೀನಾಕ್ಷಿ ಅವರ ಮಗಳಾಗಿದ್ದಾಳೆ. ತಂದೆ, ತಾಯಿಯ ಶಿಕ್ಷಕ ವೃತ್ತಿಯ ನಿಮಿತ್ತ ಶಿರಸಿ ತಾಲೂಕಿನ ಬಂಕನಾಳದಲ್ಲಿ ವಾಸವಾಗಿದ್ದು ಶಿರಸಿಯ ಎಮ್.ಇ.ಎಸ್. ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಓದುತ್ತಿದ್ದ ಈಕೆ 2025-26 ನೇ ಸಾಲಿನ ಪ.ಪೂ. ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 591 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಭೌತಶಾಸ್ತ್ರದಲ್ಲಿ 100ಕ್ಕೆ 100, ಗಣಿತದಲ್ಲಿ 100ಕ್ಕೆ 100, ಜೀವಶಾಸ್ತ್ರದಲ್ಲಿ 100ಕ್ಕೆ 100, ರಸಾಯನಶಾಸ್ತ್ರದಲ್ಲಿ ೧೦೦ ಕ್ಕೆ 99, ಇಂಗ್ಲೀಷ್ ನಲ್ಲಿ 100ಕ್ಕೆ 95 ಹಾಗೂ ಹಿಂದಿಯಲ್ಲಿ 100ಕ್ಕೆ 97 ಅಂಕ ಪಡೆದಿರುವ ಭೂಮಿಕಾ ಒಟ್ಡಿಉ 591 ಅಂಕಗಳನ್ನು ಗಳಿಸಿ ಮಹಾವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ಎಂಟನೇ ಸ್ಥಾನವನ್ನು ಪಡೆದು, ಮಹಾವಿದ್ಯಾಲಯಕ್ಕೂ, ತಾಲೂಕಿಗೂ, ಊರಿಗೂ ಕೀರ್ತಿ ತಂದಿರುತ್ತಾಳೆ. ಈಕೆಯ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ಹರ್ಷವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿ ಭೂಮಿಕಾ ಸಂತೊಳ್ಳಿ ಶಾಲೆಯ ಶಿಕ್ಷಕ ದೇವಿದಾಸ ನಾಯಕ ಹಾಗೂ ಮಳಲಗಾಂವ ಶಿಕ್ಷಕಿ ಮೀನಾಕ್ಷಿ ಇವರ ಮಗಳಾಗಿದ್ದು, ಮೋಹನ ಮಿಠಾಯಿ ಈ ಕುಟುಂಬದ ನೆಚ್ಚಿನ ಮೊಮ್ಮಗಳಾಗಿದ್ದಾಳೆ.
Be the first to comment