ಮಹಿಳಾ‌ ಪಿ.ಎಸ್.ಐ. ನಾಪತ್ತೆ : ಪೊಲೀಸ್ ದೂರು ದಾಖಲು

ಮಹಿಳಾ ಪಿಎಸ್‌ಐ ಓರ್ವರು ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಪಿಎಸ್‌ಐ ಮಗಳು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ‌ನೀಡಿದ್ದಾರೆ.

ಈ ಪ್ರಕರಣ ಕುತುಹಲ ಕೆರಳಿಸಿದೆ. ಪಿ.ಎಸ್.ಐ. ನಾಪತ್ತೆ ಪ್ರಕರಣ ಪೊಲೀಸ್ ಇಲಾಖೆಗೆ ಸವಸಲಾಗಿ ಪರಿಣಮಿಸಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಂಗಳಮ್ಮ ನಾಪತ್ತೆಯಾದವರು. ತನ್ನ ತಾಯಿ ಕಾಣುತ್ತಿಲ್ಲ ಎಂದು ಮಂಗಳಮ್ಮ ಅವರ ಮಗಳು ಹೊಸ ಬಡಾವಣೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.‌ ಏಪ್ರಿಲ್ 3ರಂದು ಪಿಎಸ್‌ಐ ಮಂಗಳಮ್ಮ ಡಿವೈಎಸ್ ಪಿ‌ ಕಚೇರಿಯಲ್ಲಿ ಸಭೆಗೆ ಹಾಜರಾಗಿದ್ದರು. ಈ ವೇಳೆ ಮಂಗಳಮ್ಮ ಅವರಿಗೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ ಸಮವಸ್ತ್ರ ಬದಲಿಸಿ ಸಿವಿಲ್ ಡ್ರೆಸ್ ನಲ್ಲಿ ಠಾಣೆಯಿಂದ ಹೊರ ಹೋದವರು ಅತ್ತ ಮನೆಗೂ ಹೋಗಿಲ್ಲ. ಇತ್ತ ಠಾಣೆಗೂ ಬಂದಿಲ್ಲ.‌ ಮಂಗಳಮ್ಮ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್ ಕರೆಗೂ ಸಿಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ಮಗಳು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಮಂಗಳಮ್ಮ ಅವರ ಮಗಳಿಗೆ ಇತ್ತೀಚೆಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ-ಮಗಳು ಒಟ್ಟಿಗೆ ವಾಸವಾಗಿದ್ದರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಪಿಎಸ್‌ಐ ಮಂಗಳಮ್ಮ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

About ಬಿ.ಎನ್‌. ವಾಸರೆ 704 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*