ದಾಂಡೇಲಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಶ್ರಯಯದಲ್ಲಿ ದಾಂಡೇಲಿಯಲ್ಲಿ ಎಪ್ರಿಲ್ 11 ರಿಂದ ಮೇ 30 ರ ವರೆಗೆ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೇಸಿಗೆ ಶಿಬಿರ ನಡೆಯಲಿದೆ.

ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಅಡಿಯಲ್ಲಿ ಭರತ ನಾಟ್ಯ, ಜಾನಪದ ನೃತ್ಯ, ಹಿಂದೂಸ್ಥಾನಿ ಸಂಗೀತ, ಹಾರ್ಮೋನಿಯಂ, ತಬಲಾ, ಚಿತ್ರಕಲೆ, ಯೋಗ, ಕರಾಟೆ ಹಾಗೂ ಎನ್.ಟಿ.ಸಿ. ತರಬೇತಿಗಳು ನಡೆಯಲಿವೆ.
ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರಿಂದ ಎಲ್ಲಾ ವಿಷಯಗಳ ಕೋಚಿಂಗ್ ಕ್ಲಾಸ್ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಯೋಜಕರಾದ ಜಲಜಾ ಬಿ. ವಾಸರೆ (9483798450)ಯವರನ್ನು ಸಂಪರ್ಕಿಸುವಂತೆ ಹಾಗೂ ಆಸಕ್ತ ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ನಡೆಯುವ ಎಲ್ಲಾ ತರಗತಿಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಮನವಿ ಮಾಡಿದೆ.
Be the first to comment