ಇಲ್ಲೊಂದು ಬ್ಯಾಂಕಿನಲ್ಲಿ ಬಹುಕೋಟಿ ಹಗರಣ : ಸಿಬ್ಬಂದಿಗಳಿಂದಲೇ ಗೋಲಮಾಲ್

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಬಹುಕೋಟಿ ರು.ಗಳ ಹಣಕಾಸು
ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಅಡವಿಟ್ಟು ಸಾಲ ಮಂಜೂರು ಮಾಡಿ, ಸಿಬ್ಬಂದಿಗಳೇ ಸೊಸೈಟಿಗೆ ಸುಮಾರು ಆರು ಕೋಟಿ ರೂ. ಪಂಗನಾಮ ಹಾಕಿರುವ ಸಂಗತಿ ಬಯಲಾಗಿದೆ.

ತಾಮೀರ್ ಸೊಸೈಟಿಯ ದಾಂಡೇಲಿಯ
ಶಾಖಾ ವ್ಯವಸ್ಥಾಪಕ ಮೀರ್ ಕರೀಂ
ಮೀರ್ ಇಸ್ಮಾಯಿಲ್, ಖಲೀಮೂದ್ದೀನ್
ಖಾನ್ ಸರದಾರ್ ಖಾನ್, ಗುಮಾಸ್ತೆ ಹಾಗೂ ಕ್ಯಾಶಿಯರ್ ಮಂಚಾಲಿ ಚೂಡಾಮಣಿ ನೇತ್ರೇಕ‌ರ, ನಿವೃತ್ತ ಸಿಬ್ಬಂದಿ ಮೊಹ್ಮದ್ ಹನೀಫ
ಖಾಸಿಂಸಾಬ್ ಮೋಮೀನ್, ಇಬ್ರಾಹಿಂ
ಗುಲಾಮ್ ಮೊಹಿದ್ದೀನ್, ಸಿಪಾಯಿ ನೂರ್ ಅಹ್ಮದ ಉಸ್ಮಾನಸಾಬ ಮುಲ್ಲಾ, ಕ್ಲರ್ಕ್ ಗಳಾದ ಫಯಾಜ ಅಹ್ಮದ ಅಬ್ದುಲ್ಲಾ ಶೇಖ, ಹಲೀಮಾಬಿ ಬಶೀರಖಾನ ಹಾಗೂ ಸರಾಫ್ ಸಂಜಯ
ಸದಾನಂದ ರೇವಣಕರ ಸೇರಿದಂತೆ ಒಟ್ಟು
ಒಂಬತ್ತು ಜನ ತಾವು ಕೆಲಸ ಮಾಡುವ
ಸೊಸೈಟಿಗೇ‌ ಮೋಸ ಮಾಡಿ ಇದೀಗ ಆರೋಪಿ ಸ್ಥಾನದಲ್ಲಿದ್ದಾರೆ.

ಆರೋಪಿತರು 2021 ಮಾರ್ಚ್ 17ರಿಂದ
2024 ಜನವರಿ 2ರವರೆಗೆ ಈ ವಂಚನೆ‌ ಕಾರ್ಯ ನಡೆಸಿದ್ದು, ನಕಲಿ ಚಿನ್ನವನ್ನು ಸೊಸೈಟಿಯಲ್ಲಿ ಇಟ್ಟು ಬೇನಾಮಿ ಸಾಲಗಾರರ ಹೆಸರಿನಲ್ಲಿ ಸಾಲ ಮಂಜೂರು ಮಾಡಿದ್ದಾರೆ. ಸಾಲ ಪಡೆಯುವ ವೇಳೆ ಅಗತ್ಯವಿರುವ ಕೆವೈಸಿ (KYC) ಹಾಗೂ ಭದ್ರತಾ ದಾಖಲೆಗಳನ್ನು ಸಲ್ಲಿಸಿಲ್ಲ. ಹಾಗೂ ಸಾಲದ ಇತರೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಒಟ್ಟು 208 ಖಾತೆಗಳ ಮೂಲಕ 5,09,09,450 ರೂ. ಮೊತ್ತದಷ್ಟು ಹಣವನ್ನು ಸ್ವಂತಕ್ಕೆ ಬಳಸಿಕೊಂಡು ತಾಮೀರ ಸೊಸೈಟಿಗೆ ಪಂಗನಾಮ ಹಾಕಿದ್ದಾರೆ.

ಈ ಪ್ರಕರಣದ ಕುರಿತಂತೆ ಈ ಹಿಂದೆಯೇ ವದಂತಿಗಳಿತ್ತು. ತಾಮೀರ ಸಹಕಾರಿಗೂ ಈ ಬಗ್ಗೆ ದೂರು ಹೋಗಿತ್ತು ಎನ್ನಲಾಗಿದೆ. ಬ್ಯಾಂಕಿನ 2023-24ನೇ ಸಾಲಿನ ಲೆಕ್ಕಪರಿಶೋಧನಾ
ವರದಿಯಲ್ಲಿ ಈ ಗೋಲಮಾಲ್ ಬೆಳಕಿಗೆ
ಬಂದಿದ್ದು, 2025 ಜೂನ್ 20ರಂದು ವರದಿ
ಸಲ್ಲಿಕೆಯಾಗಿತ್ತು. ಚುನಾವಣೆ ಹಾಗೂ ಕೆಲವು‌ ಕಾರಣಗಳಿಂದಾಗಿ ಕೆಲ ತಿಂಗಳುಗಳಿಂದ ತಾಮೀರ ಬ್ಯಾಂಕಿಗೆ ಆಡಳಿತ ಮಂಡಳಿ
ಇಲ್ಲದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಗಳೊಂದಿಗೆ ಚರ್ಚಿಸಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ ಅಜೀಮ್ ರುಕ್ಸುದ್ದೀನ್ ಶೇಖ್ ರವರು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಕಿರಣ ಪಾಟೀಲ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಿಓಡಿಗೆ ಹೋಗುವ ಸಾಧ್ಯತೆ
ತಾಮೀರ್ ಬ್ಯಾಂಕನಲ್ಲಿ ನಕಲಿ ಬಂಗಾರ ಇಟ್ಟು ಸಾಲ ಪಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪಂಚನಾಮೆ ನಡೆಸಿ ತನಿಖೆ ನಡೆಸಬೇಕು. ಆದರೆ ಸಹಕಾರಿ ಕಾನೂನಿನ ಪ್ರಕಾರ ಸಹಕಾರಿ ಬ್ಯಾಂಕುಗಳಲ್ಲಿ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಅವ್ಯವಹಾರ ನಡೆದಿರುವುದು ಕಂಡುಬಂದರೆ ಅದರ ತನಿಖೆಯನ್ನು ಸಿಓಡಿ ವಿಭಾಗವೇ ಮಾಡಬೇಕೆಂದಿರುತ್ತದೆ. ಪೊಲೀಸರು ಈ ವಿಚಾರವನ್ನು ತಮ್ಮ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ ನಂತರದಲ್ಲಿ ದಾಂಡೇಲಿಯ ತಾಮೀರ ಬ್ಯಾಂಕಿನ ಸೊಸೈಟಿ ಗೋಲಮಾಲ ಪ್ರಕರಣವನ್ನು ಸಿಓಡಿ ತಂಡವೇ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಸಹಕರಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸೂಕ್ತ ತನಿಖೆಯಾಗಲಿ :
ಲೆಕ್ಕ ಪರಿಶೋಧನಾ ವರದಿಯ ವಿಳಂಬದಿಂದಾಗಿ ದೂರು ನೀಡಲು ತಡವಾಗಿತ್ತು. ನಂತರ ಚುನಾವಣೆ ನಡೆದಿತ್ತು. ಈಗ ದೂರು ದಾಖಲಾಗಿದೆ. ಸೂಕ್ತ ತನಿಖೆಯಾಗಲೇ ಬೇಕು. ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಶಿಕ್ಷೆಯಾಗಲೇ ಬೇಕು. ನಮ್ಮ ಸಹಕಾರಿ ಜನರ ವಿಶ್ವಾಸದಿಂದಲೇ ಬೆಳೆದಿರುವ ಸಹಕಾರಿ. ಜನರ ನಂಬಿಕೆಗೆ ದಕ್ಕೆಯಾಗಬಾರದು ಎಂದು ಬ್ಯಾಂಕಿನ ನಿರ್ದೇಶಕ ಮುಸ್ತಾಕ ಶೇಖ್ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*