ಧಾರವಾಡದ ಕೆ.ಸಿ.ಡಿ. ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಜೊಯಿಡಾ ತಾಲೂಕಿನ ಮುಡಿಯೆ ಗ್ರಾಮದ ಆದಿವಾಸಿ ಪ್ರತಿಭೆ ಪ್ರಜಿತಾ ಪ್ರಕಾಶ್ ವೇಳಿಪ ಕೆಲ ದಿನಗಳ ಹಿಂದೆ ಶಂಖಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಪಾಲಕರು ಪೊಲೀಸ್ ದೂರು ನೀಡಿದರೂ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಓದಿ ಸಾಧಿಸಬೇಕೆಂಬ ಛದೊಂದಿಗೆ ಧಾರವಾಡದ ಬಿ.ಸಿ.ಎಮ್. ಹಾಸ್ಟೇಲ್ ನಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದ ಜೋಯಿಡಾದ ಪ್ರಜಿತಾ ಪ್ರಕಾಶ್ ವೇಳಿಪ ಸಾವು ನ್ಯಾಯ ಸಮ್ಮತವಾಗಿದೆಯೇ ಎಂಬ ಚರ್ಚೆ ಇದೀಗ ಎಲ್ಲೆಡೆ ಗಂಭೀರ ಚರ್ಚೆಗೊಳಗಾಗುತ್ತಿದೆ. ಈ ಸಾವಿಗೆ ಸರಿಯಾದ ನ್ಯಾಯ ಸಿಗಬೇಕಾದರೆ ಆರೋಪಿಗಳನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು. ಹಾಗೂ ಈ ಪ್ರಕರಣದ ತನಿಖೆ ಮಾಡಬೇಕಾದ ಧಾರವಾಡ ಪೋಲಿಸರು ಯಾವುದೇ ಆಮಿಷಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ಮಾಡಿ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂಬ ಒತ್ತಾಯ ಜೋಯಿಡಾದ ನಾಗರೀಕರದ್ದಾಗಿದೆ.
ಧಾರವಾಡದ ಬಿಸಿಎಂ ಹಾಸ್ಟೆಲ್ ನಲ್ಲಿ ಉಳಿದು ಕೆ. ಸಿ. ಡಿ ಪದವಿ ಕಾಲೇಜಿನ ಬಿಎ ದ್ವಿತೀಯ ವರ್ಷ ಶಿಕ್ಷಣ ಓದುತಿದ್ದ ವಿದ್ಯಾರ್ಥಿನಿ ಪ್ರಜಿತಾ ಪ್ರಕಾಶ್ ವೇಳಿಪ ಏಪ್ರಿಲ್ 9 ರಂದು ಅಸ್ವಸ್ಥಗೊಂಡು ಸಿಟಿ ದವಾಖಾನೆಯಲ್ಲಿ ದಾಖಲಾಗುತ್ತಾಳೆ. ಪಾಲಕರು ದೂರದ ಹಳ್ಳಿಯಲ್ಲಿ ಇರುವುದರಿಂದ ಹಾಸ್ಟೆಲ್ ವಾರ್ಡನ್ ಈ ವಿದ್ಯಾರ್ಥಿನಿಯ ಜವಾಬ್ದಾರಿ ವಹಿಸಬೇಕಾಗಿತ್ತು. ಆದರೆ ತಾನು ಅನಾರೋಗ್ಯಗೊಂಡ ಮಾಹಿತಿ ಮತ್ತು ಮೊಬೈಲ್ ಮೂಲಕ ವಾರ್ಡನ್ ಗೆ ರವಾನಿಸಿ ಆಸ್ಪತ್ರೆಗೆ ದಾಖಲಾದ ಮಾಹಿತಿ ಪಡೆದಿದ್ದೇವೆ ಎಂದು ಬಿಸಿಎಂ ಅಧಿಕಾರಿಗಳು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಶುಕ್ರವಾರ ಸಿಟಿ ದವಾಖಾನೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲಿಸಿದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧ್ಯಾರ್ಥಿನಿ ಏಪ್ರಿಲ್ 10 ರಂದು ಸಾವನ್ನಪ್ಪಿದ್ದಾಳೆ.
ಧಾರವಾಡ ಸಾಂಬಾರ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಮೃತ ಪ್ರಜೀತಾ ತಂದೆ ಪ್ರಕಾಶ್ ನೀಡಿದ ದೂರಿನಲ್ಲಿ ಇಬ್ಬರು ಯುವಕರ ಹೆಸರು ನಮೂಧಿಸಿದ್ದಾರೆ. ಈ ಇಬ್ಬರ ಹೆಸರು ಇನ್ನೊಬ್ಬ ಯುವಕ ಹೇಳಿದ್ದು ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ಎರಡು ಹೆಸರು ಹೇಳಿದ ಯುವಕ ಸೇರಿ ಮೂವರಲ್ಲಿ ಯಾರು ಮಗಳ ಸಾವಿಗೆ ಕಾರಣರಾಗಿದ್ದರು ಎಂದು ಪಾಲಕರು ಸಂಶಯ ಪಡುತ್ತಾರೆ. ಪೋಲಿಸರ ಪಾರದರ್ಶಕ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದ್ದು, ಪ್ರಕರಣ ಗಂಭೀರವಾಗಿದ್ದರೂ ಪೋಲಿಸರು ಈ ಆರೋಪಿತರನ್ನು ವಶಕ್ಕೆ ಪಡೆಯದೇ ಇರುವುದು ಕಾಂಚಾಣ ಕೆಲಸ ಮಾಡುತ್ತಿದೆಯೇ ಅನುಮಾನ ಹುಟ್ಟುವಂತೆ ಮಾಡುತ್ತದೆ ಎನ್ನುತ್ತಿದ್ದಾರೆ ಪಾಲಕರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ವಿಳಂಬವಾಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೋಲಿಸರಿಂದ ಯಾವ ತನಿಖಾಧಿಕಾರಿ ನೇಮಕ ಮಾಡದೇ ಇರುವುದು ಪ್ರಕರಣಕ್ಕೆ ದಿಕ್ಕು ತಪ್ಪಿಸುವ ಹುನ್ನಾರವಾಗಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ. ಮಾಹಿತಿ ಕೇಳಿದರೆ ಠಾಣಾ ವ್ಯಾಪ್ತಿಯಲ್ಲಿ ಮರ್ಡರ್ ನಡೆದಿದ್ದು ತನಿಖೆ ನಡೆಯುತ್ತಿದೆ ಹೇಳುತ್ತಿದ್ದಾರೆ. ಆದರೆ ಈ ಗಂಭೀರ ಪ್ರಕರಣದ ವಿಳಂಬ ಮಾಡಬಹುದೇ, ಪ್ರಕರಣಕ್ಕೆ ತಿರುವು ನೀಡಲು ಈ ರೀತಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆಯೇ ? ಎಂಬ ಅನುಮಾನ ಹುಟ್ಟುವಂತೆ ಮಾಡಿದೆ. ಎನ್ನುತ್ತಾರೆ ಊರ ಜನರು.
ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಂಶಯಾಸ್ಪದ ಆರೋಪಿಗಳಲ್ಲಿ ಇಬ್ಬರ ಹೆಸರು ದೂರಿನಲ್ಲಿ ದಾಖಲಿಸಲಾಗಿದೆ. ಸಾಚಾ ಎಂದು ತೋರಿಸುವ ಪ್ರಮುಖ ಆರೋಪಿಯ ಮೇಲೆಯೇ ಶಂಖೆ ವ್ಯಕ್ತವಾಗುತ್ತಿದೆ. ಇವರನ್ನು ತನಿಖೆ ಒಳಪಡಿಸಿದರೆ ಸತ್ಯಾಂಶ ಹೊರಬೀಳಲಿದೆ. ಆದರೆ ಏಳು ದಿನ ಕಳೆದರೂ ಪೊಸ್ಟ್ ಮಾರ್ಟಂ ರಿಪೋರ್ಟ್ ಬಂದಿಲ್ಲ ಎಂದು ಹೇಳುತ್ತ ಪೊಲೀಸರು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ? ಎಂಬ ಅನುಮಾನ ಪಾಲಕರದ್ದಾಗಿದೆ.
ಕುಣಬಿ ಸಮಾಜದಿಂದ ಎಚ್ಚರಿಕೆ : ದೂರು:
ಪ್ರಜೀತಾ ಬುಡಕಟ್ಡು ಸಮಾಜದ ಪ್ರತಿಭಾವಂತೆಯಾಗಿದ್ದಳು. ಹಾಗಾಗಿ ಕುಣಬಿ ಸಮಾಜ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿಯನ್ನು ಕೂಡಲೆ ಬಂಧಿಸದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಕುಣಬಿ ಸಮಾಜದ ಪ್ರಮುಖರು ತಿಳಿಸಿದ್ದಾರೆ. ವಿಧ್ಯಾರ್ಥಿನಿಯ ಸಾವಿಗೆ ಕಾರಣವಾದ ಆರೋಪಿಯನ್ನು ಬಂಧಿಸಲು ವಿಳಂಬ ಮಾಡಿದ್ದಾದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಹುಬ್ಬಳ್ಳಿ, ಧಾರವಾಡ ಪೋಲಿಸ್ ಕಮಿಷನರ್ ವರಿಗೂ ಕುಣಬಿ ಸಮಾಜದ ಮುಂದಾಳತ್ವದಲ್ಲಿ ಸ್ಥಳಿಯರು ದೂರು ನೀಡಿದ್ದಾರೆ.
Be the first to comment