ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪ
ಸಭಾಂಗಣ’ದಲ್ಲಿ ಆಯೋಜಿಸಿವೆ.
ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು ಪಾಲ್ಗೊಂಡು ವಿಚಾರ ಮಂಡಿಸಿ ಯುವ ಬರಹಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾಗವಹಿಸುವ ಯುವ ಬರಹಗಾರರಿಗೆ ಪ್ರಶಂಸನಾ ಪತ್ರ, ಲೇಖನ
ಸಾಮಾಗ್ರಿ, ಊಟದ ವ್ಯವಸ್ಥೆ ಹಾಗೂ ಅಗತ್ಯ ಇರುವವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಯುವ ಬರಹಗಾರರು 100 ರೂ.ಗಳ ಪ್ರತಿನಿಧಿ ಶುಲ್ಕವನ್ನು
ಮೇ 25, 2026 ರೊಳಗೆ ಪಾವತಿಸಿ ನೊಂದಾವಣೆ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುವ ಬರಹಗಾರರು 9449505789 | 9632329955 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಿ ನೋಂದಣಿ
ಮಾಡಿಕೊಳ್ಳಬಹುದಾಗಿದೆ. ಅಥವಾ ಆಸಕ್ತರು https://docs.google.com/forms/d/e/1FAIpQLSf8QDcbqLjuv2c6Ox0rbjDnWw7Wr-S85f2gXUbzR-rpIFCkMg/viewform.
ಈ ಲಿಂಕ್ ಬಳಸಿಯೂ ನೊಂದಣಿ ಮಾಡಿಕೊಳ್ಳಬಹುದಾಗಿದೆ
ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಹಾಗೂ ಎಸ್.ವೈ. ಗುರುಶಾಂತ ಸೌಹಾರ್ದ ಕರ್ನಾಟಕದ ಸಂಯೋಜಕರಾದ ಡಾ.ಎಸ್.ವೈ.ಗುರುಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊ.ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಬಡಗಲಪುರ ನಾಗೇಂದ್ರ, ನಿಸಾರ್ ಅಹಮದ್, ಐ.ಪಿ.ಎಸ್.(ನಿ), ಡಾ.ಆರ್.ಮೋಹನ್ ರಾಜ್, ಡಾ. ಎಚ್.ಎಲ್. ಪುಷ್ಪ, ಬಿ.ರಾಜಶೇಖರಮೂರ್ತಿ, ಮಲ್ಲಿಗೆ ಸಿರಿಮನೆ, ಜ್ಯೋತಿ ಅನಂತಸುಬ್ಬರಾವ್, ಎಂ.ಪ್ರಕಾಶಮೂರ್ತಿ, ಇಟ್ಬಾಲ್, ಆರ್.ರಾಮಕೃಷ್ಣ,
ಡಾ. ಮನೋಹರ ಚಂದ್ರಪ್ರಸಾದ್, ವಿಜಯ್ ಕುಮಾರ್ ಟಿ.ಎಸ್. ಕಾರ್ಯಾಗಾರದ ಸಂಯೋಜಕರಾಗಿರುತ್ತಾರೆ.
Be the first to comment