ಐಪಿಎಲ್ ಕ್ರಿಕೆಟ್ ಸೋಲು, ಗೆಲುವಿಗಾಗಿ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಪೊಲೀಸ್ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ದಾಳಿಯ ವೇಳೆ ಐವರು ಬಂಧನಕ್ಕೊಳಗಾಗಿದ್ದಾರೆ.

ಪ್ರಕರಣ ಒಂದು : ದಾಂಡೇಲಿ ನಗರದ ಅಂಬೇವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ನಿರ್ಮಲ ನಗರದ ಅನಿಲ್ ಲಕ್ಷ್ಮಣ್ ಬಳ್ಳಾರಿ, ಟಿ ಆರ್ ಟಿ ಕ್ರಾಸ್ ಹತ್ತಿರದ ಬಾಲರಾಜ ನಾಗೇಶ ಗಿರಿಯಾಲ, ಹಾಗೂ ಶ್ರವಣ್ ಇವರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿಗಾಗಿ ಹಣವನ್ನ ತೊಡಗಿಸಿ ಜೂಜಾಟ ನಡೆಸುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 25,000ಗಳ ನಗದು ಹಣ ಹಾಗೂ ಮೂರು ಮೊಬೈಲ್ ಮತ್ತು ಇನ್ನಿತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಎರಡು : ದಾಂಡೇಲಿ ನಗರದ ಅಂಬೇವಾಡಿ ಬಳಿಯ ಜಿ ಪ್ಲಸ್ ಟು ನಿವೇಶನದ ಹತ್ತಿರ ಬಾಂಬೆ ಚಾಳ್ ನ ಇಮ್ಯಾನವೆಲ್ ಬೈಲಾ ಹಾಗೂ ಸುಭಾಸ ನಗರದ ಬಸವರಾಜ್ ಅಲಿಯಾಸ್ ಭರತ್ ನಾಗೇಶ್ ಗಿರಿಯಾಲ ಎಂಬ ಇಬ್ಬರು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಹಣ ತೊಡಗಿಸಿ ಜುಜಾಟ ನಡೆಸುತ್ತಿದ್ದರಲ್ಲದೆ, ಶ್ರವಣ ಎಂಬಾತ ನೊಂದಿಗೆ ಮೊಬೈಲ್ ಮೂಲಕ ಹಣ ತೊಡಗಿಸಿ ಬೆಟ್ಟಿಂಗ್ ಕಟ್ಟಿರುತ್ತಾರೆ. ಈ ಮೂವರನ್ನೂ ನಂದಿಸಿರುವ ಪೊಲೀಸರು ಇವರಿಂದ 3,000 ನಗದು ಹಾಗೂ ಬೆಲೆಬಾಳುವ ಮೊಬೈಲಗಳನ್ನು ವಶಪಡಿಸಿಕೊಂಡಿದ್ದಾರೆ. ದಾಂಡೇಲಿ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Be the first to comment