ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಬಿ.ಜೆ.ಪಿ.ಯವರು ತಿರುಚಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ- ಕಾಂಗ್ರೆಸ್

ಕಾಂಗ್ರೆಸ ಪಕ್ಷದ ರಾಷ್ಟ್ರೀಯತೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಹೆಳಿಕೆಯನ್ನು ಬಿ.ಜೆ.ಪಿ.ಯುವರು ಸಮಾಜದ ಶಾಂತಿಯನ್ನು ಕದಡುವಂತಹ ವಾತಾವರಣವನ್ನು ನಿರ್ಮಿಸುವ ರೀತಿಯಲ್ಲಿ ತಿರುಚಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ದಾಂಡೇಲಿ ಬ್ಲಾಕ ಕಾಂಗ್ರೆಸ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ್ಯ ಮೋಹನ ಹಲವಾಯಿ ತಿಳಿಸಿದ್ದಾರೆ.

ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ಹೇಳಿಕೆಯ ಉದ್ದೇಶ ಸಮಾಜದಲ್ಲಿ ದ್ವೇಷ ಅಥವಾ ಶಾಂತಿಯನ್ನು ಕದಡಿ ವೈಷಮ್ಯವನ್ನು ಉಂಟು ಮಾಡುವುದಲ್ಲ. ಬದಲಾಗಿ ಅದನ್ನು ವಿಶಾಲ ಮನಸ್ಸಿನಿಂದ ನೋಡಿ ಅದರ ಮೂಲಾರ್ಥವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ ಪಕ್ಷದ ಇತಿಹಾಸ ತ್ಯಾಗ ಮತ್ತು ಬಲಿದಾನ ದೇಶಭಕ್ತಿಯಿಂದ ಕೂಡಿದೆ. ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಸ್ವಾತಂತ್ಯ ಹೋರಾಟದಲ್ಲಿ ತನ್ನ ಅನೇಕ ನಾಯಕರನ್ನು ಬಲಿದಾನ ಕೊಟ್ಟಿದೆ. ಸಾವಿರಾರು ನಾಯಕರು ಜೈಲು ಪಾಲಾಗಿದ್ದಾರೆ. ಅವರ ಹೋರಾಟ, ಬಲಿದಾನದ ಪಲವಾಗಿ ನಾವು ಇಂದು ಸ್ವತಂತ್ರ ಭಾರತದಲ್ಲಿ ಶಾಂತಿಯಿಂದ ಜಿವಿಸುತ್ತಿದ್ದೇವೆ.

ದೇಶದ ಎಲ್ಲ ರಾಜಿಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ನಮ್ಮ ದೇಶದ ಸಂವಿಧಾನದ ಆಶಯದಂತೆ ಶಾಂತಿ, ದೇಶದ ಏಕತೆ ಮತ್ತು ಸಾಮರಸ್ಯಕ್ಕೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಜವಾಬ್ದಾರಿಯಾಗಿದೆ. ಇದನ್ನು ಬಿಟ್ಟು ಸಾರ್ವಜನಿಕರಲ್ಲಿ ದ್ವೇಷ ಬಿತ್ತಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದನ್ನು ನಾವು ವಿರೋದಿಸುತ್ತೇವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ ಗಿರಿಯಾಲ, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ, ಖಜಾಂಚಿ ದಿವಾಕರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಆರ್.ಪಿ. ನಾಯ್ಕ, ರಾಮಲಿಂಗ ಜಾಧವ ಉಪಸ್ಥಿತರಿದ್ದರು.

(ಪೋಟೋ)

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*