ಸ್ವಂತ ಕಟ್ಟಡ ಇಲ್ಲ ಎಂಬ ಕಾರಣ ನೀಡಿ ಸ್ಥಗಿತಗೊಳಿಸಿರುವ ದಾಂಡೇಲಿಯ ಕುಳಗಿ ರಸ್ತೆ, ಹಳೆ ದಾಂಡೇಲಿ, ಹಾಗೂ ಬಂಗೂರನಗರ ಅಂಚೆ ಕಚೇರಿಗಳನ್ನು ಪುನರಾರಂಭಗೊಳಿಸುವಂತೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕಳೆದ 50 ವರ್ಷಗಳಿಂದ ದಾಂಡೇಲಿಯಲ್ಲಿ ಈ ಉಪ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಬಹಳಷ್ಟು ಅನುಕೂಲಕರವಾಗಿವೆ. ವಯೋವೃದ್ದರು, ಅಂಗವಿಕಲರಿಗೆ ಸ್ಥಳೀಯವಾಗಿ ಅಂಚೆ ಇಲಾಖೆ ಸೇವೆ ಪಡೆಯಲು ಈ ಉಪ ಕೇಂದ್ರಗಳು ಸಹಾಯಕವಾಗಿವೆ. ಆದರೆ ಅವೈಜ್ಞಾನಿಕವಾದ ಕಾರಣವನ್ನು ನೀಡಿ ಉಪ ಕೇಂದ್ರಗಳನ್ನ ಸ್ಥಳಾಂತರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ.
ಉಪ ಅಂಚೆ ಕಚೇರಿಗಳಿಂದ ಭರ್ಚಿ ರಸ್ತೆಯಲ್ಲಿರುವ ಕೇಂದ್ರ ಕಚೇರಿ ಸುಮಾರು 3 ಕಿ.ಮಿ.ಗೂ ಹೆಚ್ಚಿನ ದೂರದಲ್ಲಿರುತ್ತದೆ. ಅಂಚೆ ಗ್ರಾಹಕರಿಗೆ ಇದು ಬಹಳ ಸಮಸ್ಯೆಯಾಗುತ್ತದೆ. ವೆಚ್ಚದಾಯಕವಾಗುತ್ತದೆ. ಹಾಗಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಉಪ ಅಂಚೆ ಕಚೇರಿಗಳನ್ನು ಇದ್ದ ಸ್ಥಳದಲ್ಲಿಯೇ ಮುಂದುವರಿಸುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ರಾಜ್ಯ ನಿರ್ದೇಶಕರಾದ ಫಿರೋಜ ಫೀರ್ಜಾದೆ, ಪ್ರಮುಖರಾದ ವಿ.ಕೆ. ಸಿಂಗ್, ಶಾಮ ಬೆಮನಗಳೂರ, ಈರಯ್ಯ ಪೂಜಾರ, ದಾದಾಪೀರ, ಲಕ್ಷ್ಮಿ ಉಪ್ಪಾರ, ಸಂಗೀತಾ ಆಂಬ್ರೆ, ಪ್ರಭಾವತಿ ನಾಯ್ಕ. ಮುಂತಾದವರಿದ್ದರು.
Be the first to comment