ದಾಂಡೇಲಿ

ಬಾಗಲಕೋಟ, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು : ದಾಂಡೇಲಿಯಲ್ಲಿ ವಿಜಯೋತ್ಸವ

ದಾಂಡೇಲಿ: ಉಪಚುನಾವಣೆಗಳಲ್ಲಿ ಬಾಗಲಕೋಟ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಬೇರಿ ಸಾಧಿಸಿದ ಹಿನ್ನೆಲೆಯಲ್ಲಿ ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮಾನಿ ವೃತ್ತದಲ್ಲಿ ಮಂಗಳವಾರ ಸಂಜೆ ವಿಜಯೋತ್ಸವ ನಡೆಯಿತು. ಪಕ್ಷಕ್ಕೆ ಜೈಕಾರ ಕೂಗುತ್ತ ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ […]

ಈ ಕ್ಷಣದ ಸುದ್ದಿ

ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ‌ಮೈಕಲ್ ಫರ್ನಾಂಡೀಸ್ ಪುನರಾಯ್ಕೆ

ದಾಂಡೇಲಿ: ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಾಂಡೇಲಿ ನಗರಸಭೆಯ ಲೆಕ್ಕಾಧೀಕ್ಷಕರಾದ ಮೈಕಲ್ ಫರ್ನಾಂಡೀಸ್ ಪುನರಾಯ್ಕೆಯಾಗಿದ್ದಾರೆ. ದಾಂಡೇಲಿ‌ನಗರ ಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಕಲ್ ಫರ್ನಾಂಡೀಸ್ 45 ಮತಗಳಲ್ಲಿ 41 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮೈಕಲ್ ಫರ್ನಾಂಡೀಸ್ ಅವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಪೌರಸೇವಾ […]

ದಾಂಡೇಲಿ

ಉಪನ್ಯಾಸಕಿ ನಿರುಪಮಾ ನಾಯಕರಿಗೆ ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿ

ದಾಂಡೇಲಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತು ಬೆಂಗಳೂರು ಮೇ 1, ಕಾರ್ಮಿಕ ದಿನಾಚರಣೆಯ ಪ್ರಯುಕ್ತ ರಾಜ್ಯದ ವಿಶೇಷ ಸೇವಾ ಸಾಧಕರನ್ನು ಗುರುತಿಸಿ ಕೊಡಮಾಡುವ ರಾಜ್ಯ ಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ದಾಂಡೇಲಿ ಜನತಾ ವಿದ್ಯಾಲಯದ ಉಪನ್ಯಾಸಕಿ ನಿರುಪಮಾ ನಾಯಕ ಭಾಜನರಾಗಿದ್ದಾರೆ. ಮೇ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ […]

ಈ ಕ್ಷಣದ ಸುದ್ದಿ

ಒಳ ಮೀಸಲಾತಿ ವರದಿಯನ್ನು ಸರಕಾರ ಅಂಗೀಕಾರ ಮಾಡಿರುವುದು ಸಂತಸ : ಆದರೆ ಕೆಲವು ಮಾರ್ಪಾಡು ಮಾಡಿರುವುದು ಅಸಮಂಜಸ- ಎಚ್.ಎನ್. ನಾಗಮೋಹನದಾಸ್

ಒಡನಾಡಿ ಜೊತೆ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮುಕ್ತ ಮಾತುಕತೆ ಕಳೆದ ಮೂರ್ನಾಲ್ಕು ದಶಕಗಳಿಂದ ಬೇಕು ಬೇಡಗಳ ಜೊತೆಯಲ್ಲಿಯೇ, ಧರಣಿ ಹೋರಾಟಗಳ ನಡುವೆಯೇ ಜೀವಂತವಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ […]

ಫೀಚರ್

ಕಲಾಭಾರತಿಯ ಚೈತ್ರ ಉತ್ಸವ: ಸಾಧಕರಿಗೆ ಸನ್ಮಾನ: ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

ಅಂಕೋಲಾ: ಕಲಾಭಾರತಿ ಟ್ರಸ್ಟ್ (ರಿ) ಅಂಕೋಲಾ ಇದರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಚೈತ್ರ ಉತ್ಸವ–2026 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಹುಬ್ಬಳ್ಳಿಯ ಪರಮಪೂಜ್ಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಸಿದರು. […]

ಈ ಕ್ಷಣದ ಸುದ್ದಿ

ಮೇ 24 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಘೋಷಣೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆಯಾಗಿದ್ದು ಮೇ 24 ರಂದು ಚುನಾವಣೆ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಜಿ.ಬಿರಾದಾರ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕಕ್ಕೆ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ […]

ಫೀಚರ್

ಗಂಗಾಧರ ಕೊಳಗಿಯವರ ಕಥಾಲೋಕದ ಎರಡನೇ ಪಯಣ…. ಮೇ 01 ರಂದು ಪುಸ್ತಕಾವಲೋಕನ

ಸಿದ್ದಾಪುರ: ಎಲ್ಲೆಡೆ ಬೇಸಿಗೆಯ ಬಿರು ಬಿಸಿಲಿನ ತಾಪ, ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳ ಬರಪೂರ ಪರೀಕ್ಷಾ ಫಲಿತಾಂಶ. ತಮ್ಮ ಮಕ್ಕಳನ್ನು ಯಾವ ಊರಿನ ಯಾವ ಕಾಲೇಜು ಸೇರಿಸಬೇಕೆಂಬ ಪಾಲಕರ ತವಕ. ಇನ್ನೊಂದೆಡೆ ಮದುವೆ ಮನೆಗಳ ಗೌಜಿ ಗದ್ದಲ . ಇದರ ನಡುವೆ ಸಿದ್ದಾಪುರದಲ್ಲೊಂದು ವಿಶೇಷವಾದ ಸಾಹಿತ್ಯಕ ಕೃತಿಗಳ ಮರು […]

ಈ ಕ್ಷಣದ ಸುದ್ದಿ

ಕರ್ಕಾ ಕ್ರಾಸ್ ಅಜಗಾಂವ ಹತ್ತಿರ ಭೀಕರ ರಸ್ತೆ ಅಪಘಾತ : ಧಾರವಾಡ, ಹಳಿಯಾಳದ ಈರ್ವರ ಧುರ್ಮರಣ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್ ಅಜಗಾಂವ ಸಮೀಪ ಸೋಮವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಈರ್ವರು ಮೃತಪಟ್ಟ ಘಟನೆ ನಡೆದಿದೆ. ದಾಂಡೇಲಿಯಿಂದ ಹಳಿಯಾಳ ಕಡೆಗೆ ತೆರಳುತ್ತಿದ್ದ ಸುಜಕಿ ಎಸ್ ಕಾರು ಚಾಲಕನ ನಿಯಂತ್ರಣ ತಪ್ಪಿದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರು […]

ಈ ಕ್ಷಣದ ಸುದ್ದಿ

ಹೊನ್ನಾವರ ಸೂಪರ್ ಮಾರ್ಕೆಟ್ ಕಳ್ಳತನದಲ್ಲಿ ದಾಂಡೇಲಿಯ ಮುಜಾಫರ್ ಅಂದರ್

ಕೆಲ ದಿನಗಳ ಹಿಂದೆ ಹೊನ್ನಾವರ ತಾಲೂಕಿನ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಎ.ಆರ್.ಎಮ್ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದ್ದ ಕಳ್ಳತನದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಈತ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸುಮಾರು ಆರು ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಹೊನ್ನಾವರದ ಎ.ಆರ್.ಎಮ್ ಸೂಪರ್ ಮಾರ್ಕೆಟ್ ಕಳ್ಳತನದ […]

ಈ ಕ್ಷಣದ ಸುದ್ದಿ

ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ ರವಾನೆ: ಮಾನಸಿಕ ಕಿರುಕುಳ: ವಿದ್ಯುತ್ ನಿಗಮದ ಅಧಿಕಾರಿಯ ವಿರುದ್ಧ ದೂರು

ತಮ್ಮದೇ ಕಾರ್ಯಾಲಯದಲ್ಲಿ ಸಹ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಯೋರ್ವರಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದ್ದರ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಯೋರ್ವರ ವಿರುದ್ದ ದೂರು ದಾಖಲಾಗಿದೆ. ಪ್ರಕರಣ ಗಂಭೀರ ಸ್ವರೂಪ‌ ಪಡೆದುಕೊಂಡಿದ್ದು, ರಾಜಿ ಸಂಧಾನ ನಡೆಸುವ ಯತ್ನ ಕೂಡಾ ಕೆಲವರಿಂದ ನಡೆಯುತ್ತಿದೆ. ಘಟನೆ ನಡೆದಿರುವುದು ಉತ್ತರಕನ್ನಡ […]