ದಾಂಡೇಲಿ ತಾಲೂಕಿನ ಅಂಬಿಕಾನಗರ ಹತ್ತಿರದ ಬುಡಕಟ್ಟು ಬಡ ಗೌಳಿ ವಿದ್ಯಾರ್ಥಿಗಳೇ ಹೆಚ್ಚಿರುವ ಜಮಗಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆ. ಪಿ. ಸಿ. ಎಲ್. ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಮಾರುತಿ ಬಿ. ನಾಯ್ಕ ರವರು ಪ್ರಿಂಟರ್ ಕೊಡುಗೆಯಾಗಿ ನೀಡಿ ಶೈಕ್ಷಣಿಕ ಸಹಾಯ ಮಾಡಿರುತ್ತಾರೆ.

ಇವರ ಮಡದಿ ರಾಜಶ್ರೀ ನಾಯ್ಕ್ ರವರು ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು,
ಇವರೂ ಸಹ ಪ್ರತಿ ವರ್ಷ ಜಮಗಾ ಶಾಲೆಯ ಎಲ್ಲ ಮಕ್ಕಳಿಗೆ ಟೈ ಮತ್ತು ಬೆಲ್ಟ್ ವಿತರಿಸಿ ಸಹಾಯ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಭಾಗು ಎಮ್. ಗಾವಡೆ, ನಿಕಟ ಪೂರ್ವ ಗ್ರಾಮ ಪಂಚಾಯತ ಸದಸ್ಯ ಹಾಗೂ ಹಳೆಯ ವಿದ್ಯಾರ್ಥಿ ಯುವರಾಜ ಬಿಚ್ಚುಕಲೆ, ಶಾಲೆಯ ಮುಖ್ಯ್ಯೊಪಾಧ್ಯಾಯರು, ಅತಿಥಿ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Be the first to comment