ರೋಹನ್ ಕಾಮತ್ ದಾಂಡೇಲಿಯ ಮೊದಲ ಪೈಲೆಟ್

ದಾಂಡೇಲಿ: ಇಲ್ಲಿಯ ಹಳೆ ದಾಂಡೇಲಿಯ ನಿವಾಸಿ ರೋಹನ್ ಸಚಿನ್ ಕಾಮತ್ ಇಂಡಿಗೋ ಪೈಲೆಟ್ ಆಗಿ ಆಯ್ಕೆಯಾಗಿದ್ದು, ಈ ಸಾಧನೆಯು ದಾಂಡೇಲಿಯ ಮೊದಲ ಪೈಲೆಟ್ ಎಂಬ ಹಿರಿಮೆಗೆ ಪಾತ್ರವಾಗಿದೆ.

ಹಳೇ ದಾಂಡೇಲಿಯ ಚಾರ್ಟೆಡ್ ಅಕೌಂಡೆಡ್ ಸಚಿನ್ ಕಾಮತ ಹಾಗೂ ಸಹನಾ ಕಾಮತರ ಪುತ್ರ ರೋಹನ್ ಕಾಮತ್ ದಾಂಡೇಲಿಯ ಸೆಂಟ್ ಮೈಕಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಲ್ಲಿ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿ. ನಿಟ್ಟೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ರೋಹನ್ ಬಾಲ್ಯದಿಂದಲೂ ಪ್ರತಿಭಾವಂತ ಹುಡುಗ. ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ. ಯಲ್ಲಿ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿದ್ದ ರೋಹನ್ ಕಾಮತ್ ಕಂಪ್ಯೂಟರ್ ಸೈನ್ಸ್ ಪದವಿ ಪಡೆಯುವಾಗಲು ಕೂಡ ಅಗ್ರ ಶ್ರೇಯಾಂಕದಲ್ಲಿಯೇ ಸಾಧನೆ ಮಾಡಿದ್ದರು.

ಪೈಲೆಟ್ ಆಗಬೇಕೆಂಬ ಕನಸಿನೊಂದಿಗೆ ಅಧ್ಯಯನಶೀಲರಾದ ರೋಹನ್ ಕಾಮತ್ ಇಂಡಿಗೋ ಪೈಲೆಟ್ ಆಗಿ ಆಯ್ಕೆಯಾಗಿ ದಾಂಡೇಲಿ ಒಂದು ಹಿರಿಮೆ ತಂದಿದ್ದಾರೆ. ದಾಂಡೇಲಿಯ ಮೊಟ್ಟ ಮೊದಲ ಪೈಲೆಟ್ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಈ ಪ್ರತಿಭಾವಂತ ರೋಹನ್ ಕಾಮತ್ ದಾಂಡೇಲಿಯ ಹಿರಿಯ ವ್ಯಾಪಾರೋದ್ಯಮಿಗಳಾದ ವಿಷ್ಣು ಕಾಮತ್ ಅವರ ಮೊಮ್ಮಗ ಆಗಿದ್ದಾರೆ. ಪೈಲೆಟ್ ಆಗಿ ಆಯ್ಕೆಯಾದ ರೋಹನ್ ಕಾಮತರಿಗೆ ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.

About ಬಿ.ಎನ್‌. ವಾಸರೆ 705 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*