ಈ ಕ್ಷಣದ ಸುದ್ದಿ

ಪ್ರಾಧ್ಯಾಪಕ ಎಸ್.ವಿ. ಚಿಂಚಣಿಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸೇವಾ ನಿವೃತ್ತಿಗೊಂಡ ದಾಂಡೇಲಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾದ್ಯಾಪಕ ಎಸ್.ವಿ. ಚಿಂಚಣಿಯವರನ್ನು ಬೀಳ್ಕೊಡುವ ಹೃದಯಸ್ಪರ್ಶಿ ಕಾರ್ಯಕ್ರಮ ಪದವಿ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ವಿ. ಚಿಂಚಣಿಯವರು ನನ್ನ ವೃತ್ತಿ ಜೀವನದಲ್ಲಿ ಕಲಿಸುವಿಕೆಯ ಭಾಗವಾಗಿ ಸಾರ್ಥಕ ಬದುಕು ನಡೆಸಿದ್ದೇನೆ ಎನ್ನಲು ಹೆಮ್ಮೆಯಿದೆ. […]

ಈ ಕ್ಷಣದ ಸುದ್ದಿ

ಗಾಂಧಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಗದ ಕಂಪನಿಯಿಂದ 5 ಲಕ್ಷ ರು.ಗಳ ರಕ್ತ ತಪಾಸಣಾ ಯಂತ್ರ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಾಲೂಕಿನ ಗಾಂಧಿನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದ ರಕ್ತ ತಪಾಸಣಾ ಯಂತ್ರ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ನೀಡಿದ್ದಾರೆ. ದಾಂಡೇಲಿ ನಗರದ ಕೊಳಚೆ ಪ್ರದೇಶವೆಂದೆ ಕರೆಯಲ್ಪಡುವ ಗಾಂಧಿನಗರದಲ್ಲಿ ಹಲವಾರು […]

ಈ ಕ್ಷಣದ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಲಿವೆ -ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ

 ಕುಮಟಾ: ಬದುಕಿನ ಮುಖ್ಯ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕಟ್ಟಿಕೊಡಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಹೇಳಿದರು. ಅವರು ಇತ್ತೀಚೆಗೆ ದೇವಗಿರಿ ಗ್ರಾಮ ಪಂಚಾಯತ್ ಮತ್ತು ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸ್ಥಳೀಯತೆ ವಿಚಾರ ಸಂಕೀರ್ಣದ ಅಧ್ಯಕ್ಷತೆ ವಹಿಸಿ […]

ಈ ಕ್ಷಣದ ಸುದ್ದಿ

ಪಿ.ಆರ್. ನಾಯ್ಕರ ‘ದೇವಗಿರಿ’ ಕೃತಿ ಗ್ರಾಮೀಣ ಪರಿಸರದ ಕೈಗನ್ನಡಿಯಾಗಿದೆ – ಡಿ.ಡಿ.ಪಿ.ಐ. ಈಶ್ವರ ನಾಯ್ಕ

 ಕುಮಟಾ: ಅಂಗೈಯಲ್ಲಿ ಜಗತ್ತನ್ನು ಕಾಣುವ ಇಂದಿನ ದಿನಗಳಲ್ಲಿ ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ ಎಂದು ಉಪ ನಿರ್ದೇಶಕ ಈಶ್ವರ ಎಚ್. ನಾಯ್ಕ ಹೇಳಿದರು. ಅವರು ಇತ್ತೀಚೆಗೆ ಗ್ರಾಮ ಪಂಚಾಯತಿ ದೇವಗಿರಿ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಿ. ಆರ್. ನಾಯ್ಕ […]

ಈ ಕ್ಷಣದ ಸುದ್ದಿ

ಇನ್ನು ಮುಂದೆ ಕಸಾಪ ಸದಸ್ಯತ್ವ ಆ್ಯಪ್ ನಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇನ್ (ಕಸಾಪ ಆ್ಯಪ್ ) ಅಸ್ತಿತ್ವಕ್ಕೆ ಬಂದಿದ್ದು ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ ನ ಸಮಗ್ರ ಮಾಹಿತಿಗಳ ಜೊತೆಗೆ, ಇನ್ನುಮುಂದೆ ಹೊಸದಾಗಿ ಅಜೀವ ಸದಸ್ಯರಾಗ ಬಯಸುವವರು ಕೂಡ ಇದೇ ಆ್ಯಪ್ ನಲ್ಲಿ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ. […]

ಈ ಕ್ಷಣದ ಸುದ್ದಿ

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ಸ್ಥಾನ ಮಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ದರ್ಜೆಗೆ ಸಮಾನವಾದ ಸ್ಥಾನ ಮಾನವನ್ನು ನೀಡಿ ಆದೀಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೂಧರಣೆ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚಿನಳರವರು ಈ ಆದೇಶ ಹೊರಡಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು […]

ಈ ಕ್ಷಣದ ಸುದ್ದಿ

ಕರ್ತವ್ಯದ ಅವಧಿಯಲ್ಲಿ ಲೋಪವಾಗದಿರಲಿ: ಸರಕಾರಿ ನೌಕರರಿಗೆ ಕಟ್ಟು ನಿಟ್ಟಿನ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ತಮ್ಮ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಯಾವುದೇ ರೀತಿಯ ಲೋಪ ಎಸಗದೆ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾರವರು ರಾಜ್ಯ ಸರ್ಕಾರದ ಕಛೇರಿಗಳಲ್ಲಿ ನಿಗದಿತ […]

ಈ ಕ್ಷಣದ ಸುದ್ದಿ

ಉತ್ತರ ಕನ್ನಡ ಜಿಲ್ಲೆಯಲ್ಲೆರಡು ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯಾಗಲೇಬೇಕು

ದಾಂಡೇಲಿ: ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿರುವ ಹಾಗೂ ಹಾಗೂ ಗುಡ್ಡಗಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು (ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು) ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಗಳು ಆಗಲೇಬೇಕು. ಈ ವಿಚಾರವಾಗಿ ಪಕ್ಷಾತೀತವಾಗಿ ನಡೆಯುವ ಎಲ್ಲ ಹೋರಾಟಗಳ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ […]

ಈ ಕ್ಷಣದ ಸುದ್ದಿ

ಕೋಗಿಲಬನ ರುದ್ರಭೂಮಿಯಲ್ಲಿ 17 ಲಕ್ಷ ರು. ವೆಚ್ಚದಲ್ಲಿ ಕಾಗದ ಕಾರ್ಖಾನೆಯಿಂದ ನಿರ್ಮಾಣಗೊಂಡ ಶವಸಂಸ್ಕಾರ ಕಟ್ಟಡ

ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ. ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. […]

ಈ ಕ್ಷಣದ ಸುದ್ದಿ

ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ…

ಅಂಕೋಲಾ : ಸಮಾಜ ಸುಧಾರಕ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನಾರಾಯಣಗುರು ವೇದಿಕೆ ಅಣಿಯಾಗುತ್ತಿದೆ. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಮೂಲಕ ಅನೇಕ ಬಾರಿ ಆಗ್ರಹಿಸಿದ್ದರೂ ಇನ್ನುವರೆಗೂ ಯಾವುದೇ […]