ಬಾಗಲಕೋಟ, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು : ದಾಂಡೇಲಿಯಲ್ಲಿ ವಿಜಯೋತ್ಸವ

ದಾಂಡೇಲಿ: ಉಪಚುನಾವಣೆಗಳಲ್ಲಿ ಬಾಗಲಕೋಟ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಬೇರಿ ಸಾಧಿಸಿದ ಹಿನ್ನೆಲೆಯಲ್ಲಿ ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮಾನಿ ವೃತ್ತದಲ್ಲಿ ಮಂಗಳವಾರ ಸಂಜೆ ವಿಜಯೋತ್ಸವ ನಡೆಯಿತು.

ಪಕ್ಷಕ್ಕೆ ಜೈಕಾರ ಕೂಗುತ್ತ ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿಯವರು ಕರ್ನಾಟಕ ಸರ್ಕಾರ ಅತ್ಯಂತ ಸುಭದ್ರವಾಗಿದ್ದು ತನ್ನ ಜನಪರವಾದ ಯೋಜನೆಗಳ ಮೂಲಕ ಈಗಲೂ ಕೂಡ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಬಾಗಲಕೋಟ ಮತ್ತು ದಾವಣಗೆರೆಯ ಉಪಚುನಾವಣೆಗಳ ಪಲಿತಾಂಶವೇ ಒಂದು ನಿದರ್ಶನ. ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಜನರ ಬೇಕು ಬೇಡಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಿದೆ. ಕೇರಳದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ರಾಹುಲ್ ಗಾಂಧಿಯವರ ಶಕ್ತಿಯನ್ನ ಇಮ್ಮಡಿಗೊಳಿಸುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ಖಜಾಂಚಿ ದಿವಾಕರ ನಾಯ್ಕ, ಕಾರ್ಯದರ್ಶಿ ಉಸ್ಮಾನ ಶೇಖ್, ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ರಿಯಾಜ್ ಸಯ್ಯದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಬಂದಂ, ನಗರಸಭೆಯ ಮಾಜಿ ಅಧ್ಯಕ್ಷರಾದ ಅಶ್ಪಾಕ ಶೇಖ, ಯಾಸ್ಮಿನ ಕಿತ್ತೂರ, ಮಾಜಿ ಉಪಾಧ್ಯಕ್ಷರಾದ ಅನಿಲ್ ದಂಡಗಲ ಹಾಗೂ ನಗರಸಭೆ ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 683 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*