ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಅವರು ಎಲ್ಲ ದಾನಗಳಲ್ಲಿಯೂ ರಕ್ತದಾನವೇ ಶ್ರೇbಷ್ಠವಾದುದು. ರಕ್ತವನ್ನು ಕೃತಕವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ರಕ್ತದಾನವು ಮಹಾದಾನವಾಗಿದೆ. ಅದು ಸಂಕಷ್ಟದಲ್ಲಿರುವ ಜೀವವೊಂದಕ್ಕೆ ಪುನರ್ ಜನ್ಮ ನೀಡುತ್ತದೆ. ರಕ್ತದಾನ ಮಾಡಿದವರ ಬದುಕನ್ನು ಸಾರ್ಥಕಗೊಳಿಸುತ್ತದೆ. ಹೀಗಾಗಿ ಅನ್ನದಾನ, ಧನದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. […]