ದೇವಾಲಯಗಳಲ್ಲಿ ಇನ್ನು ಮುಂದೆ ತೀರ್ಥ- ಪ್ರಸಾದವಿಲ್ಲ
ಬೆಂಗಳೂರು: ಲಾಕ್ ಡೌನ್ ಬಳಿಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆಯಾದರೂ ಕೆಲವು ನಿರ್ಬಂಧಗಳನ್ನೂ ಹೇರಲಾಗಿದೆ. ರಾಜ್ಯದ ಎಲ್ಲಾ ದೇವಾಲಯಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷ ಒಳಗಿನವರಿಗೆ ಪ್ರವೇಶವಿಲ್ಲ. ತೀರ್ಥ-ಪ್ರಸಾದ ನೀಡುವಂತಿಲ್ಲ. ಪ್ರಸಾದ ಭೋಜನ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವರ ದರ್ಶನ ಸಮಯದಲ್ಲೂ ಸಾಮಾಜಿಕ ಅಂತರವಿರಬೇಕು. […]