ಎಸ್.ಎಸ್.ಎಲ್.ಸಿ. ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ 800 ವಿದ್ಯಾರ್ಥಿಗಳಿಗೆ ಕಸಾಪ ಗೌರವ – ಬಿ.ಎನ್. ವಾಸರೆ

ದಾಂಡೇಲಿ: ಪ್ರಸಕ್ತ ಸಾಲಿನ ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ ಸುಮಾರು 8೨೫ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸುವ ಸರಣಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾಲೂಕುವಾರು ಜೂನ್ 2೫ ರಿಂದ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜನಮನಕ್ಕೆ ಹತ್ತಿರವಾಗಿದೆ ಎಂಬುದು ಸಹೃದಯಿಗಳ ಅಭಿಪ್ರಾಯ ಕೂಡಾ. ಸಾಹಿತ್ಯ ಸಮ್ಮೇಳನಗಳ ಜೊತೆಗೆ ಅಕ್ಷರೋತ್ಸವ, ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ನವೆಂಬರ್ ತಿಂಗಳಡೀ ಕನ್ನಡ ಕಾರ್ತಿಕ : ಅನುದಿನ – ಅನುಸ್ಪಂದನ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಕವಿಗೋಷ್ಠಿ, ಉಪನ್ಯಾಸ, ಸಂವಾದ, ಮಹನೀಯರ ಜನ್ಮದಿನಾಚರಣೆಗಳು ಹೀಗೆ ಹಲವಾರು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 750 ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿರುವ ಹೆಮ್ಮೆ ನಮಗಿದೆ. ಇದೆಲ್ಲದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಗೌರವಿಸುತ್ತ ಬಂದಿರುವುದು ಪರಿಣಾಮಕಾರಿಯದ ಕಾರ್ಯಕ್ರಮವಾಗಿದೆ. 2022ರಲ್ಲಿ ಸುಮಾರು 1,250 ವಿದ್ಯಾರ್ಥಿಗಳನ್ನು, 2023ರಲ್ಲಿ ಸುಮಾರು 1,100 ವಿದ್ಯಾರ್ಥಿಗಳನ್ನು , 2024 ರಲ್ಲಿ ಸುಮಾರು 900 ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ನಾವು, ಈ ಬಾರಿ 2024ರಲ್ಲಿಯೂ ಕೂಡ ಸುಮಾರು 8೨೫ ವಿದ್ಯಾರ್ಥಿಗಳನ್ನು ಜಿಲ್ಲೆಯಾದ್ಯಂತ ತಾಲೂಕುವಾರು ಅಭಿನಂದಿಸಲಿದ್ದೇವೆ. ಕಸಾಪ ತಾಲೂಕು ಘಟಕಗಳ ಸಹಕಾರ ಹಾಗೂ ಸ್ಥಳೀಯ ಸಂಪನ್ಮೂಲಗಳ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದ್ದು, ಕನ್ನಡ ಭಾಷಾ ವಿಷಯದಲ್ಲಿ ಸಾಧನೆ ಮಾಡಿದವರನ್ನ, ಮಾಡುವವರನ್ನು ಇನ್ನಷ್ಟು ಉತ್ತೇಜಿಸಬೇಕೆಂಬುದೇ ಈ ಕಾರ್ಯಕ್ರಮದ ಆಶಯವಾಗಿದೆ ಎಂದು ವಾಸರೆ ತಿಳಿಸಿದ್ದಾರೆ.

ತಾಲೂಕುವಾರು ನಡೆಯುವ ಕಾರ್ಯಕ್ರಮದ ಮಾಹಿತಿ….

ಜೂನ್ 25 ರಂದು ಮುಂಜಾನೆ 10.30 ಗಂಟೆಗೆ ಅಂಕೋಲಾದ ಪಿ.ಎಮ್.ಹೈಸ್ಕೂಲಿನ ರೈತ ಭವನದಲ್ಲಿ , ಮಧ್ಯಾಹ್ನ 2.30 ಕ್ಕೆ ಕುಮಟಾದ ಪುರಭವನದಲ್ಲಿ, ಜೂನ್ 26 ರಂದು ಮುಂಜಾನೆ 10.30 ಗಂಟೆಗೆ ಹೊನ್ನಾವರದ ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ, ಮದ್ಯಾಹ್ನ 2.30 ಕ್ಕೆ ಭಟ್ಕಳದ ಆನಂದಾಶ್ರಮ ಪ್ರೌಡಶಾಲೆಯಲ್ಲಿ, ಜುಲೈ 2 ರಂದು ಮದ್ಯಾಹ್ನ 2.30 ಕ್ಕೆ ಹಳಿಯಾಳದ ಕಾರ್ಮೆಲ್ ಪ್ರೌಢಶಾಲೆಯಲ್ಲಿ, ಜುಲೈ 3 ರಂದು ಮುಂಜಾನೆ 10.30 ಕ್ಕೆ ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ, ಜುಲೈ 4 ರಂದು ಮುಂಜಾನೆ 10.30 ಕ್ಕೆ ಯಲ್ಲಾಪುರದ ಟಿ.ಎಮ್.ಎಸ್. ಸಭಾಂಗಣದಲ್ಲಿ, ಮದ್ಯಾಹ್ನ 2.30 ಕ್ಕೆ ಮುಂಡಗೋಡದ ಅಂದಲಗೆಯ ಸರಕಾರಿ ಪ್ರೌಢಶಾಲೆಯಲ್ಲಿ, ಜುಲೈ 7 ರಂದು ಮುಂಜಾನೆ 10.30 ಕ್ಕೆ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಮದ್ಯಾಹ್ನ 2.30 ಕ್ಕೆ ಶಿರಸಿಯ ರಂಗಧಾಮದಲ್ಲಿ, ಜುಲೈ 8 ರಂದು ಮುಂಜಾನೆ 10.30 ಕ್ಕೆ ಕಾರವಾರದ ಹಿಂದೂ ಹೈಸ್ಕೂಲ್ ನಲ್ಲಿ, ಜುಲೈ 12 ರಂದು ಮುಂಜಾನೆ 10.30 ಕ್ಕೆ ಜೋಯಿಡಾದ ಶ್ರೀರಾಮ ಪ್ರೌಢ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ.

ಎಸ್.ಎಸ್.ಎಲ್.ಸಿ. ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳು ಅಥವಾ ಅವರ ಪಾಲಕರು ತಮ್ಮ ತಮ್ಮ ತಾಲೂಕಿನಲ್ಲಿ ನಿಗದಿಯಾದ ದಿನದಂದು ನಡೆಯುತ್ತಿರುವ ಈ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸುವಂತೆಯೂ ಸಾರ್ವಜನಿಕರು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆಯೂ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*