ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಕ್ತಿಯಾಶೀಲ ವ್ಯಕ್ತಿತ್ವದ ಸುದೀಶ ನಾಯ್ಕ

ಸುದೀಶ ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪುಳಿಯುವ ಹೆಸರು. ಅತ್ಯುತ್ತಮ ನಿರೂಪಕರಾಗಿ ಗುರುತಿಸಿಕೊಂಡ ಈ ಅಪರೂಪದ ವ್ಯಕ್ತಿ, ಸಂಘಟನಾ ಚತುರರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ, ಶಿಕ್ಷಕ ಬಂಧುಗಳಿಗೂ, ಸಾಮಾನ್ಯ ಜನರಿಗೂ ತುಂಬಾ ಆಪ್ತ ಹೆಸರು.

ಈ ಹೆಸರಿನಲ್ಲಿ ನಂಬಿಕೆ, ಆದರಾತಿಥ್ಯ, ಗೆಳೆತನ, ಹಿರಿ-ಕಿರಿಯರನ್ನು ಗೌರವಿಸುವ ಗುರುತರ ಜವಾಬ್ದಾರಿಯ ಆಪ್ತತೆ ಇದೆ. ಗೆಳೆಯ ಎಂ.ಜಿ. ನಾಯ್ಕ ಅವರೊಂದಿಗಿನ ಜೋಡೆತ್ತಿನ ನಂಟು. ಈಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷತೆಯ ಗಾದೆ ಅವರನ್ನರಸಿ ಬಂದಿದೆ. ತಾಲೂಕಿನಾದ್ಯಂತ ಚಿರಪರಿಚಿತರಾದ ಸುದೀಶ ನಾಯ್ಕರವರು ಈಗ ಹೊನ್ನಾವರ ತಾಲೂಕಾ ಶಿಕ್ಷಕ ಸಂಘದ ತಾಲೂಕಾ ಅಧ್ಯಕ್ಷರು.

1972 ರಲ್ಲಿ ತಂದೆ ಶಂಕರ ನಾಯ್ಕ, ತಾಯಿ ಗಿರಿಜಾ ನಾಯ್ಕ ರವರ ಮುದ್ದಿನ ಮಗನಾಗಿ ಕುಮಟಾ ತಾಲೂಕಿನ ಹೊಳೆಗದ್ದೆಯಲ್ಲಿ ಜನಿಸಿದರು. 1992 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಬದುಕನ್ನು ಆರಂಭಿಸಿ,ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ತನ್ನ ವೃತ್ತಿ ಬದುಕಿನ ಜೊತೆಗೆ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿರುತ್ತಾರೆ.

ಸುದೀಶ ನಾಯ್ಕ

ಬಹುಮುಖ ಪ್ರತಿಭಾವಂತರಾದ ಇವರು ತಾಲೂಕಿನ ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವುದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆಚರಣೆ, ಅನುಭವ ,ಅರ್ಹತೆ, ಯೋಗ್ಯತೆಯ ಮೂಲಕ ಬಹುಮುಖ ವ್ಯಕ್ತಿತ್ವದೊಂದಿಗೆ ಸಾಮಾಜಿಕ- ಸಾಂಸ್ಕೃತಿಕ ಹರಿಕಾರರಾಗಿ ತಾಲೂಕಿನಲ್ಲಿ ನಂಜಿಲ್ಲದೇ ರಾತ್ರಿ ಹಗಲನ್ನದೆ ದುಡಿವ, ದುಡಿದ ಸರಳ ಸಜ್ಜನರು.

1994 ರಿಂದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸದಸ್ಯರಾಗಿ,ಜಿಲ್ಲಾ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ, ವಿವಿಧ ಹುದ್ದೆಗಳನ್ನು ಅಲಂಕರಿಸಿ ಆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುತ್ತಾರೆ. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಶಿಕ್ಷಕರ ಪ್ರೀತಿಗೆ ಪಾತ್ರರಾಗಿರುತ್ತಾರೆ. ತ್ವರಿತವಾಗಿ ಕೆಲಸ ಮಾಡದೇ ವಿವೇಕದಿಂದ ಕೆಲಸ ಮಾಡಿ ಯುವ ಜನತೆಗೆ ಮಾದರಿಯಾಗಿರುತ್ತಾರೆ.

ತಾಲೂಕು, ಜಿಲ್ಲಾ ಮಟ್ಟದ ಯುವಜನ ಮೇಳ, ಯುವಜನೋತ್ಸವ, ಕ್ರೀಡಾಕೂಟ ಸಂಘಟಿಸಿ ಯುವಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿರುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಇಡೀ ಶಿಕ್ಷಕ ಕುಲಕ್ಕೆ ಹೆಮ್ಮೆ ಎನಿಸಿದೆ. ಯಾರೊಂದಿಗೂ ವೈರತ್ವ ಸಾಧಿಸದೇ ಸೌಹಾರ್ದತೆಯಿಂದ ಎಲ್ಲರೊಳಗೊಂದಾಗಿ ದಣಿವಾರಿಯದೆ ದುಡಿಯುವ ಇವರ ಕೆಲಸಗಳಿಗೆ ತಾಲೂಕಿನ ಶಿಕ್ಷಕರು ಕೈಜೋಡಿಸಬೇಕಾಗಿದೆ. ಯೋಜನೆ- ಯೋಚನೆ ರೂಪಿಸಿ ಕಾರ್ಯಕ್ರಮ ಸಂಘಟಿಸುವ ಶಿಸ್ತಿನ ಜೀವನಕ್ಕೆ ಹೆಸರಾಗಿರುತ್ತಾರೆ. ಇಂತಹ ಅಪರೂಪದ ವ್ಯಕ್ತಿತ್ವದ ಸುದೀಶ ನಾಯ್ಕರವರ ಸೇವಾ ಅವಧಿಯಲ್ಲಿ ಸಂಘ ಸರ್ವ ರೀತಿಯಲ್ಲಿ ಮಾದರಿಯಾಗಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ, ಹೊಳೆಗದ್ದೆ

About ಬಿ.ಎನ್‌. ವಾಸರೆ 697 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.

*