ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೬

‘ಅವ್ನ ಹಾಂಗೆ ಬಿಟ್ರೆ ನಮ್ಮನ್ನೆ ಅಕ್ಸ ಬಿಡ್ತ. ಮೊನ್ನಾಗೆ ಸಾಲಿ ಆಕ್ಕೊರು ಸಿಕ್ದವ್ರು ಅವ್ನ ಕಾಥಿ ಒಂದ ಹೇಳ್ದ್ರು…. ಹೇಳ್ದ್ರು…ಸಾಲಿಲಿ ಕೊಟ್ಟ ಒಂದ ಕೆಲ್ಸನೂ ಮಾಡುದಿಲ್ಲಂತೆ. ನಮ್ಮುರ್ನ ಎಲ್ಲಾ ಮಕ್ಳು ಸಾಲಿಗೆ ಹೋಗಿ ಆಕ್ಕೊರೆ ಎಂತ ಬರಿಬೇಕು ಹೇಳಿ ಕೇಳ್ಕಂಡಿ, ಇಂವ ಬರ್ದ ಪಟ್ಟಿ ತೊರ್ಸಂಡಿ, ಮತ್ತೆನಾದ್ರು ಹಾಕೊಟ್ರೆ ಮನಿಗ್ಬಂದಿ ಬರ್ಕಂಡಿ ಮತ್ತೆ ಕಾಡಿಗೆ ತಾಕಂಡೊಗಿ ತೊರ್ಸಂಡಿ ಬರ್ತಂತೆ. ಆದ್ರೆ ಇ ಪೊರ್, ಮತ್ತೆ ನಾಮ್ಕೆರಿಮ್ಯಾಲೆ ಇನ್ನೂ ಮುರ್ನಾಲ್ಕು ಮಕ್ಳು ಆವ್ರ್ಯಂತೆ. ನಾಮ್ಮನಿ ಗುಲಾಮ ಎಲ್ಲರ್ಗು ಬೊಸಂತೆ. ನಾನ್ನ ಕೈಗೆ ಸಿಕ್ದ್ರೆ ಆವ್ನ ಬೊಸ್ಗಿರಿ ನೆಲ ಕಚ್ಸ ಬಿಡ್ತೆ. ಆಲ್ಲಾ ಮಾರು, ನಾಂಗೆ ಸಿಟ್ಟ ಬಂದ್ರೆ ನಾ ಯಾವ ಆಪ್ಗು ಕ್ಯಾರೆ ಮಾಡುದಿಲ್ಲ.

ಮಾರು, ಮತ್ತೊಂದು ಕಾಥಿ ನಿಂಗೂತ್ತಾದ್ಯಾ. ಈ ಕೊರೋನಾ ಬಂದ್ಮೆಲೆ ಮಕ್ಳಂತು ಸಾಲಿಗೆ ಹೊಗ್ವಾಂಗಿಲ್ಲ. ಎಲ್ಲದೂ ಫೋನ್ನಾಗೆ ಬಿಡ್ತ್ರಂತೆ. ಆಕ್ಕೊರ್ಗೆ ಬಿಟ್ಟಿದ್ದು,ಅವ್ರು ಆ ಜರಾಸಂಗ್ಡಿ ರೇಕ್ಗೆ ಬಿಡ್ತ್ರಂತೇ. ಅಲ್ಲಿ ನಾವ್ ಹೋಗಿ ದುಡ್ಕೊಟ್ಟಿ ತಾಕಬರ್ಬೆಕಂತೆ. ಒಂದೊಂದ್ಸಲ ಹೊದಾಗಂತೂ ಒಂದ್ಬೆಟ್ಟ ಕಾಡ್ಮಿ ಆಗೂದಿಲ್ಲ. ಅಂದ್ರೆ ನೂರುಪೈ ಬೇಕೆ ಬೇಕು. ನಾಮ್ಗೆ ಯಾರಾದ್ರು ಕೊಟ್ರೆ ಬೇಕು. ಇದ್ಕೆಲ್ಲಿಂದ ತರೂದು. ಆ ಸರ್ಕಾರ್ದರ್ಗೆ ಬುದ್ದಿ ಬ್ಯಾಡಾ. ದುಡ್ಕ ತಿಂಬೊರು ಎಲ್ಲಿಂದ ತರೂದು ಅಂತಾ. ಆದ್ರು ಒಂದೆಯ್ಡ ಸಲ ತಂದ್ಕೊಟ್ಟೆ. ಒಂದ್ಸಲ ದುಡ್ಡು ಕೊಟ್ಟರೆ, ಮಾತ್ತೊಂದ್ಸಲ ದುಡ್ಡು ಕೊಡ್ದೆ ಹಾಂಗೆ ಬಂದೆ. ಕಾಡಿಕೊಡ್ತೆ ಹೇಳಿ. ಇಂವ ಬರ್ದ್ನಾ, ಎಂತ ಮಾಡ್ದನಾ. ನಾನಂತೂ ಕೇಳ್ಲಿಲ್ಲ, ಹೇಳ್ಲಿಲ್ಲ.

ಮೊನ್ನಾಗೆ ಎಂತ ಆಯ್ತು ಬಾಲ್ಯಾ, ಆ ಜಾರಾಸಂಗ್ಡಿ ರೇಖಾ ಎ ಮಾರಣ್ಣ, ಆಕ್ಕೊರು ಮಾತ್ತೊಂದಿಟ್ಟು ಬಿಟ್ಟಾರೆ. ಜೆರೆಕ್ಸು ತೆಗ್ದಿಟ್ಟಿದೆ. ಮೊದ್ಲುಂದು ದುಡ್ಡು ಕೊಟ್ಕಂಡಿ ಈಗಂದು ತಾಕಂಡೊಗು ಅಂದೆಳ್ತು. ಅಷ್ಟೆಳ್ದೆ ನಾಂಗೆ ಪಿತ್ತಾ ನೆತ್ತಿಗೆರ್ದಾಂಗೆ ಆಗಿ ಮೊಕ, ಮುಸ್ಡು ನೊಡ್ದೆ ಗಾನಾಕೆ ಹೇಳ್ಬಂದೆ. ಮರ್ಯಾದಿ ಇದ್ರೆ ನನ್ನ ಮುಸ್ಡು ನೋಡ್ವಾಂಗಿಲ್ಲ ಅಷ್ಟ ಮಾಡಿ ಬಂದಿದ್ದೆ. ನಾಮ್ಗೆ ಕುಡುಕಿಲ್ದೆ ವಳ್ಳನೆಕ್ತ್ರು.ಇದ್ಕೆ ಜೆರಾಕ್ಸ ದುಡ್ಬೆಕಂತೆ. ಕಾಡಿಗೆನೆ ನಾನ್ನ ಹೆಂಡ್ತಿ ಹೋಗಿ, ದುಡ್ಕೊಟ್ಟಿ ತಾಕಬಂದಾಳೆ. ಆಲ್ಲಾ ಮಾರಾಯಾ, ನಾ ಕೇಳ್ದ್ರೆ ನನ್ನ ಹೆಂಡ್ತಿ ಕೆಲಿ , ಒಂದ್ರುಪಾಯಿ ಹುಟ್ಟುದಿಲ್ಲಾ. ಮಾಗಗೆ ಎಟ್ಟಬೇಕಾದ್ರೆ ಕೊಡ್ತದೆ.ಎಂತಕಂದ್ರೆ ಆಂವಾ ಸಾಲಿ ಕಲಿಬೇಕಂತೆ. ನೋಡ್ವಾ…ನೋಡ್ವಾ…. ಸಾಲಿ ಕಲ್ತಿ ಎನೂದ್ದಾರ ಮಾಡ್ತಾ ಹೇಳಿ. ಸಾಲಿ ಒಂದು ಸುರು ಆಗ್ಲಿ. ಕಾಡಿಗೆ ಹೇಳ್ತೆ…..


– ಪಿ.ಆರ್. ನಾಯ್ಕ, ಹೊಳೆಗದ್ದೆ



  ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
About ಬಿ.ಎನ್‌. ವಾಸರೆ 704 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*