ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಪಾಸಿಟಿವ್ ಪ್ರಕರಣ….

ದಾಂಡೇಲಿಯಲ್ಲಿ ಶನಿವಾರ ಮತ್ತೆ 27 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.

ಇಲ್ಲಿಯವರೆಗೆ ಒಟ್ಟೂ 531 ಜನರು ಸೋಂಕಿಗೊಳಗಾಗಿದ್ದು ಶುಕ್ರವಾರದವರೆಗೆ 344 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.

ಶನಿವಾರದ ವರದಿಯಲ್ಲಿ ನಗರದ ಕಾಗದ ಕಂಪನಿ, ಟೌನ್ ಶಿಪ್, ಹಳೆದಾಂಡೇಲಿ ಸೇರಿದಂತೆ ವಿವಿದೆಡೆಯ ಜನರಲ್ಲಿ ಸೋಂಕು ದೃಢವಾಗಿದೆ. ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರ ಪರೀಕ್ಷೆಗೊಳಪಡಿಸಿದ 125 ಜನರಲ್ಲಿ 27 ಜನರದ್ದು ಪಾಸಿಟಿವ್ ಬಂದಿದೆ ಎನ್ನಲಾಗಿದೆ.

About ಬಿ.ಎನ್‌. ವಾಸರೆ 709 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*