ಈ ಕ್ಷಣದ ಸುದ್ದಿ

ಪಿ.ಆರ್. ನಾಯ್ಕರ ‘ದೇವಗಿರಿ’ ಕೃತಿ ಗ್ರಾಮೀಣ ಪರಿಸರದ ಕೈಗನ್ನಡಿಯಾಗಿದೆ – ಡಿ.ಡಿ.ಪಿ.ಐ. ಈಶ್ವರ ನಾಯ್ಕ

 ಕುಮಟಾ: ಅಂಗೈಯಲ್ಲಿ ಜಗತ್ತನ್ನು ಕಾಣುವ ಇಂದಿನ ದಿನಗಳಲ್ಲಿ ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ ಎಂದು ಉಪ ನಿರ್ದೇಶಕ ಈಶ್ವರ ಎಚ್. ನಾಯ್ಕ ಹೇಳಿದರು. ಅವರು ಇತ್ತೀಚೆಗೆ ಗ್ರಾಮ ಪಂಚಾಯತಿ ದೇವಗಿರಿ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಿ. ಆರ್. ನಾಯ್ಕ […]

ಈ ಕ್ಷಣದ ಸುದ್ದಿ

ಇನ್ನು ಮುಂದೆ ಕಸಾಪ ಸದಸ್ಯತ್ವ ಆ್ಯಪ್ ನಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಆ್ಯಪ್ ಲೋಕಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ ಮೊಬೈಲ್ ಅಪ್ಲಿಕೇನ್ (ಕಸಾಪ ಆ್ಯಪ್ ) ಅಸ್ತಿತ್ವಕ್ಕೆ ಬಂದಿದ್ದು ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ ನ ಸಮಗ್ರ ಮಾಹಿತಿಗಳ ಜೊತೆಗೆ, ಇನ್ನುಮುಂದೆ ಹೊಸದಾಗಿ ಅಜೀವ ಸದಸ್ಯರಾಗ ಬಯಸುವವರು ಕೂಡ ಇದೇ ಆ್ಯಪ್ ನಲ್ಲಿ ಸದಸ್ಯರಾಗುವ ಅವಕಾಶವನ್ನು ಕೂಡ ನೀಡಲಾಗಿದೆ. […]

ಈ ಕ್ಷಣದ ಸುದ್ದಿ

ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ಸ್ಥಾನ ಮಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿಯವರಿಗೆ ರಾಜ್ಯ ಸಚಿವರ ದರ್ಜೆಗೆ ಸಮಾನವಾದ ಸ್ಥಾನ ಮಾನವನ್ನು ನೀಡಿ ಆದೀಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸೂಧರಣೆ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚಿನಳರವರು ಈ ಆದೇಶ ಹೊರಡಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು […]

ಈ ಕ್ಷಣದ ಸುದ್ದಿ

ಕರ್ತವ್ಯದ ಅವಧಿಯಲ್ಲಿ ಲೋಪವಾಗದಿರಲಿ: ಸರಕಾರಿ ನೌಕರರಿಗೆ ಕಟ್ಟು ನಿಟ್ಟಿನ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ತಮ್ಮ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಯಾವುದೇ ರೀತಿಯ ಲೋಪ ಎಸಗದೆ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾರವರು ರಾಜ್ಯ ಸರ್ಕಾರದ ಕಛೇರಿಗಳಲ್ಲಿ ನಿಗದಿತ […]

ಈ ಕ್ಷಣದ ಸುದ್ದಿ

ಉತ್ತರ ಕನ್ನಡ ಜಿಲ್ಲೆಯಲ್ಲೆರಡು ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯಾಗಲೇಬೇಕು

ದಾಂಡೇಲಿ: ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿರುವ ಹಾಗೂ ಹಾಗೂ ಗುಡ್ಡಗಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು (ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು) ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಗಳು ಆಗಲೇಬೇಕು. ಈ ವಿಚಾರವಾಗಿ ಪಕ್ಷಾತೀತವಾಗಿ ನಡೆಯುವ ಎಲ್ಲ ಹೋರಾಟಗಳ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ […]

ಈ ಕ್ಷಣದ ಸುದ್ದಿ

ಕೋಗಿಲಬನ ರುದ್ರಭೂಮಿಯಲ್ಲಿ 17 ಲಕ್ಷ ರು. ವೆಚ್ಚದಲ್ಲಿ ಕಾಗದ ಕಾರ್ಖಾನೆಯಿಂದ ನಿರ್ಮಾಣಗೊಂಡ ಶವಸಂಸ್ಕಾರ ಕಟ್ಟಡ

ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ. ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. […]

ಈ ಕ್ಷಣದ ಸುದ್ದಿ

ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ…

ಅಂಕೋಲಾ : ಸಮಾಜ ಸುಧಾರಕ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನಾರಾಯಣಗುರು ವೇದಿಕೆ ಅಣಿಯಾಗುತ್ತಿದೆ. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಮೂಲಕ ಅನೇಕ ಬಾರಿ ಆಗ್ರಹಿಸಿದ್ದರೂ ಇನ್ನುವರೆಗೂ ಯಾವುದೇ […]

ಈ ಕ್ಷಣದ ಸುದ್ದಿ

ಕಸಾಪ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೨-೨೩ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆಅರ್ಜಿಗಳನ್ನು ಆಹ್ವಾನಿಸಿದೆ. ೨೦೨೨ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ ೧೫ರವರೆಗೆ ದಂಡ ಶುಲ್ಕ ರೂ.೫೦-೦೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. ರೂ.೨೫-೦೦ […]

ಈ ಕ್ಷಣದ ಸುದ್ದಿ

ಕ್ಯಾಮರಾ-ವಿಡಿಯೋ… ರಾತೋರಾತ್ರಿ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಅನುಮತಿಯಿಲ್ಲದೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಒಂದೇ ದಿನದಲ್ಲಿ ರಾತೋರಾತ್ರಿ ಹಿಂಪಡೆದಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಮನವಿಯ ಮೇರೆಗೆ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಪರವಾನಗಿ ಇಲ್ಲದೆ ಫೋಟೋ ಹಾಗೂ […]

ಈ ಕ್ಷಣದ ಸುದ್ದಿ

ಇನ್ನು ಮುಂದೆ ಕರ್ನಾಟಕದ ಸರಕಾರಿ ಕಚೇರಿಗಳಲ್ಲಿ ಫೋಟೊ / ವಿಡಿಯೊ ಮಾಡುವಂತಿಲ್ಲ :ರಾಜ್ಯ ಸರ್ಕಾರದ ಆದೇಶ

ಇನ್ನು ಮುಂದೆ ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಫೋಟೊ ಅಥವಾ ವಿಡಿಯೋಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅನುಮತಿ ಇಲ್ಲದೆ ಮಾಡುವಂತಿಲ್ಲ… ಹೀಗೆಂದು ರಾಜ್ಯ ಸರ್ಕಾರದ ಆದೇಶ ಹೊರಬಂದಿದೆ . ರಾಜ್ಯ ಪಾಲರ ಆದೇಶದನ್ವಯ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ವೆಂಕಟೇಶಪ್ಪ ರವರು […]