‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ

ಸವದತ್ತಿಯ ಸಹೃದಯ‌ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯ
ನಾಗರೇಖಾ‌ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ‌ ಆಯ್ಕೆಯಾಗಿದೆ.

2025 ನೇ ಸಾಲಿನಲ್ಲಿ‌ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.‌ಪ್ರತಿಷ್ಠಾನದ ನಾಲ್ಕನೇ ವರ್ಷದ
ಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು‌ ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚು
ಕೃತಿಗಳು ಸಲ್ಲಿಕೆಯಾಗಿದ್ದವು. ನಾಡಿನ ಹಿರಿಯ ಸಾಹಿತಿ, ಸಂಶೋಧಕ ಪಿ.ಜಿ. ಕೆಂಪಣ್ಣವರ ತೀರ್ಪುಗಾರರಾಗಿದ್ದರು.

ಹಾವೇರಿಯ ಲಕ್ಷ್ಮಿಕಾಂತ ಮೀರಜಕರ
ಅವರ ‘ಖಾಲಿ ಜೋಳಿಗೆಯ ಫಕೀರ’ ಗಜಲ್ ಸಂಕಲನಕ್ಕೂ ಈ‌ಪ್ರಶಸ್ತಿ ಲಭಿಸಿದೆ.‌ ಜೂನ್ ತಿಂಗಳಿನಲ್ಲಿ ಸವದತ್ತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇಬ್ಬರೂ ಕೃತಿಕಾರರಿಗೆ ತಲಾ 75 ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 690 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*