ದಾಂಡೇಲಿಯಲ್ಲಿ ನಿತ್ಯ ಎರಡಂಕಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಶುಕ್ರವಾರ ಒಂದಂಕಿಗೆ ಇಳಿದಿದ್ದು ಇಂದಿನ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ 7 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಶುಕ್ರವಾರ ಕೆರವಾಡಾ, ಕೋಗಿಲಬನ, ನಿರ್ಮಲ ನಗರ, ಬಂಗೂರನಗರ ಸೇರಿದಂತೆ 8 ಜನರಲ್ಲಿ ಪಾಸಿಟಿವ್ ಬಂದಿದ್ದು, ಇದರಿಂದ ಒಟ್ಟೂ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 503 ಕ್ಕೆ ಏರಿಕೆುಾಗಿದೆ. ಗುರುವಾರ 18 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಶುಕ್ರವಾರ ಇನ್ನಷ್ಟು ಜನರು ಗುಣಮುಖರಾಗಿ ಮನೆ ಸೇರುವ ಸಾದ್ಯತೆಯಿದೆ. ಇಲ್ಲಿಯವರೆಗೆ 300 ಜನರು ಗುಣಮುಖರಾದ ಮಾಹಿತಿ ಲಭ್ಯವಿದೆ.
ಸದ್ಯ ಕೊರೊನಾ ನಗರದೆಲ್ಲಡೆ ಪಸರಿಸಿದೆ. ತಾಲೂಕಿನ ಗ್ರಾಮೀಣ ಭಾಗಗಳಾದ ಆಲೂರು, ಅಂಬಿಕಾನಗರ, ಗಾಂವಠಾಣಾ ಸೇರಿದಂತೆ ಹಲವೆಡೆಯೂ ಪ್ರಕರಣಗಳು ದಾಖಲಾಗಿವೆ. ಇದೀಗ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಿರಿಯ ನಾಗರಿಕರ ಪರೀಕ್ಷೆ ನಡೆಸುವ ಸರ್ವೆ ಕಾರ್ಯ ಆರಂಭವಾಗಿದೆ.
Be the first to comment