ದಾಂಡೇಲಿಯಲ್ಲಿ ಮಂಗಳವಾರ ಮತ್ತೊಂದು ಕೊರೊನಾ: ಜಿಲ್ಲೆಯಲ್ಲಿ 33 ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 33 ಕೊರೊನಾ ಪಾದಿಟಿವ್ ಪ್ರಕರಣ ದೃಢವಾಗಿದ್ದು, ಇದರಲ್ಲಿ ದಾಂಡೇಲಿಯದ್ದೂ ಒಂದು ಪ್ರಕರಣ ಸೇರಿದೆ.

ನಗರದ ಹಳಿಯಾಳ ರಸ್ತೆಯ ಅಲೈಡ ಏರಿಯಾದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ದೃಢವಾಗಿರುವ ಮಾಹಿತಿ ಲಭ್ಯವಾಗಿದ್ದು, ಈತ ಗದಗದಿಂದ ಸೋಂಕಿತ ತಾಯಿ ಮಗುವನ್ನು ತನ್ನ ಖಾಸಗಿ ವಾಹನದಲ್ಲಿ ಕರೆತಂದಿದ್ದ ಸೋಂಕಿತ ಚಾಲಕನ ಸಂಪರ್ಕ ದಲ್ಲಿದ್ದವನೆಂದು ತಿಳಿದು ಬಂದಿದೆ. ಈತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಜೆ ಕಾರವಾರ ಕ್ರಿಮ್ಸ್ ಗೆ ಸಾಗಿಸುವ ಸಾದ್ಯತೆಯಿದೆ. ಇದರಿಂದಾಗಿ ದಾಂಡೇಲಿಯ ಸೋಂಕಿತರ ಸಂಖ್ಯೆ 14 ಕ್ಕೆ ಏರಿದಂತಾಗಿದೆ.

ಮಂಗಳವಾರ ಭಟ್ಕಳ 17, ಕಾರವಾರ 5, ಕುಮಟಾ, ಹೊನ್ನಾವರ, ಹಳಿಯಾಳದಲ್ಲಿ ತಲಾ 2 ಪ್ರಕರಣಗಳು ದೃಡಪಟ್ಟಿವೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

About ಬಿ.ಎನ್‌. ವಾಸರೆ 709 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*