ಅಂಗವಿಕಲ ವೃದ್ದೆಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಗುಂಡೇಟು: SP ಏನಂದ್ರು ಗೊತ್ತಾ..? ವಿಡಿಯೋ ನೋಡಿ…

ಅದೊಂದು ಅಮಾನವೀಯ ಕೃತ್ಯ. ಆತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಮಾಡಿದ್ದು ಅಂಗವಿಕಲ ವೃದ್ದೆಯ ಮೇಲೆ ಅತ್ಯಾಚಾರ. ಅದೂ ಕೂಡಾ ಕಾಡ ದಾರಿಯ ನಿರ್ಜನ ಪ್ರದೇಶದಲ್ಲಿ. ಅತ್ಯಾಚಾರ ಮಾಡಿ ಆ ಅಜ್ಜಿಯ ಬಳಿ ಇದ್ದ ನಗದು ದೋಚಿಕೊಂಡು, ಚಾಕುವಿನಿಂದ ಗಾಯಗೊಳಿಸಿದ ಆತ ಕೊನೆಗೂ ಪೊಲಿಸ್ ಬಲೆಗೆ ಬಿದ್ದ. ಇದು ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ.

ಅತ ಅದೆಷ್ಟು ಕ್ರಿಮಿನಲ್ ಇದ್ದ ಅಂದರೆ… ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ್ದ. ಆಗ ಪೊಲೀಸರೂ ಸಹ ಆತನ ಮೇಲೆ ಗುಂಡಿನ ದಾಳಿ ನಡೆಸಿದರು.

ಆರೋಪಿ ದಾಂಡೇಲಿಯ ಬೈಲಪಾರಿನ ಫೈರೋಜ ಯರಗಟ್ಟಿ ಕಾಲಿಗೆ ಗುಂಡೇಟು ತಗುಲಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಪಿ.ಎಸ್.ಐ. ಕಿರಣ ಪಾಟೀಲ , ಸಿಬ್ಬಂದಿಗಳಾದ ಕೃಷ್ಣಾ ಹಾಗೂ ಇಮ್ರಾನ ಕೂಡಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ ಎಮ್. ಭೇಟಿ ನೀಡಿ ಪರಿಶೀಲಿಸಿದರು. ಘಟನೆಯ ಮಾಹಿತಿ ಪಡೆದರು. ಗಾಯಗೊಂಡ ಪೊಲೀಸರಿಗೆ ಧೈರ್ಯ ತುಂಬಿದರು. ವೃದ್ದೆಯ ಮೇಲೆ ಅತ್ಯಾಚಾರ ನಡೆದ ಘಟನೆಯ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ದಾಂಡೇಲಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಶೂಟೌಟ್ ಘಟನೆಯ ಬಗ್ಗೆ ಎಸ್.ಪಿ. ಮತ್ತೇನೆಂದರು… ಈ ವಿಡಿಯೋದಲ್ಲಿದೆ… ವಿವರವಾಗಿ ನೋಡೋಣ…

About ಬಿ.ಎನ್‌. ವಾಸರೆ 675 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*