
ದಾಂಡೇಲಿಯ ಸರಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ (ಜಿಟಿ ಎಂಡ್ ಟಿಸಿ ಕಾಲೇಜಿನ) ನಿವೃತ್ತ ಪ್ರಾಚಾರ್ಯ ಅರುಣ ಬಿ. ನಾಯಕ (67) ಅನಾರೋಗ್ಯದಿಂದ ಕೊನೆಯಿಸಿರೆಳೆದಿದ್ದಾರೆ.
ಮೂಲತಹ ಅಂಕೋಲಾ ತಾಲೂಕಿನ ಕಣಗಿಲ ದವರಾಗಿರುವ ಇವರು ದಾಂಡೇಲಿಯಲ್ಲಿ ಬದುಕನ್ನು ಕಂಡುಕೊಂಡಿದ್ದರು. ತಮ್ಮ ಶೈಕ್ಷಣಿಕ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದ ಅರುಣ ನಾಯಕ ಜಿಟಿಟಿಸಿ ಕಾಲೇಜಿನ ಉಪನ್ಯಾಸಕ ರಾಗಿ ಹಲವೆಡೆ ಕಾರ್ಯ ನಿರ್ವಹಿಸಿ, ದಾಂಡೇಲಿಯ ಜಿಟಿಟಿಸಿ ಕಾಲೇಜಿನಲ್ಲಿಯೂ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದರು.
ರೋಟರಿ ಕ್ಲಬ್ ನಲ್ಲಿ ಸಕ್ರಿಯರಾಗಿದ್ದ ಅರುಣ ನಾಯಕ ಅವರು ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ದಾಂಡೇಲಿ ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿ ಗುರುತರ ಕಾರ್ಯನಿರ್ವಹಿಸಿದ್ದರು. ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿ ಶಾಲೆಯ ಅಭಿವೃದ್ಧಿಗಾಗಿ ಇವರು ತೊಡಗಿಸಿಕೊಂಡ ರೀತಿ ಅನನ್ಯವಾದದ್ದು.

ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅರುಣ ನಾಯಕರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಮೃತರು ಮಡದಿ, ಮಗಳು, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ ಮುಂಜಾನೆ 10 ಗಂಟೆಗೆ ದಾಂಡೇಲಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇವರ ಅಗಲುವಿಕೆಗೆ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

Be the first to comment