ವೀಲಿಂಗ್ ವಿಡಿಯೋ : ಆರು ಬೈಕ್ ಪೊಲೀಸ್ ವಶಕ್ಕೆ

ವೀಲಿಂಗ್ ಮಾಡುತ್ತಿದ್ದ ಬೈಕುಗಳನ್ನು ದಾಂಡೇಲಿಯ ಗ್ರಾಮೀಣ ಠಾಣೆಯ ಪೊಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಲಿಂಗ್ ವಿಡಿಯೋ

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ ಸವಾರರು ವೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ಗಮನಿಸಿದ ಪಿ.ಎಸ್.ಐ. ಕೃಷ್ಣ ಅರಕೇರಿಯವರು ಸಿ.ಪಿ.ಐ. ಭೀಮಣ್ಣ ಸೂರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ವೀಲಿಂಗ್ ನಡೆಸಿದ ಆರು ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಜಗದೀಶ ಕಾರ್ಯಾಚರಣೆಯಲ್ಲಿ ಜೊತೆಗಿದ್ದರು.

ಮೊಹಮ್ಮದ್ ಶೋಯೇಬ ಲೀಯಾಕತ ಖಾನಪುರಿ ಹಾಗೂ ಕಾರ್ತೀಕ ಚಂದ್ರಶೇಖರ್ ಎಂಬವರ ಇಬ್ಬರು ಮಾಲಕರ ಬೈಕ ಗುರುತಿಸಲಾಗಿದ್ದು, ಬೈಕ್ ಮಾಲಕರ ಮಾಹಿತಿ ಆರ್.ಟಿ.ಓ. ಅಧಿಕಾರಿಗಳಿಂದ ಅಧಿಕೃತವಾಗಿ ದೊರೆಯಬೇಕಿದೆ.

ಇತ್ತೀಚಿನ ದಿನಗಳಲ್ಲಿ ದಾಂಡೇಲಿಯಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಯುವಕರು ಬೈಕ್ ಸ್ಟಂಟ್ ಮಾಡುವುದು ಹೆಚ್ಚಾಗಿತ್ತು. ಗಮನಿಸಿದ ಪೊಲಿಸರು ಇದೀಗ ಕಡಿವಾಣ ಹಾಕಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

About ಬಿ.ಎನ್‌. ವಾಸರೆ 621 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*