ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಹೆಚ್ಚಿನವರು ಆಲ್ಕೋಹಾಲ್ ಸೇವನೆ ಮಾಡುತ್ತಾರೆ. ಯಾವುದೇ ಪಾರ್ಟಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಕುಟುಂಬ ಸ್ನೇಹಿತರೊದಿಗೆ ಸೇರಿ ಹೆಚ್ಚಿನ ಜನರು ಮೋಜಿಗಾಗಿ ಮದ್ಯಪಾನ ಮಾಡುತ್ತಾರೆ. ಹಾಗೂ ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು ಇರಲೇಬೇಕು. ಡ್ರಿಂಕ್ ಮಾಡುವಾಗ ಯಾವ್ಯಾವ ಪದಾರ್ಥ ಸೇವಿಸಬಾರದು ಎಂಬುದರ ಬಗ್ಗೆ ತಜ್ಞರ ಮಾಹಿತಿ ಇಲ್ಲಿದೆ ನೋಡಿ.
ಸಂಸ್ಕರಿಸಿದ ಮತ್ತು ಕರಿದ ಆಹಾರಗಳು:
ಹೆಚ್ಚಿನವರಿಗೆ ಆಲ್ಕೋಹಾಲ್ ಸೇವಿಸುವಾಗ ಕುರುಕುಲು ತಿಂಡಿ ಅಥವಾ ಮಸಾಲೆಯುಕ್ತ ಕರಿದ ಆಹಾರಗಳು ಇರಲೇಬೇಕು. ಆದರೆ ನಿಮಗೆ ಗೊತ್ತಾ, ಈ ಆಹಾರಗಳು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು, ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು.
ಸಕ್ಕರೆಯುಕ್ತ ಪಾನೀಯಗಳು:
ಕೆಲವರು ತಾವು ಸೇವಿಸುವ ಮದ್ಯಕ್ಕೆ ಸೋಡಾ ಅಥವಾ ಕೊಕಕೋಲಾ ಹಾಗೂ ಇನ್ನಿತರ ಸಿಹಿಕಾರಕ ಪಾನೀಯಗಳನ್ನು ಸೇರಿಸುತ್ತಾರೆ. ಈ ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಾಗಲು ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಕೆಂಪು ಮಾಂಸ:
ಕೆಂಪು ಮಾಂಸಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅಂಶವನ್ನು ಹೊಂದಿರುತ್ತದೆ. ಇವೆರಡೂ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ ಈ ಕೆಂಪು ಮಾಂಸವು ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.
ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ತಿನಿಸುಗಳು:
ಬ್ರೆಡ್, ಪಾಸ್ಟಾ ದಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಿಸಬಹುದು. ಇದು ಮಧುಮೇಹ ಮತ್ತು ಇತರ ಅಸ್ವಸ್ಥತೆಗಳ ಅಪಾಯವನ್ನು ಉಂಟುಮಾಡಬಹುದು.
ಹೆಚ್ಚಿನ ಪ್ರಮಾಣ ಕೊಬ್ಬಿನಾಂಶ
ಚೀಸ್, ಬೆಣ್ಣೆಯಂತಹ ಹೆಚ್ಚಿನ ಪ್ರಮಾಣದ ಕೊಬ್ಬಿನ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ನ್ನು ಹೊಂದಿರುತ್ತವೆ. ಇವೆರಡೂ ನಿಮ್ಮ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು.
ಡೈರಿ ಉತ್ಪನ್ನಗಳು
ಈ ಡೈರಿ ಉತ್ಪನ್ನಗಳು ತೂಕ ಹೆಚ್ಚಾಗಲು ಮತ್ತು ಟೈಪ್ 2 ಮಧುಮೇಹದಂತಹ ಇತರ ದೀರ್ಘಕಾಲದ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.
Be the first to comment