ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ ಮಾಧವಿ ಭಂಡಾರಿ ಆಯ್ಕೆ

ಸಾಹಿತ್ಯದಲ್ಲಿ ಸಮಗ್ರ ಸಾಧನೆಗಾಗಿ ನೀಡುವ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ 2022 ನೇ ಸಾಲಿಗೆ ಮಾಧವಿ ಭಂಡಾರಿ ಕೆರೆಕೊಣ ಇವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಎಚ್. ಎಲ್. ಪುಷ್ಪಾರವರು ಪ್ರಕಟಿಸಿದ್ದಾರೆ.

ಮಾಧವಿ ಭಂಡಾರಿ ಕೆರೆಕೋಣ ಇವರ ಕಿರು ಪರಿಚಯ:
ಮಾಧವಿ ಭಂಡಾರಿ ಪ್ರಕಟಿತ ಪುಸ್ತಕಗಳು: ಹರಿದ ಸ್ಕರ್ಟಿನ ಹುಡುಗಿ, ಕಡಲು ಕಳೆದಿದೆ, ಮೌನಗರ್ಭದ ಒಡಲು (ಕವನ ಸಂಕಲನಗಳು) ಪಿಸುದನಿ (ಲೇಖನಗಳ ಸಂಗ್ರಹ) ಆಗೇರ ಮಹಿಳೆಯರ ಸಾಂಸ್ಕೃತಿಕ ಬದುಕು (ಸಾಹಿತ್ಯ ಅಕಾಡೆಮಿ ಪ್ರಕಟಣೆ), ನೀನುಂಟು ನಿನ್ನ ರೆಕ್ಕೆ ಉಂಟು (ಸಂಪಾದಿತ ದಶಕದ ಮಹಿಳಾ ಕಾವ್ಯ). ಇವರಿಗೆ, ಹರಿಹರಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಮೋಹನ ಕುರಡಗಿ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ರಾಷ್ಟಿಯ ಕಾವ್ಯ ಪ್ರಶಸ್ತಿ ಲಭಿಸಿದೆ.

ಮಹಿಳಾ ಸಂಘಟನೆ, ರಂಗಭೂಮಿ, ಸಂಗೀತ, ತಾಳಮದ್ದಲೆ, ಛಾಯಾಚಿತ್ರ ಇತ್ಯಾದಿ ಆಸಕ್ತಿಯ ಕ್ಷೇತ್ರಗಳು. ಇವರು, ೨೦೧೫-೨೦೧೭ ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿದ್ದರು. ಈಗ ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಕೆರೆಕೋಣದ ಮ್ಯಾನೇಜಿಂಗ್ ಟ್ರಸ್ಟಿ,, ಚಿಂತನ ಉತ್ತರ ಕನ್ನಡದ ಕಾರ್ಯಕಾರಿ ಸಮಿತಿ ಸದಸ್ಯರು, ಬಂಡಾಯ ಪ್ರಕಾಶನ ಸಲಹಾ ಮಂಡಳಿ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ, ಸಂಕಲನಗಳಲ್ಲಿ ಪ್ರಕಟವಾಗಿವೆ.

ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಬನಶಂಕರಮ್ಮ ಕೆ.ಟಿ. ಅವರು ಅನುವಾದಕಿ, ಕಥೆಗಾರ್ತಿ ಆಗಿದ್ದರು. ಅವರು 1930 ಜನವರಿ 13 ರಂದು ಜನಿಸಿದವರು. ಅವರ `ನಂಬಿ ನಡೆದರೆ ಭಯವಿಲ್ಲ’ ಕನ್ನಡ ಅನುವಾದಿತ ಕೃತಿ. ಚಾಮರಾಜಪೇಟೆಯ ಅಶೋಕ ಶಿಶುವಿಹಾರದ ಸಂಸ್ಥಾಪಕರು, ಅಖಿಲ ಕರ್ನಾಟಕ ಮಕ್ಕಳ ಕೂಟದ ಮಾಜಿ ಉಪಾಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘದ ಮಾಜಿ ಉಪಾಧ್ಯಕ್ಷರು ಆಗಿದರು. ಸರಸ್ವತಿ ಪತ್ರಿಕೆಯ ಮಕ್ಕಳ ಬಾವುಟದ ಪ್ರತ್ಯೇಕ ಸಂಚಿಕೆಯ ಸಂಪಾದಕರಾಗಿ 10 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಆರ್. ಕಲ್ಯಾಣಮ್ಮನವರ ಸಣ್ಣಕಥೆಗಳನ್ನು ಸಂಪಾದಿಸಿದ್ದು 2012 ತಮ್ಮ ೮೨ ನೇ ವಯಸ್ಸಿನಲ್ಲಿ ನಿಧನರಾದರು. ಅವರ ನೆನಪಿನಲ್ಲಿ ಮಾಧವಿ ಮೇಡಂ ರಿಗೆ ಸಾಹಿತ್ಯ ಸಾಧನೆಯ ಪ್ರಶಸ್ತಿ ಬಂದಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

Leave a Reply

Your email address will not be published.


*