ದಾಂಡೇಲಿ: ನಗರದಲ್ಲಿ ಕೊರೊನಾ ಸೋಂಕಿಗೊಳಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಈರ್ವರೂ ಸಹ ಗುಣ ಮುಖರಾಗಿ ಮನೆ ಸೇರಿದ್ದು, ಸದ್ಯಕ್ಕೆ ದಾಂಡೇಲಿ ಕೊರೊನಾದಿಂದ ಮುಕ್ತವಾಗಿದೆ ಎಂದು ಹೇಳಬಹುದಾಗಿದೆ.
ಹೊರ ರಾಜ್ಯಗಳಿಗೆ ಹೋಗಿ ಬಂದ ಹಳೆದಾಂಡೇಲಿಯ 24 ವರ್ಷದ ಲಾರಿ ಚಾಲಕ ನೋರ್ವನಿಗೆ ಕೊರೊನಾ ಪಾಸಿಟಿವ್ ಧೃಡವಾಗಿ ಆತನನ್ನು ಮೇ 20 ವರಂದು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದ ನಂತರ ಮನೆಯೊಳಗಡೆಯೇ ಇದ್ದ ಗಾಂಧೀನಗರದ 36 ವರ್ಷದ ಎಲೆಕ್ಟ್ರಿಶಿಯನ್ ಓರ್ವನಿಗೂ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆತನನ್ನೂ ಸಹ ಮೇ 29 ರಂದು ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡನೆಯ ಸೋಂಕಿತ ಎಲೆಕ್ಟ್ರಿಶಿಯನ್ನ ಎರಡನೆಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಮೇ 4 ರಂದೇ ಆತನನ್ನು ಮರಳಿ ದಾಂಡೇಲಿಗೆ ಕಳುಸಲಾಗಿತ್ತು. ತದನಂತರ ಮೇ 6 ರಂದು ಮೊದಲ ಸೋಂಕಿತ ಲಾರಿ ಚಾಲಕನೂ ಸಹ ಗುಣ ಮುಖನಾಗಿದ್ದು ಮೇ 6 ರಂದು ಆತನ್ನೂ ಸಹ ದಾಂಡೇಲಿಗೆ ಕಳುಹಿಸಲಾಗಿದೆ.
ಇದರ ಜೊತೆಗೆ ಹೊರ ರಾಜ್ಯದಿಂದ ಬಂದು ಕ್ವಾರೆಂಟೈನ್ಲ್ಲಿದ್ದವರು ಹಾಗೂ ಈ ಎರಡೂ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರೂ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಜನರ ಗಂಟಲು ದ್ರವದ ಪರೀಕ್ಷಾ ವರದಿ ಕೂಡಾ ನೆಗೆಟಿವ್ ಎಂದು ಬಂದಿದೆ. ಇನ್ನೆರಡು ವರದಿಗಳು ಬರುವುದು ಬಾಕಿಯಿದ್ದರೂ ವಿಳಂಬವಾಗಿರುವುದನ್ನು ನೋಡಿದರೆ ಭಾಗಶಹ ಅವೂ ಸಹ ನೆಗೆಟಿವ್ ಬರುತ್ತವೆ ಎಂಬ ವಿಶ್ವಾಸ ಆರೋಗ್ಯ ಇಲಾಖೆಯವರದ್ದು. ಇನ್ನು ಕೆಲವರು ಮಾತ್ರ ಕ್ವಾರೆಂಟೈನ್ನಲ್ಲಿದ್ದಾರಾದರೂ ಅಂತಹ ಭಯ ಕಾಣುತ್ತಿಲ್ಲ.

ದಾಂಡೇಲಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಆರಂಭದಿಂದಲೇ ಹಲವು ಮುಂಜಾಗೃತಾ ಕ್ರಮಗಳನ್ನು ತಹಶಿಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ದಾಂಡೇಲಿ ವೈದ್ಯಾಧಿಕಾರಿ ರಾಜೇಶ ಪ್ರಸಾದ ಹಾಗೂ ಎಲ್ಲ ವೈದ್ಯರು ಹಾಗೂ ಅಧಿಕಾರಿಗಳು, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಕೈಗೊಂಡಿದ್ದರು. ಸಾರ್ವಜನಿಕರೂ ಸಹ ಸಹಕರಿಸಿದ್ದರು. ಇದೆಲ್ಲದರ ಭಾಗವಾಗಿ ದಾಂಡೇಲಿಗೆ ಕೊರೊನಾ ಬಂದಿಲ್ಲವಾಗಿತ್ತಾದರೂ ಈ ಎರಡು ಸೋಂಕುಗಳು ದೃಡ ಪಟ್ಟಿದ್ದರಿಂದ ದಾಂಡೇಲಿಯ ಜನರು ಆತಂಕಕ್ಕೊಳಗಾಗಿದ್ದರು. ಇದೀಗ ಆ ಎರಡೂ ಸೋಂಕಿತರು ಗುಣಮುಖರಾಗಿ ಮನೆ ಸೇರಿರುವುದರಿಂದ ಎಲ್ಲರೂ ಕೂಡಾ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜೊತೆಗೆ ದಾಂಡೇಲಿ ಸದ್ಯಕ್ಕೆ ಕೊರೊನಾ ಮುಕ್ತ ನಗರ ಎಂದು ಹೇಳಬಹುದಾಗಿದೆ.
ಕೆಲವರು ನಿಯಮ ಪಾಲಿಸುತ್ತಿಲ್ಲ: ಸರಕಾರ ಲಾಕ್‍ಡೌನ್ ಸಡಿಲಿಕೆ ಮಾಡಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ಕೆಲ ನಿಯಮಗಳನ್ನು ಪಾಲಿಸದೇ ಅವನುಚಿತವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳೀ ಬರುತ್ತದೆ. ಮಾರುಕಟ್ಟೆಗಳೆಲ್ಲ ತೆರೆದಿದ್ದು, ಕೆಲವೆಡೆ ಅಂಗಡಿ ಮಳಿಗಗಳ ಎದುರು ಸಾಮಾಜಿಕ ಅಂತರದ ನಿಯಮ ಕಾದುಕೊಳ್ಳುತ್ತಿಲ್ಲ. ಕೆಲವರು ಮಾಸ್ಕ ಧರಿಸುತ್ತಿಲ್ಲ ಎಂದೆಲ್ಲ ಕೇಳಿ ಬರುತ್ತಿದೆ. ನಗರದ ಹಾಗೂ ನಮ್ಮ ಆರೋಗ್ಯ ದೃಷ್ಠಿಯಿಂದ ಎಲ್ಲರೂ ಸಹ ಸರಕಾರ ಮತ್ತು ಆರೋಗ್ಯ ಇಲಾಖೆಯ ನಿಯಮ ಪಾಲಿಸಬೇಕು ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿದ್ದಾರೆ.
ದಾಂಡೇಲಿಯಲ್ಲಿ ದೃಢಪಟ್ಟಿದ್ದ ಇಬ್ಬರು ಸೋಂಕಿತರು ಈಗ ಗುಣಮುಖರಾಗಿ ಬಂದಿದ್ದಾರೆ. ಸದಸ್ಯ ದಾಂಡೇಲಿಯಲ್ಲಿ ಕೊರೊನಾ ಸೋಂಕಿತರಿಲ್ಲ. ಇದು ಖುಶಿಯ ವಿಚಾರ. ಹಾಗೆಂದು ಯಾರೂ ಕೂಡಾ ನಿರ್ಲಕ್ಷ ಮಾಡುವಂತಿಲ್ಲ. ಎಲ್ಲರೂ ಸಹ ಸರಕಾರದ ಹಾಗೂ ಆರೋಗ್ಯ ಇಲಾಖೆರಯ ನಿಯಮಗಳನ್ನು ಪಾಲಿಸಲೇ ಬೇಕು. ನಮ್ಮ ಜಾಗೃತಿಯೊಂದಿಗೆ ಕೊರೊನಾ ಜೊತೆಗೇ ಬದುಕುವುದನ್ನು ಕಲಿಯುವುದನ್ನು ನಾವು ಕಲಿಯಬೇಕಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ತಿಳಿಸಿದ್ದಾರೆ.
Be the first to comment