ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ

ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ ಬಳಕೆಯಾಗದೇ, ಮರದಲ್ಲಿ ಚಂದದಿ ನಳ ನಳಿಸಿ ಮತ್ತೆ ಭೂವಿಗೆ ಬುದ್ದು ಬಾಡಿ ಹೋಗುವ ಹೂವಿನ ಮರವೊಂದಿದೆ. ಅದನ್ನೇ ಗುಲ್‍ಮೋಹರ್ ಟ್ರೀ ಎಂದು ಕರೆಯುತ್ತಾರೆ. ದಾಂಡೇಲಿಯ ಡಿ.ಎಪ್.ಎ. ಆವರಣ ಹಾಗೂ ಆಟದ ಮೈದಾನದ ಸುತ್ತ ಸುಂದರ ಹೂ ಬಿಡುವ ಬೃಹತ್ ಗಾಂತ್ರದ ಮರಗಳೇ ಸಾಕಷ್ಟು ಕಾಣಸಿಗುತ್ತವೆ. ಈ ಮರಗಳಿಗೆ ಬೇರೇನೂ ಫಲ ಬರುವುದಿಲ್ಲ. ಹಾಗೆಂದು ಬೆಲೆ ಬಾಳುವ ಮರವೂ ಅಲ್ಲ. ಬಹುಶಹ ಅಂದು ರಸ್ತೆ ಹಾಗೂ ಕ್ರೀಡಾಂಗಣ ನಿರ್ಮಿಸುವವರು ಸುತ್ತಲೂ ಅಲಂಕಾರಕ್ಕಾಗಿಯೇ ಈ ಹೂಗಿಡ ನೆಟ್ಟಿರಬಹುದು.

ರೂಢಿಯಲ್ಲಿ ಗುಲ್ ಮೋಹರ್ (ಹಿಂದಿ ಪದ) ಎಂದು ಕರೆಯಲ್ಪಡುವ ಇದು ಹೆಚ್ಚಾಗಿ ಸಂಕೇಶ್ವರದಲ್ಲಿ ಕಂಡು ಬರುವುದರಿಂದ ಸಂಕೇಶ್ವರ ಮರ ಎನ್ನುವವರೂ ಇದ್ದಾರೆ. ಮೇ ತಿಂಗಳಲ್ಲಿ ಮಾತ್ರ ಹೂ ಬಿಡುವುದರಿಂದ ಇಂಗ್ಲೀಷ್‍ನಲ್ಲಿ ಇದನ್ನು ಮೇ ಪ್ಲವರ್ ಟ್ರೀ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಡಿಲೊನಿಯಾ ರೇಕಿಯಾ.

ಇದು ಬೇಸಿಗೆಯ ಸಮಯ. ಈ ಉರಿ ಬಿಸಲಿನಲ್ಲಿಯೂ ಈ ಗುಲ್‍ಮೋಹರ ಗಿಡ ತನ್ನ ಟೊಂಗೆ ಟೊಂಗೆಯ ತುಂಬೆಲ್ಲಾ ಹೂ ಚೆಲ್ಲಿಕೊಂಡು ನಿಂತಿದೆ. ಮಳೆಗಾಲ ಪ್ರಾರಂಭವಾಗುವ ಸಮಯ ಹತ್ತಿರ ಬಂದಿರುವುದರಿಂದ ಈ ಸಮಯದಲ್ಲಿ ಬೀಜ ಪ್ರಸರಣಕ್ಕೆ ಅನುಕೂಲವಾಗಲೆಂದು ಕೆಲ ಮರದ ತಳಿಗಳು ಈ ಸಂದರ್ಭದಲ್ಲಿ ಹೂ ಬಿಡುತ್ತವೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ವಿನಯ ಭಟ್ಟರವರು.
ಇದು 18 ನೇ ಶತಮಾನದ ಸುಮಾರಿಗೆ ವಿದೇಶದಿಂದ ಭಾರತಕ್ಕೆ ತಂದ ಗಿಡವಾಗಿದ್ದು, ಡಿ.ಎಪ್.ಎ. ಕಂಪನಿಯ ಮಾಲಕರು ಇದನ್ನು ಮುಂಬೈನಿಂದ ಇಲ್ಲಿಗೆ ತಂದು ನೆಟ್ಟರು ಎನ್ನಲಾಗಿದೆ. ಹೂ ಬಿಟ್ಟಿರುವ ಈ ಮರವನ್ನು ದೂರದಿಂದ ಒಟ್ಟಂದದಲ್ಲಿ ನೋಡಿದರೆ ಇದೊಂದು ರೀತಿಯ ಪುಷ್ಪಗುಚ್ಚದಂತೆ ಕಾಣುತ್ತದೆ. ಎಲ್ಲಿಯೂ ಮರದ ಟೊಂಗೆಯಾಗಲೀ, ಎಲೆಯಾಗಲೀ ಕಾಣುವುದಿಲ್ಲ. ಮರದ ತುಂಬೆಲ್ಲಾ ಹೂವೋ ಹೂವು. ಒಂದೊಂದು ಮರದಲ್ಲಿ ಒಂದೊಂದು ಬಣ್ಣದ ಹೂವುಗಳು. ಕೆಂಪು, ನಸುಗೆಂಪು, ಕಡುಗೆಂಪು, ಹಳದಿ ಸೇರಿದಂತೆ ಹಲವು ಬಣ್ಣಗಳ ಹೂ ಬಿಡುವ ಈ ಮರ ಒಂದು ರೀತಿಯ ಬಣ್ಣ ಬಣ್ಣದ ಹೂವಿನ ಮಾಲೆ ಮುಡಿದುಕೊಂಡಿರುವ ಹೂ ಬಾಲೆಯಂತೆ ಕಾಣುತ್ತದೆ. ನಿಜಕ್ಕೂ ಈ ಹೂ ಮರ ನೋಡುವುದೇ ಒಂದು ಆನಂದ. ಆಹ್ಲಾದ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*