ಈ ಕ್ಷಣದ ಸುದ್ದಿ

ಪಣಸೋಲಿ ನಾಲಾದಿಂದ ಉಸುಕು ತೆಗೆದ ಪ್ರಕರಣ : ಅರಣ್ಯ ಸಿಬ್ಬಂದಿ ಮತ್ತು ಜನರ ನಡುವೆ ಮಾರಾಮಾರಿ

ಜೋಯಿಡಾ: ಮನೆಕಟ್ಟಲೆಂದು ನಾಲಾದ ಉಸುಕನ್ನು ತೆಗೆದು ಟ್ರ್ಯಾಕ್ಟರ್‌‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ವ್ಯಕ್ತಿಗಳಿಬ್ಬರ ನಡುವೆ ಮಾರಾಮಮಾರಿ ನಡೆದ ಘಟನೆ ಜೋಯಿಡಾ ತಾಲೂಕಿನ ವಿರ್ನೋಲಿ ಅರಣ್ಯ ವಲಯದ ಪಣಸೋಲಿಯಲ್ಲಿ ಸೋಮವಾರ ನಡೆದಿದೆ. ಈ ಘಟನೆ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು- ಪ್ರತಿದೂರು ಪ್ರಕರಣ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಡ್ಯಾಂ ನಲ್ಲಿ ಬಿದ್ದು ಸಾವಿಗೀಡಾದ ಪ್ರಕರಣ: ಮೃತ ದೇಹ ಇಟ್ಟು ಪ್ರತಿಭಟನೆ: ಪರಿಹಾರದ ಭರವಸೆ

ದಾಂಡೇಲಿ: ತಾಲೂಕಿನ ಬೊಮ್ನಳ್ಳಿ ಆಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನ ಮೃತದೇಹ ರವಿವಾರ ಮುಂಜಾನೆ ದೊರೆತಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿ ಬೊಮ್ನಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ಹಿಮ್ರಾನ್ ಕೆ.ಎಮ್. ಅಬ್ದುಲ್ಲಾ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು […]

ಈ ಕ್ಷಣದ ಸುದ್ದಿ

ಮೂರು ದಿನಗಳ ನಂತರ ಜಲಾಶಯದಲ್ಲಿ ತೇಲಿಬಂದ ಕಾರ್ಮಿಕನ ಶವ

ದಾಂಡೇಲಿ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಡ್ಯಾಂ ನಿಂದ ಕೆಳಗಡೆ ಬಿದ್ದ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಬೊಮ್ನಳ್ಳಿಯ ಸುಭಾಶ ಬಸಪ್ಪ ಹರಿಜನ್ ಎಂಬ ಹಂಗಾಮಿ ಕಾರ್ಮಿಕನ ಮೃತ ದೇಹ ಘಟನೆ ನಡೆದ ಮೂರು ದಿನಗಳ ನಂತರ ರವಿವಾರ ಮುಂಜಾನೆ ಜಲಾಶಯದ ನೀರಿನಿಂದ ಮೇಲಕ್ಕೆ ತೇಲಿ ಬಂದಿದೆ. ಸೆಪ್ಟಂಬರ 25 […]

ಈ ಕ್ಷಣದ ಸುದ್ದಿ

ಲಿಂಗೈಖ್ಯರಾದ ಹಳಿಯಾಳದ ಆಧ್ಯಾತ್ಮ ಚಿಂತಕ ಎಮ್. ಎನ್. ತಳವಾರ : ಕೊರೊನಾಕ್ಕೆ ಪ್ರಾಣತೆತ್ತ ಶರಣ…

ಹಳಿಯಾಳ: ತಾಲೂಕಿನ ಆದ್ಯಾತ್ಮ ಚಿಂತಕರೆಂದೇ ಪರಿಚಿತರಾಗಿರುವ ಎಮ್.ಎನ್. ತಳವಾರವರು ಶನಿವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗಖ್ಯರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೂಲತಹ ಧಾರವಾಡದ ಉಪ್ಪಿನ ಬೆಳಗಾವಿಯವರಾಗಿದ್ದ ಮಾರುತಿ ನಿಂಗಪ್ಪ ತಳವಾರವರು ತಮ್ಮ ವೃತ್ತಿ ಬದುಕಿಗಾಗಿ ಹಳಿಯಾಳಕ್ಕೆ ಬಂದು ಇಲ್ಲಿಯೇ ನೆಲೆ ಕಂಡುಕೊಂಡವರು. ವೃತ್ತಿಯಲ್ಲಿ ಅಭಿಯಂತರರಾಗಿದ್ದರೂ (ಸಣ್ಣ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಹಂಗಾಮಿ ಕಾರ್ಮಿಕ !

ದಾಂಡೇಲಿ: ಬೊಮ್ನಳ್ಳಿ ಡ್ಯಾಂನಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಹಂಗಾಮಿ ಕಾರ್ಮಿಕನೋರ್ವ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೊಮ್ನಳ್ಳಿಯ ಸುಭಾಷ ಬಸಪ್ಪ ಹರಿಜನ್ (35) ಎಂಬಾತನೇ ಈ ದುರಂತಕ್ಕೊಳಗಾಗಿರುವ ದುರ್ದೈವಿಯಾಗಿದ್ದು, ಈ ಬಗ್ಗೆ ಅವರ ಸಹೋದರ ರಮೇಶ ಹರಿಜನ್‍ರವರು ಮುಂಜಾವುಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ […]

ಈ ಕ್ಷಣದ ಸುದ್ದಿ

ಮಾಸ್ಕ್ ಧರಿಸದ ಕಾರಣ… ನಾಲ್ಕು ಲಕ್ಷ ರು. ದಂಡ ಭರಣ…

ಕಾರವಾರ : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಅರೋಗ್ಯ ಇಲಾಖೆಯ ನಿಯಮಾವಳಿಯಂತೆ ಮಾಸ್ಕ ಧರಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದ ಈವರೆಗೆ ಸರಿ ಸುಮಾರು ನಾಲ್ಕು ಲಕ್ಷ ರು. ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ಎಸ್ಟೆಷ್ಟು ನೋಡಿ… ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ 16 ಸಾವಿನ ಜೊತೆ ಸಾವಿರದ ಗಡಿ ದಾಟಿದ ಕೊರೊನಾ

ಇಡೀ ವೀಶ್ವವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಾಣು ದಾಂಡೇಲಿಯಲ್ಲಿ ಒಂದು ಸಾವಿರದ ಗಡಿ ದಾಟಿದ್ದು, ಇಲ್ಲಿಯವರೆಗೆ 16 ಜನರನ್ನು ಬಲಿ ಪಡೆದುಕೊಂಡಿದೆ. ದಾಂಡೇಲಿಯಲ್ಲಿ ಶನಿವಾರದವರೆಗೆ 1009 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಈಗ ಸದ್ಯ 74 ಜನರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 949 ಜನರು ಗುಣಮುಖರಾಗಿ ಮನೆ […]

ಈ ಕ್ಷಣದ ಸುದ್ದಿ

ಬೆಟ್ಕುಳಿ ರಾಜು ನಾಯ್ಕರಿಗೆ ಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ…

ʼಶಕ್ತಿಶಾಲಿಗಳಿಗಾಗಿ, ಶ್ರದ್ಧಾವಂತರಾಗಿ ಆಗ ಎಲ್ಲವು ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ…ʼ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದವರು ಕುಮಟಾ ತಾಲೂಕಿನ ಮಿರ್ಜಾನ ಪ್ರೌಢಶಾಲೆಯ ಶಿಕ್ಷಕ ರಾಜು ರಾಮನಾಯ್ಕರು. ಮೂಲತ: ಬೆಟ್ಕುಳಿಯವರಾದ ಇವರ ತಂದೆ […]

ಈ ಕ್ಷಣದ ಸುದ್ದಿ

ಭಾಸ್ಕರ ನಾಯ್ಕರ ಮುಡಿಗೆ ರಾಜ್ಯ ಉತ್ತಮ ಶಿಕ್ಷಕ ಪುರಸ್ಕಾರದ ಗರಿ

ವಿದ್ಯೆಯೊಂದಿಗೆ, ವಿನಯ ಸಂಪತ್ತಿನೊಂದಿಗೆ, ಸಜ್ಜನರ ಸಹವಾಸ ದೊಂದಿಗೆ, ಸದಾ ಕ್ರಿಯಾಶೀಲತೆಯೊಂದಿಗೆ ವೃತ್ತಿಯ ಘನತೆ, ಗೌರವ ಹೆಚ್ಚಿಸಿದವರು ಯಲ್ಲಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ ನಾಯ್ಕರು. ಈ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಮೂಲತಃ ಕುಮಟಾ ತಾಲೂಕಿನ ಅಘನಾಶಿನಿ ಕೋಟಿಮನೆ ಕುಟುಂಬದಲ್ಲಿ ತಂದೆ ಗಣಪತಿ ನಾಯ್ಕ, ತಾಯಿ […]

ಫೀಚರ್

ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ ಹೆಚ್ಚಿದ ಕೊರೊನಾ …

ಕಳೆದೆರಡು ದಿನಗಳಿಂದ ದಾಂಡೇಲಿಯಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಶುಕ್ರವಾರ 13 ಜನರಲ್ಲಿ ಸೋಂಕು ದೃದ್ಧವಾಗಿದೆ. ಈವರನ್ಬು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.