ಉತ್ತರ ಕನ್ನಡ

ಸಮಾಜ ಸೇವೆಗೆ ಮತ್ತೊಂದು ಹೆಸರು ಅಗ್ರಹಾರದ ಸಭಾಹಿತ ಕುಟುಂಬ

ಲಾಭಕ್ಕಿಂತಲೂ ಕರ್ತವ್ಯ ಮುಖ್ಯ,  ಜಯಕ್ಕಿಂತಲೂ ಸಾಧನೆ ಮುಖ್ಯ, ಫಲಕ್ಕಿಂತಲೂ ಶ್ರಮಿಸುವುದು ಮುಖ್ಯ,  ಮಾತಿಗಿಂತಲೂ ಕೃತಿ ಮುಖ್ಯ,  ಎಂಬ ವೇದದ ಈ ಸಾಲುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಡು ಬಂದವರು ಸಭಾಹಿತರು… ಡಾ ಜಿ.ಜಿ. ಸಭಾಹಿತ….. ಗಣಪತಿಗೆ ಗಣಪತಿಯೇ  ಸಾಟಿ. ನಾಮ ಬಲದ ಮೂಲಕ ಹೆಮ್ಮೆಪಡುವ ಅಪರೂಪದ ವ್ಯಕ್ತಿತ್ವ ಹೊಂದಿದವರು ಅಗ್ರಹಾರದ […]

ಈ ಕ್ಷಣದ ಸುದ್ದಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ನಾರಾಯಣ ನಾಯಕ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಯಲ್ಲಾಪುರದ ನಾರಾಯಣ ನಾಯಕ, ಹಿರೇಗುತ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿರಸಿ ಶೈಕ್ಷಣಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ನಾರಾಯಣ ನಾಯಕ […]

ಈ ಕ್ಷಣದ ಸುದ್ದಿ

ಜೋಯಿಡಾ ಶಿಕ್ಷಕರ ಚುನಾವಣೆ: ಎಲ್ಲ ಸ್ಥಾನ ಗೆದ್ದುಕೊಂಡ ಯಶವಂತ ನಾಯ್ಕ ತಂಡ

ಜೋಯಿಡಾ: ಜೋಯಿಡಾ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಯಶವಂತ ನಾಯ್ಕ ನೇತೃತ್ವದ ತಂಡ ಎಲ್ಲಾ ಸ್ಥಾನಗಳನ್ನೂ ಗೆದ್ದುಕೊಳ್ಳುವ ಮೂಲಕ ಅಭೂತಪೂರ್ವ ಜಯ ಸಾಧಿಸಿದೆ. ಜೊಯಿಡಾ ತಾಲೂಕಿನಲ್ಲಿ ಒಟ್ಟೂ 242 ಶಿಕ್ಷಕ ಮತದಾರರಿದ್ದರು. ಅವರಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ 224 ಶಿಕ್ಷಕರು ಮತಚಲಾಯಿಸಿದ್ದರು. ಚಲಾವಣೆಯಾದ 242 ಮತಗಳಲ್ಲಿ […]

ಉತ್ತರ ಕನ್ನಡ

ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶಿವರಾಂ ಹೆಬ್ಬಾರ: ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ

ಶಿರಸಿ : ಜಿಲ್ಲಾ ಮದ್ಯವರ್ತಿ ಬ್ಯಾಂಕ್ ಎಂದೇ ಕರೆಯಲ್ಪಡುವ ಕೆ.ಡಿ.ಸಿ.ಸಿ. ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಸಚಿವ ಶಿವರಾಂ ಹೆಬ್ಬಾರ್, ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆರಂಭದಿಂದಲೂ ಅಂದರೆ ನಿರ್ದೇಶಕರ ಆಯ್ಕೆಯ ಸಂದರ್ಭದಿಂದಲೂ ಈ ಬಾರಿ ಈ ಬ್ಯಾಂಕಿನ ಚುನಾವಣೆ ತುರುಸಿನಿಂದ ಕೂಡಿತ್ತು. ಬ್ಯಾಕಿನ ವಿವಿಧ ಕ್ಷೇತ್ರಗಳ […]

ಈ ಕ್ಷಣದ ಸುದ್ದಿ

ಬುಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ ಇನ್ನಿಲ್ಲ

ಹಳಿಯಾಳ ತಾಲೂಕಿನ ಹಿರಿಯ ಹಾಗೂ ಬಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ (79) ರವಿವಾರ ಮುಂಜಾನೆ ಕೊನೆಯುಸಿರೆಳೆದರು.ಸುಮಾರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕನ್ನಡ, ಇಂಗ್ಲೀಷ, ಮರಾಟಿ ಪತ್ರಿಕೆಗಳಿಗೆ ಸುದ್ದಿ ನೀಡುತ್ತಿದ್ದರು. ಮರಾಠಿ ಯಲ್ಲಿ ಅಕ್ಷರಾಭ್ಯಾಸ ಮಾಡಿದ್ದರಾದರೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.ತಾಲೂಕಿನ ರಾಜಕೀಯ, […]

ಈ ಕ್ಷಣದ ಸುದ್ದಿ

ಬೆಂಗಳೂರು ವಾಹನದಲ್ಲಿ ಅಕ್ರಮ ಗೋವಾ ಸರಾಯಿ : ರಾಜಕೀಯ ಪ್ರಬಾವಕ್ಕೆ ಮಣಿದು ಚಾಲಕನನ್ನು ಬದಲಾಯಿಸಿ ಆರೋಪಿಗಳಿಗೆ ಸಹಕರಿಸಿದ ಅಬಕಾರಿ ಅಧಿಕಾರಿ…!

ಅನಮೋಡ: ಗೋವಾದಿಂದ ಅಕ್ರಮ ಮದ್ಯ ತುಂಬಿಕೊಂಡು ಕರ್ನಾಟಕದೆಡೆಗೆ ಬರುತ್ತಿದ್ದ ಬೆಂಗಳೂರಿನ ವಾಹನ ವಶಪಡಿಸಿಕೊಂಡ ಅನಮೋಡ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು, ಬೆಂಗಳೂರು ಸಾಹುಕಾರನಿಗೆ ಸಹಕರಿಸಲೋಸುಗ ಅಸಲಿ ಆರೋಪಿಗಳನ್ನು ಬಿಟ್ಟು, ವಾಹನ ಚಾಲಕನನ್ನೇ ಬದಲಾಯಿಸಿ ಪ್ರಕರಣ ದಾಖಲಿಸಿರುವ ಗೋಲಮಾಲ್ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಈ ಘಟನೆ ನಡೆದಿದೆ. ಬೆಂಗಳೂರಿನ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಡ್ಯಾಂ ನಲ್ಲಿ ಬಿದ್ದು ಸಾವಿಗೀಡಾದ ಪ್ರಕರಣ: ಮೃತ ದೇಹ ಇಟ್ಟು ಪ್ರತಿಭಟನೆ: ಪರಿಹಾರದ ಭರವಸೆ

ದಾಂಡೇಲಿ: ತಾಲೂಕಿನ ಬೊಮ್ನಳ್ಳಿ ಆಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನ ಮೃತದೇಹ ರವಿವಾರ ಮುಂಜಾನೆ ದೊರೆತಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿ ಬೊಮ್ನಳ್ಳಿಯ ಗ್ರಾ.ಪಂ. ಮಾಜಿ ಸದಸ್ಯ ಹಿಮ್ರಾನ್ ಕೆ.ಎಮ್. ಅಬ್ದುಲ್ಲಾ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು […]

ಈ ಕ್ಷಣದ ಸುದ್ದಿ

ಲಿಂಗೈಖ್ಯರಾದ ಹಳಿಯಾಳದ ಆಧ್ಯಾತ್ಮ ಚಿಂತಕ ಎಮ್. ಎನ್. ತಳವಾರ : ಕೊರೊನಾಕ್ಕೆ ಪ್ರಾಣತೆತ್ತ ಶರಣ…

ಹಳಿಯಾಳ: ತಾಲೂಕಿನ ಆದ್ಯಾತ್ಮ ಚಿಂತಕರೆಂದೇ ಪರಿಚಿತರಾಗಿರುವ ಎಮ್.ಎನ್. ತಳವಾರವರು ಶನಿವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗಖ್ಯರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೂಲತಹ ಧಾರವಾಡದ ಉಪ್ಪಿನ ಬೆಳಗಾವಿಯವರಾಗಿದ್ದ ಮಾರುತಿ ನಿಂಗಪ್ಪ ತಳವಾರವರು ತಮ್ಮ ವೃತ್ತಿ ಬದುಕಿಗಾಗಿ ಹಳಿಯಾಳಕ್ಕೆ ಬಂದು ಇಲ್ಲಿಯೇ ನೆಲೆ ಕಂಡುಕೊಂಡವರು. ವೃತ್ತಿಯಲ್ಲಿ ಅಭಿಯಂತರರಾಗಿದ್ದರೂ (ಸಣ್ಣ […]

ಈ ಕ್ಷಣದ ಸುದ್ದಿ

ಮಾಸ್ಕ್ ಧರಿಸದ ಕಾರಣ… ನಾಲ್ಕು ಲಕ್ಷ ರು. ದಂಡ ಭರಣ…

ಕಾರವಾರ : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಅರೋಗ್ಯ ಇಲಾಖೆಯ ನಿಯಮಾವಳಿಯಂತೆ ಮಾಸ್ಕ ಧರಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ನಿಂದ ಈವರೆಗೆ ಸರಿ ಸುಮಾರು ನಾಲ್ಕು ಲಕ್ಷ ರು. ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲೆಲ್ಲಿ ಎಸ್ಟೆಷ್ಟು ನೋಡಿ… ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ 2000 ದಾಟಿದ ಕೊರೊನಾ: ಗುಣಮುಖರಾಗಿದ್ದು 1268 ಜನ !!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 120 ಜನರಲ್ಲಿ ಸೋಂಕು ದೃಢವಾಗಿದ್ದು, ಇಲ್ಲಿಯವರೆಗಿನ ಜಿಲ್ಲೆಯ ಸೋಂಕಿತರ ಸಂಖ್ಯೆ 2027 ರಷ್ಟಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟೂ 2,027 ಜನರಲ್ಲಿ ಸೋಂಕು ದೃಢವಾಗಿದ್ದು, ಅವರಲ್ಲಿ 1268 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 650ಕ್ಕೂ ಹೆಚ್ಚು ಜನರಿಗೆ ಜಿಲ್ಲೆಯ ವಿವಿಧ ಕೋವಿಡ್‌ ಕೇರ್‌ […]