ಈ ಕ್ಷಣದ ಸುದ್ದಿ

ದಾಂಡೇಲಿಯ DYSP ಯಾಗಿ ಪ್ರಶಾಂತ ಸಿದ್ದನಗೌಡರ್…

ದಾಂಡೇಲಿ ಪೊಲೀಸ್ ಉಪ ವಿಭಾಗದ ಅರಕ್ಷಕ ಉಪ ಅಧೀಕ್ಷಕರಾಗಿ (DYSP) ಪ್ರಶಾಂತ ಸಿದ್ದನಗೌಡರ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಗುಪ್ತ ವಾರ್ತೆಯಲ್ಲಿ ಡಿ.ಎಸ್.ಪಿ. ಯಾಗಿದ್ದ ಸಿದ್ದನಗೌಡರವರು ದಾಂಡೇಲಿಯ ಡಿ.ವೈ.ಎಸ್.ಪಿ. ಯಾಗಿ ವರ್ಗಾವಣೆಗೊಂಡಿದ್ದಾರೆ. ರಾಜ್ಯ ಆರಕ್ಷಕ ಮಹಾ ನಿರ್ದೇಶಕರು ಬುಧವಾರ ಈ ಆದೇಶ ಹೊರಡಿಸಿದ್ದಾರೆ. ಹಿಂದೆ ಇವರು ಜೋಯಿಡಾ’ ಹಳಿಯಾಳ, ದಾಂಡೇಲಿಯಲ್ಲಿ CPI […]

ಈ ಕ್ಷಣದ ಸುದ್ದಿ

ಬುಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ ಇನ್ನಿಲ್ಲ

ಹಳಿಯಾಳ ತಾಲೂಕಿನ ಹಿರಿಯ ಹಾಗೂ ಬಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ (79) ರವಿವಾರ ಮುಂಜಾನೆ ಕೊನೆಯುಸಿರೆಳೆದರು.ಸುಮಾರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕನ್ನಡ, ಇಂಗ್ಲೀಷ, ಮರಾಟಿ ಪತ್ರಿಕೆಗಳಿಗೆ ಸುದ್ದಿ ನೀಡುತ್ತಿದ್ದರು. ಮರಾಠಿ ಯಲ್ಲಿ ಅಕ್ಷರಾಭ್ಯಾಸ ಮಾಡಿದ್ದರಾದರೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.ತಾಲೂಕಿನ ರಾಜಕೀಯ, […]

ಈ ಕ್ಷಣದ ಸುದ್ದಿ

ಸರ್ವೀಸಿಂಗ್ ಸೆಂಟರ್‌ನಲ್ಲಿ ಕೂಲಿಯಾಗಿದ್ದ ಬಾಲಕ ಈಗ ನಗರಸಭೆಯ ಉಪಾಧ್ಯಕ್ಷ

ದಾಂಡೇಲಿ ನಗರಸಭೆಯ ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಎಂಬ ಕ್ರಿಯಾಶೀಲ ಯುವಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸೇರಿದಂತೆ ದಾಂಡೇಲಿಯ ಜನತೆ ಇವರ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಂಡಿದೆ. ಅತ್ಯಂತ ಬಡತನದಿಂದ ಬಂದಿರುವ ಸಂಜಯ ನಂದ್ಯಾಳಕರ ಚಿಕ್ಕಂದಿನಿAದಲೇ ಮಹತ್ವಾಕಾಂಕ್ಷೆಯ ಕನಸು ಕಂಡವರು. ತಂದೆ ಕೂಲಿ ಕೆಲಸ ಮಾಡಿ ಸಂಸಾರದ ಹೊಣೆ ನಿರ್ವಹಿಸುತ್ತಿರುವಾಗಲೇ ಸಂಜಯ […]

ಈ ಕ್ಷಣದ ಸುದ್ದಿ

ದಾಂಡೇಲಿ ನಗರಸಭಾ ಅಧ್ಯಕ್ಷರಾಗಿ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ

ದಾಂಡೇಲಿ: ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಬಹುಮತದಿಂದ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ. ನಗರಸಭೆ ಸಭಾಭವನದಲ್ಲಿ ರವಿವಾರ ಸಂಜೆ 5 ಗಂಟೆಯಿಂದ 8.30 ರವರೆಗೂ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ರವರ ನೇತೃತ್ವದಲ್ಲಿ […]

ಈ ಕ್ಷಣದ ಸುದ್ದಿ

ಶೃದ್ಧಾ-ಭಕ್ತಿಯೊಂದಿಗೆ ಸರಳವಾಗಿ ನಡೆದ ಸತ್ಪುರುಷ ದಾಂಡೇಲಪ್ಪಾ ಜಾತ್ರೆ

ದಾಂಡೇಲಿ: ಪ್ರತಿ ವರ್ಷವೂ ವಿಜಯದಶಮಿಯಂದು ವಿಜ್ರಂಬಣೆಯಿಂದ ನಡೆಯಲ್ಪಡುತ್ತಿದ್ದ ಜಿಲ್ಲೆಯ ಅತೀ ದೊಡ್ಡ ಜಾತ್ರೆಗಳಲ್ಲೊಂದಾದ ದಾಂಡೇಲಿಯ ಜನರ ಆರಾಧ್ಯ ದೈವ “ಸತ್ಪುರುಷ ದಾಂಡೇಲಪ್ಪಾ ಜಾತ್ರೆ” ಈ ವರ್ಷ ಕೊರೊನಾ ಕಾರಣಕ್ಕೆ ಶೃದ್ಧಾ-ಭಕ್ತಿಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ರವಿವಾರ ನಸುಕಿನ ಜಾವ ದಾಂಡೇಲಪ್ಪನ ಪಾದುಕಾ ಪಲ್ಲಕ್ಕಿಯು ಪಾದುಕಾ ಸ್ಥಾನ ಮಿರಾಶಿಗಲ್ಲಿಯಿಂದ ಕೆರವಾಡಾ […]

ಈ ಕ್ಷಣದ ಸುದ್ದಿ

ದಾಂಡಿಯಾವೂ ಇಲ್ಲ: ದಾಂಡೇಲಪ್ಪ ಜಾತ್ರೆಯೂ ಇಲ್ಲ: ರಾಮಲೀಲಾ, ರಸಮಂಜರಿಯೂ ನಡೆಯುವುದಿಲ್ಲ..!

ದಾಂಡೇಲಿ: ಮಹಾಮಾರಿ ಕೊರೊನಾದ ಕರಿನೆರಳು ದಾಂಡೇಲಿ ದಸರಾದ ಮೇಲೂ ಬಿದ್ದಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ದಸರಾದ ಸಡಗರವಾಗಿದ್ದ ದಾಂಡಿಯಾ( ಕೋಲಾಟ) ಹಾಗೂ ಇಲ್ಲಿಯ ಗ್ರಾಮದೇವರೇ ಆಗಿರುವ ಸತ್ಪುರುಷ ದಾಂಡೇಲಪ್ಪ ಜಾತ್ರೆ ನಡೆಯುವುದು ಬಹುತೇಕ ಅನಿಶ್ಚಿತವಾಗಿದೆ. ಪ್ರತೀ ವಿಜಯದಶಮಿಯಂದು ದಾಂಡೇಲಿಯಲ್ಲಿ ದಾಂಡೇಲಪ್ಪ ಜಾತ್ರೆಯನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತ ಬಂದಿರುವುದು […]

ಈ ಕ್ಷಣದ ಸುದ್ದಿ

ವಿಚಾರಣೆಯ ಹೆಸರಲ್ಲಿ ದಲಿತನ ಎದೆಯ ಮೇಲೆ ಬೂಟುಗಾಲಿಟ್ಟು ಅಮಾನೀಯವಾಗಿ ಥಳಿಸಿದ ಅರಣ್ಯಾಧಿಕಾರಿಗಳು

ಜೋಯಿಡಾ ತಾಲೂಕಿನ ವಿರ್ನೋಲಿ ವಲಯ ಅರಣ್ಯ ವ್ಯಾಪ್ತಿಯ ಪಣಸೋಲಿಯಲ್ಲಿ ಉಸುಕು ದಾಸ್ತಾನು ಮಾಡಿದ ಪ್ರಕರಣಕ್ಕೆ ಸಂಬಂದಿಸಿ ಅರಣ್ಯ ಸಿಬ್ಬಂದಿಗಳು ವ್ಯಕ್ತಿಗಳೀರ್ವರ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಇದೇ ಅರಣ್ಯ ವಲಯದಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಜಿಂಕೆ ಬೇಟೆ ಮಾಡಿದ್ದಾರೆಂಬ ಆರೋಪದಡಿ ಬಂಧಿಸಲ್ಪಟ್ಟ ಆರೋಪಿಗಳನ್ನು […]

ಈ ಕ್ಷಣದ ಸುದ್ದಿ

ಬಂಧಿಸಿದ್ದು ನಾಲ್ವರನ್ನು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮೂವರನ್ನು: ಜಿಂಕೆ ಬೇಟೆ ಪ್ರಕರಣದಲ್ಲಿ ವಿರ್ನೋಲಿ ಅರಣ್ಯಾಧಿಕಾರಿಗಳ ಎಡಬಿಡಂಗಿತನ

ಜೋಯಿಡಾ: ಶ್ವಾನ ದಾಳಿಯಿಂದ ಸತ್ತ ಜಿಂಕೆಯ ಮಾಂಸ ಬಳಸಿದ ಪ್ರಕರಣಕ್ಕೆ ಸಂಬಂದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ವಿರ್ನೋಲಿ ಅರಣ್ಯಾಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಇದೀಗ ದಾಖಲೆ ಸಹಿತ ಬಯಲಾಗಿದೆ. ದಾಂಡೇಲಿಗೆ ಸಮೀಪದ ಜನತಾ ಕಾಲನಿಯಲ್ಲಿ ಸೆಪ್ಟಂಬರ 23 ರಂದು ಶ್ವಾನವೊಂದು ಜಿಂಕೆಯನ್ನು ಬೇಟೆಯಾಡಿ ಸಾಯಿಸಿತ್ತು. ಇದು ಗ್ರಾಮಸ್ಥರ ಕಣ್ಣೆದುರೇ ನಡೆದಿದ್ದು, ಗ್ರಾಮಸ್ಥರು ಜಿಂಕೆಯನ್ನು […]

ಈ ಕ್ಷಣದ ಸುದ್ದಿ

ಬೆಂಗಳೂರು ವಾಹನದಲ್ಲಿ ಅಕ್ರಮ ಗೋವಾ ಸರಾಯಿ : ರಾಜಕೀಯ ಪ್ರಬಾವಕ್ಕೆ ಮಣಿದು ಚಾಲಕನನ್ನು ಬದಲಾಯಿಸಿ ಆರೋಪಿಗಳಿಗೆ ಸಹಕರಿಸಿದ ಅಬಕಾರಿ ಅಧಿಕಾರಿ…!

ಅನಮೋಡ: ಗೋವಾದಿಂದ ಅಕ್ರಮ ಮದ್ಯ ತುಂಬಿಕೊಂಡು ಕರ್ನಾಟಕದೆಡೆಗೆ ಬರುತ್ತಿದ್ದ ಬೆಂಗಳೂರಿನ ವಾಹನ ವಶಪಡಿಸಿಕೊಂಡ ಅನಮೋಡ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು, ಬೆಂಗಳೂರು ಸಾಹುಕಾರನಿಗೆ ಸಹಕರಿಸಲೋಸುಗ ಅಸಲಿ ಆರೋಪಿಗಳನ್ನು ಬಿಟ್ಟು, ವಾಹನ ಚಾಲಕನನ್ನೇ ಬದಲಾಯಿಸಿ ಪ್ರಕರಣ ದಾಖಲಿಸಿರುವ ಗೋಲಮಾಲ್ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಈ ಘಟನೆ ನಡೆದಿದೆ. ಬೆಂಗಳೂರಿನ […]

ಈ ಕ್ಷಣದ ಸುದ್ದಿ

ಪಣಸೋಲಿ ನಾಲಾದಿಂದ ಉಸುಕು ತೆಗೆದ ಪ್ರಕರಣ : ಅರಣ್ಯ ಸಿಬ್ಬಂದಿ ಮತ್ತು ಜನರ ನಡುವೆ ಮಾರಾಮಾರಿ

ಜೋಯಿಡಾ: ಮನೆಕಟ್ಟಲೆಂದು ನಾಲಾದ ಉಸುಕನ್ನು ತೆಗೆದು ಟ್ರ್ಯಾಕ್ಟರ್‌‌ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ವ್ಯಕ್ತಿಗಳಿಬ್ಬರ ನಡುವೆ ಮಾರಾಮಮಾರಿ ನಡೆದ ಘಟನೆ ಜೋಯಿಡಾ ತಾಲೂಕಿನ ವಿರ್ನೋಲಿ ಅರಣ್ಯ ವಲಯದ ಪಣಸೋಲಿಯಲ್ಲಿ ಸೋಮವಾರ ನಡೆದಿದೆ. ಈ ಘಟನೆ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು- ಪ್ರತಿದೂರು ಪ್ರಕರಣ […]