ಈ ಕ್ಷಣದ ಸುದ್ದಿ

ಉತ್ತರ ಕನ್ನಡದ ಅನಂತನಾಗ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಹಿರಿಯ ನಟ ಅನಂತ್ ನಾಗ್ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ನಿರ್ಧಾರಿಸಲಾಗಿದೆ ಎಂದು ವಿವಿ ಕುಲಪತಿಗಳು ಮಾಹಿತಿ ನೀಡಿದ್ದಾರೆ. ನಟ ಅನಂತ್ ನಾಗ್, ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಯುಪಿಐ ಸಂಸ್ಥಾಪಕ ಶರತ್ ಶರ್ಮ ಅವರಿಗೆ ಡಾಕ್ಟರೇಟ್ ಪದವಿ […]

ಈ ಕ್ಷಣದ ಸುದ್ದಿ

ನಿರೀಕ್ಷೆಗೂ ಮುನ್ನವೇ ಭರ್ತಿಯಾದ ಬೊಮ್ನಳ್ಳಿ ಪಿಕ್ ಅಪ್ ಡ್ಯಾಂ

ದಾಂಡೇಲಿ ತಾಲ್ಲೂಕಿನ ಬೊಮ್ನಳ್ಳಿಯಲ್ಲಿರುವ ಬೊಮ್ನಳ್ಳಿ ಪಿಕಪ್ ಡ್ಯಾಂ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳಿಂದ ಮೂರು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಕಾಳಿ ನದಿಯ ಹರಿಯುವಿಕೆಯಲ್ಲಿ ಸೂಪಾ ಜಲಾಶಯದ ನಂತರ ಬರುವ ಎರಡನೆಯ ಜಲಾಶಯ ಇದಾಗಿದೆ. ಇದನ್ನ ಪಿಕಪ್ ಡ್ಯಾಂ ಎಂದೂ ಕರೆಯಲಾಗುತ್ತಿದ್ದು ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. […]

ಈ ಕ್ಷಣದ ಸುದ್ದಿ

ಪಣಸೋಲಿ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಜಂಗಲ್ ಸಫಾರಿ ಪ್ರವಾಸಿಗರ ಹರ್ಷ…

ಜೋಯಿಡಾದ ಪಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿ ನಡೆಸುತ್ತಿದ್ದ ಪ್ರವಾಸಿಗರಿಗೆ ಸೋಮವಾರ ಹುಲಿರಾಯ ಪ್ರತ್ಯಕ್ಷನಾಗಿದ್ದು, ಪ್ರವಾಸಿಗರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿಯಿಂದ ಕುಳಗಿ ಮಾರ್ಗವಾಗಿ ಪಣಸೋಲಿಗೆ ಸಾಗಿ ಅಲ್ಲಿಂದ ನಡೆಯಲ್ಪಡುವ ಜಂಗಲ್ ಸಫಾರಿಯ ಸಂದರ್ಭದಲ್ಲಿ ನವಿಲು, ಜಿಂಕೆ, ಕಾಡುಕೋಣದಂತಹ ಹಲವು ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆಗಾಗ […]

ಈ ಕ್ಷಣದ ಸುದ್ದಿ

ಗೇರುಸೊಪ್ಪದ ಮಕ್ಕಳ ಸ್ನೇಹಿ ಶಿಕ್ಷಕನ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ…

ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾದ, ಸುಜ್ಞಾನಿಯಾದ ಶಿಕ್ಷಕ ಮಾತ್ರ ತನ್ನ ಸುತ್ತ ಸ್ವರ್ಗಸದೃಶ ವಾತಾವರಣ ನಿರ್ಮಿಸಬಲ್ಲ. ಅವರೇ ನಿಜವಾದ ಮಾನ್ಯತೆಗೆ, ಅಭಿನಂದನೆಗೆ ಅಹ೯ರು. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಯಂತೆ ಕರ್ತವ್ಯವೇ ದೇವರೆಂದು ನಂಬಿ ಸದಾ ಮಕ್ಕಳ ಒಳಿತಿಗಾಗಿ ದುಡಿಯುವವರು ಗೇರುಸೊಪ್ಪೆ ಪ್ರೌಢಶಾಲೆ ಗಣಿತ ಶಿಕ್ಷಕ ಬಾಬು ಲಚ್ಮಯ್ಯ […]

ಈ ಕ್ಷಣದ ಸುದ್ದಿ

ಸರಕಾರಿ ಶಾಲೆಯಲ್ಲೇ ಓದಿ ಸಾಧನೆಯ ಶಿಖರವೇರಿದ ಗೇರಸೊಪ್ಪದ ಭೂಮಿಕಾ ನಾಯ್ಕ…. ಜಿಲ್ಲಾಧಿಕಾರಿಯಾಗುವ ಕನಸು ಈ ಕುವರಿಗೆ….

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಮೂಡಣಕ್ಕೆ ಸುಮಾರು ಹದಿನೆಂಟು ಮೈಲುಗಳಷ್ಟು ದೂರದಲ್ಲಿ ಶರಾವತಿ ನದಿಯ ದಂಡೆಯ ಮೇಲಿದೆ ಗೇರುಸೊಪ್ಪೆ. ಇಂದು ಗೇರುಸೊಪ್ಪೆ ಎಂದು ಕರೆಯಲಾಗುತ್ತಿರುವ ಊರು, ಹಿಂದೆ ನಗಿರೆ, ಕ್ಷೇಮಪುರ, ಭಲ್ಲಾತಕಿಪುರ, ಗೇರಸೊಪ್ಪೆ ಎಂದೆಲ್ಲ ಹೆಸರು ಪಡೆದಿತ್ತಂತೆ. ಇದು ನಗಿರಾ ರಾಜ್ಯದ ರಾಜಧಾನಿಯೂ ಆಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. […]

ಈ ಕ್ಷಣದ ಸುದ್ದಿ

ಬೊಮ್ಮಾಯಿ ಸಚಿವ ಸಂಪುಟದಲ್ಲಿ ಶಿವರಾಂ ಹೆಬ್ಬಾರರಿಗೆ ಒಲಿದ ಸಚಿವ ಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದು ಖಾತ್ರಿಯಾಗಿದ್ದು, ಈ ಬಗ್ಗೆ ಅವರೇ ತಮ್ಮ ಪೇಸ್ಬುಕ್, ವಾಟ್ಸೆಪ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಶಿವರಾಮ ಹೆಬ್ಬಾರವರು ಯಡಿಯೂರಪ್ಪ ಸರಕಾರದಲ್ಲಿ ಕಾರ್ಮಿಕ […]

ಈ ಕ್ಷಣದ ಸುದ್ದಿ

ವೃತ್ತಿ ಬದುಕಿನ ಸಾಧಕ, ಪ್ರಾಧ್ಯಾಪಕ ಹೊನ್ನಾವರದ ಡಾ. ಎಂ. ಆರ್. ನಾಯಕ

ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನಲ್ಲಿ ಬೆಳ್ಳಿ ತಾರೆಯಂತೆ ಮಿನುಗುತ್ತಾ, ಅಧ್ಯಯನಶೀಲ ಪ್ರವೃತ್ತಿಯಿಂದಾಗಿ ಹೊಸ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಾ ಒಬ್ಬ ಅತ್ಯುತ್ತಮ ಗುರುಗಳಾಗಿ, ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡವರು ಹೊನ್ನಾವರದ ಎಸ್. ಡಿ.ಎಂ. ಕಾಲೇಜಿನ ಡಾ. ಮಾರುತಿ ರಾಮ ನಾಯಕರವರು. ಮೂಲತ: ಅಂಕೋಲಾ ತಾಲೂಕಿನ ಹಿಚ್ಕಡದ ಸ್ವಾತಂತ್ರ್ಯ ಹೋರಾಟಗಾರ ರಾಮ ವೆಂಕಟ […]

ಈ ಕ್ಷಣದ ಸುದ್ದಿ

ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಆಕ್ಸಿಜನ್ ಪ್ಲಾಂಟ್: ಕೊರೊನಾತಂಕದಲ್ಲಿ ದಾಂಡೇಲಿಗರಿಗೆ ಕಾಗದ ಕಂಪನಿಯ ಗಿಪ್ಟ್…

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಸರಿ ಸುಮಾರು 90 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ನಿರ್ಮಿಸುವ ಮೂಲಕ ಕೊರೊನಾತಂಕದ ಕಾಲದಲ್ಲಿ ದಾಂಡೇಲಿಯ ಜನರಿಗೆ ಅಮೂಲ್ಯವಾದ ಗಿಪ್ಟ್ ನ್ನು ನೀಡಿದ್ದಾರೆ. ಆಮೂಲಕ ಅವರ ಸಾಮಾಜಿಕ ಬದ್ದತೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ದಾಂಡೇಲಿಯ ಸರಕಾರಿ ಆಸ್ಪತ್ರೆಯ […]

ಈ ಕ್ಷಣದ ಸುದ್ದಿ

ನೊಂದಾಯಿತ ಎಲ್ಲಾ ಕಾರ್ಮಿಕರಿಗೂ ಸರಕಾರದ ಕಿಟ್ ಸಿಗುವಂತಾಗಲಿ: ದೇಶಪಾಂಡೆ

ಬೆವರ ಸುರಿಸಿಯೇ ಬದುಕು ಕಂಡುಕೊಳ್ಳುವ ಹಲವು ವಿಭಾಗದ ಕಾರ್ಮಿಕರೇ ಈ ದೇಶದ ನಿಜವಾದ ಆಧಾರಸ್ಥಂಬಗಳು. ಕಾರ್ಮಿಕರ ದುಡಿಮೆಯೇ ಈದೇಶವನ್ನು ಮುನ್ನಡೆಸುತ್ತಿದೆ. ಹಾಗಾಗಿ ಯಾವುದೇ ಕಾರ್ಮಿಕರೂ ಕೂಡಾ ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು. ಇದೀಗ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡುತ್ತಿರುವ ಕಿಟ್‍ಗಳೂ ಕೂಡಾ ನೊಂದಾಯಿತ ಎಲ್ಲಾ ಕಾರ್ಮಿರಿಗೂ ಸಿಗುವಂತಾಗಬೇಕು  ಎಂದು ಶಾಸಕ […]

ಈ ಕ್ಷಣದ ಸುದ್ದಿ

ದಾಂಡೇಲಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ದೇಶಪಾಂಡೆ

ಕಳೆದೆರಡು ದಿನಗಳ ಹಿಂದೆ  ಎಡಬಿಡದೇ ಸುರಿದ ಮಳೆ ಹಾಗೂ ತುಂಬಿ ಹರಿದ ಕಾಳಿ ನದಿಯಿಂದ ಹಾನಿಗೊಳಗಾದ ದಾಂಡೇಲಿಯ ಹಲವು ಸ್ಥಳಗಳಿಗೆ ರವಿವಾರ ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳ ಜೊತೆಯಲ್ಲಿ ಬೇಟಿ ನೀಡಿ ಪರಿಶೀಲಿಸಿದರು.   ತುಂಬಿ ಹರಿದ ಆಲೂರು ಕೆರೆ, ಕೆರವಾಡಾ ಕೆರೆಗಳನ್ನು ವೀಕ್ಷಿಸಿದ ಆರ್.ವಿ ದೇಶಪಾಂಡೆಯವರು ದಾಂಡೇಲಪ್ಪ […]