ಈ ಕ್ಷಣದ ಸುದ್ದಿ

ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯು. ಎಸ್. ಪಾಟೀಲ್

ದಾಂಡೇಲಿ : ಫೆಬ್ರುವರಿ 28ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಬರಹಗಾರ ಯು. ಎಸ್. ಪಾಟೀಲ್ ಆಯ್ಕೆಯಾಗಿದ್ದಾರೆ. ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ದಾಂಡೇಲಿ ತಾಲೂಕಾ  ಕಸಾಪ ಅಧ್ಯಕ್ಷ ನಾರಾಯಣ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಟಿಂಬರ್ ಡಿಪೋದಲ್ಲಿ ಸಿಕ್ಕ ಶವ

ದಾಂಡೇಲಿ : ಇಲ್ಲಿಯ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಅಪರಿಚಿತ ಮೃತದೇಹವೊಂ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಾಂಡೇಲಿಯ ಟಿಂಬರ್ ಡಿಪೋ ಅರಣ್ಯ ಕಚೇರಿಗೆ ಹೋಗುವ ದಾರಿಯಲ್ಲಿರುವ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಈ ಮೃತ ದೇಹ ಪತ್ತೆಯಾಗಿದೆ. ಕನಿಷ್ಠ 8-10 ದಿನಗಳ ಹಿಂದೆಯೇ ಈ ಸಾವು ಸಂಭವಿಸಬಹುದು ಎಂದು […]

ಈ ಕ್ಷಣದ ಸುದ್ದಿ

ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಮೈಕ್ರೋ ಫೈನಾನ್ಸ್ ಅಧಿಕಾರಿಗಳು 

ದಾಂಡೇಲಿ: ಮೈಕ್ರೋ ಫೈನಾನ್ಸ್ ನವರಿಂದ ಆಗುತ್ತಿರುವ ಕಿರುಕುಳಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಿವಾನಂದ ಮದರಖಂಡಿಯವರು ಶುಕ್ರವಾರ ಎಸ್.ಕೆ.ಎಸ್., ಗ್ರಾಮೀಣ ಕೋಟ್ , ಚೈತನ್ಯ ಮುಂತಾದ ಮೈಕ್ರೋ ಫೈನಾನ್ಸ್ ಅಧಿಕಾರಿಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನ ಮೀರಿ ಸಾಲವಸೂಲಾತಿಗೆ ಮುಂದಾಗಬಾರದು. […]

ಈ ಕ್ಷಣದ ಸುದ್ದಿ

ಫೈನಾನ್ಸ್ ಕಿರುಕುಳಕ್ಕೊಳಗಾದ ಮಹಿಳೆಯರನ್ನು ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರು

ದಾಂಡೇಲಿ : ಮೈಕ್ರೋ ಫೈನಾನ್ಸ್ ನ ಕಿರುಕುಳಕ್ಕೆ ಒಳಗಾಗಿರುವ ದಾಂಡೇಲಿಯ ಎಂಟಕ್ಕೂ ಹೆಚ್ಚು ಮಹಿಳೆಯರನ್ನ ಠಾಣೆಗೆ ಕರೆಯಿಸಿದ ಪೊಲೀಸರು ಅವರಿಂದ ವಿವರಣೆ ಪಡೆದು ನೈತಿಕ ಧೈರ್ಯ ತುಂಬಿ ಕಳುಹಿಸಿದ್ದಾರೆ. ಮೈಕ್ರೋ ಫೈನಾನ್ಸ್ ನವರ ಕಿರುಕುಳದ ಕುರಿತಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ  ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. […]

ಒಡನಾಡಿ ವಿಶೇಷ

ದಂಡಕಾರಣ್ಯದ ಮಾರುಕಟ್ಟೆಯಲ್ಲಿ ಬಿಹಾರದ ತರಹೇವಾರಿ ಹೂವಿನ ಗಿಡಗಳು

ದಾಂಡೇಲಿ: ಸುತ್ತಲೂ ಹಸಿರು ಗಿಡ ಮರಗಳಿಂದ ಆವೃತ್ತವಾಗಿರುವ ದಂಡಕಾರಣ್ಯವೆಂಬ ದಾಂಡೇಲಿಯ ಮಾರುಕಟ್ಟೆಯಲ್ಲಿ ಇದೀಗ ಬಿಹಾರದಿಂದ ಬಂದ ಬಗೆ ಬಗೆಯ ಹೂವಿನ ಗಿಡಗಳ ಮಾರಾಟ ಬಲು ಜೋರಾಗಿಯೇ ನಡೆಯುತ್ತಿದೆ. ದಾಂಡೇಲಿ ಎಂದರೆ ಇಲ್ಲಿ ನೈಜ ಸೌಂದರ್ಯವಿದೆ. ಪ್ರಾಕೃತಿಕ ಸೊಬಗಿದೆ. ಇದರ ನಡುವೆಯೇ ಬಿಹಾರದಿಂದ ಬಂದ ಕಸಿ ಮಾಡಿದ ಬಗೆ ಬಗೆಯ […]

ಈ ಕ್ಷಣದ ಸುದ್ದಿ

ಮಳೆ ಇಲ್ಲ, ಹೊಳೆ ಇಲ್ಲ: ಹಳೆದಾಂಡೇಲಿ ರಸ್ತೆಯಲ್ಲಿ ಏಕಾಏಕಿ ಜಲ ಕಂಟಕ

ದಾಂಡೇಲಿ : ಜೋರು ಮಳೆಗಾಲದಲ್ಲಿ ಕುಂಭ ದ್ರೋಣ ಮಳೆ ಸುರಿದು ಅಥವಾ ಹೊಳೆ ಉಕ್ಕಿ ಹರಿದು ಜಲಕಂಠಕವಾಗುವುದನ್ನು ಕಂಡಿದ್ದೇವೆ. ಆದರೆ ಈ ಬಿರು ಬೇಸಿಗೆಯಲ್ಲಿ ಮಳೆ ಇಲ್ಲ, ಹೊಳೆಯಿಲ್ಲ. ಆದರೂ ರಸ್ತೆಯ ತುಂಬೆಲ್ಲ ನೀರು ಹರಿದು ಜಲಕಂಟಕದ ರೀತಿಯಲ್ಲಿ ಆತಂಕ ನಿರ್ಮಾಣವಾಗಿರುವ ಸನ್ನಿವೇಶ ರವಿವಾರ ಮುಂಜಾನೆ ಹಳೆ ದಾಂಡೇಲಿ […]

ಒಡನಾಡಿ ವಿಶೇಷ

ಸಾಗವಾನಿಯ ಊರಲ್ಲಿ ಬೆಂಗಳೂರಿನ ಅಕೇಶಿಯಾ ಪೀಠೋಪಕರಣಗಳ ಹಾವಳಿ

ದಾಂಡೇಲಿ : ಸಾಗವಾನಿಯ ನಗರವೆಂದೇ ಖ್ಯಾತಿ ಪಡೆದಿರುವ ದಾಂಡೇಲಿಯಲ್ಲಿ ಇದೀಗ ಬೆಂಗಳೂರಿನಿಂದ ಬಂದ ಅಕೇಶಿಯಾ ಪೀಠೋಪಕರಣಗಳ ಹಾವಳಿ ಜೋರಾಗಿದೆ. ಹೇಳಿ ಕೇಳಿ ದಾಂಡೇಲಿ ಇದು ಅಭಯಾರಣ್ಯ. ಬಗೆ ಬಗೆಯ ಮರಗಳು ಇಲ್ಲಿ ಹೇರಳವಾಗಿವೆ. ಅದರಲ್ಲೂ ಸಾಗುವಾನಿ ಕಟ್ಟಿಗೆ ಹಾಗೂ ಪೀಠೋಪಕರಣಗಳು ಬೇಕೆಂದರೆ ಜನ ದಾಂಡೇಲಿಯ ಕಡೆ ಮುಖ ಮಾಡುತ್ತಾರೆ. […]

ಈ ಕ್ಷಣದ ಸುದ್ದಿ

‘ರಾತ್ರಿಯೆಲ್ಲಾ ಮನೆಯಲ್ಲೇ ಇದ್ದು ಬಿಡ್ತಾರೆ… ಹೊಟ್ಟೆಗೆ ಏನ್ ತಿಂತೀರಾ ಕೇಳ್ತಾರೆ…’

ದಾಂಡೇಲಿಯಲ್ಲಿ ಮೈಕ್ರೋ ಪೈನಾನ್ಸ್  ಕಿರುಕುಳಕ್ಕೆ ಮನೆ ಮಾರುತ್ತಿರುವ ಬಡ ಜನರು ದಾಂಡೇಲಿ :  ದಾಂಡೇಲಿಯ ಗಲ್ಲಿ ಗಲ್ಲಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಯ ಹಾವಳಿ ಜೋರಾಗಿದ್ದು, ಸಾಲ ವಸೂಲಾತಿ ಸಂದರ್ಭದಲ್ಲಿ ಆಗುತ್ತಿರುವ ಕಿರುಕುಳಕ್ಕೆ ಬಡ ಜನರನೇಕರು ಬೇಸತ್ತು ಹೋಗಿರುವುದು ಬೆಳಕಿಗೆ ಬರುತ್ತಿದೆ. ಇದೀಗ ಎಲ್ಲೆಂದರಲ್ಲಿ ಮೈಕ್ರೋ […]

ಈ ಕ್ಷಣದ ಸುದ್ದಿ

ದಾಂಡೇಲಿ ಪೊಲೀಸರ ಕಾರ್ಯಾಚರಣೆ: ಮೀಟರ್ ಬಡ್ಡಿ ಪ್ರಕರಣದಲ್ಲಿ ಹಲವರ ವಿಚಾರಣೆ: ಇಬ್ಬರ ಬಂಧನ

ದಾಂಡೇಲಿ : ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಎಮ್. ನಾರಾಯಣ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ್ದು, ಹಲವರನ್ನ ವಿಚಾರಣೆಗಳಪಡಿಸಿ ಇಬ್ಬರನ್ನು […]

ಉತ್ತರ ಕನ್ನಡ

ಫೆ. 9 ರಂದು ಕಾಗದ ಕಂಪನಿಯಿಂದ ಚಿಕ್ಕ ಮಕ್ಕಳ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಾಂಡೇಲಿ : ವೆಸ್ಟ್ ಕೋಸ್ಟ್ ಪೇಪರ್ ಮಿಲ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ( ಸಿಎಸ್ಆರ್) ಧಾರವಾಡದ ಖ್ಯಾತ ಮಕ್ಕಳ ತಜ್ಞರಾದ ರಾಜನ್ ದೇಶಪಾಂಡೆಯವರ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಫೆಬ್ರುವರಿ 9ರಂದು ಬೃಹತ್ ಪ್ರಮಾಣದ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ […]