
ಆಗಾಗ ಕೆಲವೊಂದು ಕ್ಷೇತ್ರಗಳಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ.
ಹಾಗೆಯೇ ಇದೀಗ ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ 2024ರ ಭ್ರಷ್ಟ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಎಷ್ಟನೇ ಸ್ಥಾನ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ವರ್ಷ, ಅತೀ ಭ್ರಷ್ಟರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 180 ದೇಶಗಳಲ್ಲಿ 96ನೇ ಸ್ಥಾನದಲ್ಲಿದೆ. 2023ರ ಶ್ರೇಯಾಂಕದಿಂದ ಮೂರು ಸ್ಥಾನಗಳಿಂದ ಕೆಳಗಿಳಿದಿದೆ. ಅಂದರೆ ಸ್ವಲ್ಪಮಟ್ಟಿಗೆ ಭ್ರಷ್ಟಚಾರ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಭಾರತವು ತನ್ನ ಸ್ಥಾನವನ್ನು ಇತರ ಎರಡು ರಾಷ್ಟ್ರಗಳಾದ ಗಾಂಬಿಯಾ ಮತ್ತು ಮಾಲ್ಡೀವ್ಸ್‌ನೊಂದಿಗೆ ಹಂಚಿಕೊಂಡಿದೆ. ಸಾರ್ವಜನಿಕ ವಲಯದ ಭ್ರಷ್ಟಾಚಾರದ ಜಾಗತಿಕ ಮಾಪಕವಾಗಿ ಕಾರ್ಯನಿರ್ವಹಿಸುವ ಸಿಪಿಐ, 0 (ಹೆಚ್ಚು ಭ್ರಷ್ಟ) ರಿಂದ 100 (ತುಂಬಾ ಸ್ವಚ್ಛ) ವರೆಗಿನ ಸ್ಕೇಲ್ನಲ್ಲಿ ಅಂಕಗಳನ್ನು ನಿಗದಿಪಡಿಸುತ್ತದೆ. 2024 ರಲ್ಲಿ, ಭಾರತವು ಒಟ್ಟಾರೆ 38 ಅಂಕಗಳನ್ನು ಪಡೆಯಿತು, ಇದು 2023 ರಲ್ಲಿ 39 ಮತ್ತು 2022 ರಲ್ಲಿ 40 ರಷ್ಟಿತ್ತು.
ಭಾರತದ ನೆರೆಯ ರಾಷ್ಟ್ರಗಳ ಪೈಕಿ ಪಾಕಿಸ್ತಾನ 135, ಶ್ರೀಲಂಕಾ 121, ಬಾಂಗ್ಲಾದೇಶ 149 ಮತ್ತು ಚೀನಾ 76ನೇ ಸ್ಥಾನದಲ್ಲಿವೆ. ಡೆನ್ಮಾರ್ಕ್ (90) ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಫಿನ್‌ಲ್ಯಾಂಡ್ (88), ಸಿಂಗಾಪುರ್ (84) ಮತ್ತು ನ್ಯೂಜಿಲೆಂಡ್ (83) ನಂತರದ ಸ್ಥಾನಗಳಲ್ಲಿವೆ.
ಲಕ್ಸೆಂಬರ್ಗ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ 81 ಅಂಕಗಳೊಂದಿಗೆ 5ನೇ ಸ್ಥಾನವನ್ನು ಹಂಚಿಕೊಂಡರೆ, ಸ್ವೀಡನ್ (80) ಮತ್ತು ನೆದರ್‌ಲ್ಯಾಂಡ್ಸ್ (78) ಕ್ರಮವಾಗಿ 8 ಮತ್ತು 9ನೇ ಸ್ಥಾನಗಳನ್ನು ಹಂಚಿಕೊಂಡಿವೆ. ಆಸ್ಟ್ರೇಲಿಯಾ, ಐಸ್ಲ್ಯಾಂಡ್ ಮತ್ತು ಐರ್ಲೆಂಡ್ 77 ಅಂಕಗಳನ್ನು ಗಳಿಸಿ 10ನೇ ಸ್ಥಾನದಲ್ಲಿದೆ.

Be the first to comment