ದಾಂಡೇಲಿ ಪೊಲೀಸರ ಕಾರ್ಯಾಚರಣೆ: ಮೀಟರ್ ಬಡ್ಡಿ ಪ್ರಕರಣದಲ್ಲಿ ಹಲವರ ವಿಚಾರಣೆ: ಇಬ್ಬರ ಬಂಧನ

ದಾಂಡೇಲಿ : ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಎಮ್. ನಾರಾಯಣ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ್ದು, ಹಲವರನ್ನ ವಿಚಾರಣೆಗಳಪಡಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಗಾಂಧಿನಗರದ ಕಿಶನ್ ಸುಭಾಷ್ ಕಂಜರಬಾಟ್ , ಎಂಬತನನ್ನು ಬಂಧಿಸಿದ್ದು ಇತನಿಂದ ಎರಡು ಖಾಲಿ ಬಾಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮತ್ತೋರ್ವ ಆರೋಪಿ ಗಾಂಧಿನಗರದ ವಿನೋದ್ ಸುರೇಶ್ ಕಂಜರಬಾಟ ಎಂಬಾತನಿಂದ ಬೇರೆ ಬೇರೆ ಬ್ಯಾಂಕುಗಳ ಹತ್ತಕ್ಕೂ ಹೆಚ್ಚು ಚೆಕ್ಕುಗಳನ್ನು ಹಾಗೂ ಬಾಂಡ್ ಗಳನ್ನ, ಅಗ್ರಿಮೆಂಟ್ ಪತ್ರಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರೀರ್ವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಉಳಿದಂತೆ ಮಾರುತಿನಗದ ವಿಜಯ ಪೆರುಮಾಲಕ ಹಾಗೂ ಆಶ್ರಯ ಕಾಲೋನಿಯ ಮೌಲಾಲಿ ರಿಕ್ಷಾವಾಲಾ ಎಂಬ ಇಬ್ಬರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದು ಅವರನ್ನ ತಹಶೀಲದಾರರೆದುರು ಹಾಜರುಪಡಿಸಿ ಮುಚ್ಚಳಿಕೆ ಬರೆಯಿಸಿ, ಎಚ್ಚರಿಕೆ ನೀಡಿದ್ದಾರೆ.

ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಎಸ್ಐ ಗಳಾದ ಅಮಿನ್ ಸಾಬ್ ಅತ್ತಾರ್ ಹಾಗೂ ಕಿರಣ್ ಪಾಟೀಲರವರು ಸಿಬ್ಬಂದಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*