ಜೋಗತಿ ನೃತ್ಯ’ದ ವೇಳೆ ಮಹಿಳೆಯ ಮೈ ಮೇಲೆ ಬಂದ ‘ಯಲ್ಲಮ್ಮ ದೇವಿ’

ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಘಟನೆ

ದಾಂಡೇಲಿ: ಜನಪದ ಕಲಾವಿದರ ತಂಡ ಜೋಗತಿ ನೃತ್ಯ ಮಾಡುತ್ತಿದ್ದ ವೇಳೆ ಮಹಿಳೆಯೋರ್ವಳ ಮೈ ಮೇಲೆ ‘ಯಲ್ಲಮ್ಮ ದೇವಿ’ ಬಂದು ನರ್ತಿಸಿದ ಘಟನೆ ದಾಂಡೇಲಿಯ ನವರಾತ್ರಿ ಉತ್ಸವದ ಮೂರನೆಯ ದಿನದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದಿದೆ.

ದಾಂಡೇಲಿ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ ವೈಶಿಷ್ಟ್ಯ ಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಉತ್ಸವದ ಮೂರನೆಯ ದಿನದಂದು ನರಗುಂದ ಜೈಕಿಸಾನ್ ಕಲಾತಂಡದಿಂದ ಜನಪದ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಲಾವಿದರು ಜನಪದ ಗಾಯನದ ಜೊತೆಗೆ ತತ್ವಪದ, ಜೋಗತಿ ನೃತ್ಯ, ಮೈಲಾರಲಿಂಗನ ನತ್ಯ ಸೇರಿದಂತೆ ಹಲವು ಆಕರ್ಷಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.

ಈ ಕಲಾತಂಡದ ಜೋಗತಿ ನೃತ್ಯಕ್ಕೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ದೊರೆತಿದ್ದು, ಈ ನೃತ್ಯವನ್ನು ಅವರು ದಾಂಡೇಲಿ ನವರಾತ್ರಿ ಉತ್ಸವದ ವೇದಿಕೆಯಲ್ಲಿ ಮಾಡಲಾರಂಬಿಸುತ್ತಿದ್ದಂತೆಯೇ ಜನರು ಕೂಡ ಭಕ್ತಿಪರಶರಾಗಿದ್ದರು. ಇದೇ ವೇಳೆ ವೇದಿಕೆಯ ಮುಂಬಾಗದಲ್ಲಿ ಹಿಂದಿನಲ್ಲಿ ಸಾಲಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ವೇದಿಕೆ ಎದುರುಗಡೆ ಬಂದು ಕುಣಿಯಲಾರಂಬಿಸಿದರು. ಇದು ಸೇರಿದ ಪ್ರೇಕ್ಷಕರಿಗೆ ಅನಿರೀಕ್ಷಿತವಾಗಿತ್ತು. ಆಗಲೇ ಗೊತ್ತಾಗಿದ್ದು ಆಕೆಯ ಮೇಲೆ ‘ಯಲ್ಲಮ್ಮ ದೇವಿ’ ಬಂದಿದ್ದಾರೆ ಎಂದು. ನಂತರ ಬಂದ ನಾಲ್ಕಾರು ಮಹಿಳೆಯರು ಆ ಮಹಿಳೆಯನ್ನ ಹಿಡಿದುಕೊಂಡರೂ ಸಹ ಮೈ ಮೇಲೆ ದೈವ ಬಂದವರಂತೆ ಆಕೆ ಕುಡಿಯಲಾರಂಭಿಸಿದ್ದರು.

ಇದೇ ಸಂದರ್ಭದಲ್ಲಿ ಜೈ ಕಿಸಾನ ಕಲಾತಂಡದವರು ಅರಿಶಿನವನ್ನು ನೀಡಿ ಆಕೆಯ ಹಣೆಗೆ ಹಚ್ಚಲು ಹೇಳಿದರು. ಆದರೂ ಕೂಡ ಮಹಿಳೆಯ ಮೈ ಮೇಲೆ ಬಂದ ಆ ಶಕ್ತಿ ಕಡಿಮೆಯಾಗಲಿಲ್ಲ. ಪಕ್ಕದಲ್ಲಿದ್ದ ದುರ್ಗಾದೇವಿಯ ಅರ್ಚಕರು ಬಂದು ತೀರ್ಥ ಪ್ರೋಕ್ಷಣೆ ಮಾಡಿದರು. ಮಹಿಳೆ ದೇವಿಯನ್ನು ಆಹ್ವಾನಿಸಿಕೊಂಡು ಕುಣಿಯುತ್ತಲೇ ಇದ್ದರು. ಕಲಾವಿದರಿಂದ ಜೋಗತಿ ನೃತ್ಯ ಮುಗಿಯುವವರೆಗೂ ಕೂಡ ಮಹಿಳೆಯ ಮಹಿಮೆ ಮೇಲೆ ಯಲ್ಲಮ್ಮ ಬಂದು ನರ್ತಿಸುತ್ತಿದ್ದರು.

ಈ ಘಟನೆ ಸೇರಿದ ಪ್ರೇಕ್ಷಕರಿಗೆ ಆಕಸ್ಮಿಕವೂ ಅನಿರೀಕ್ಷಿತವೂ ಆಗಿತ್ತಷ್ಟೇ ಅಲ್ಲದೆ ಜೋಗತಿ ನೃತ್ಯದ ವೇಳೆ ಹೀಫೆ ದೇವಿ ಬಂದು ನಟಿಸಿದ್ದು, ದುರ್ಗಾದೇವಿಯ ಮಹಿಮೆ ಹಾಗೂ ಶುಭ ಸೂಚನೆ ಎಂದರು.

ಈ ವಿಷಯವಾಗಿ ಪ್ರತಿಕ್ರಿಯಿಸಿದ ಜೈ ಕಿಸಾನ್ ಕಲಾತಂಡದ ಕಲಾವಿದರು ‘ಜೋಗತಿ ನೃತ್ಯ ಮಾಡುವ ವೇಳೆ ಅನೇಕ ಕಡೆಗಳಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗಿದೆ. ತಾಯಿ ಮೈಮೇಲೆ ಬರುತ್ತಾಳೆ ಎಂದಿದ್ದಾರೆ.

ಯಲ್ಲಮ್ಮ ದೇವಿ ಮಹಿಳೆಯ ಮೇಲೆ ಬಂದ ದೃಷ್ಯ ವೀಕ್ಷಿಸಿ

ನವರಾತ್ರಿ ಉತ್ಸವದ ಮೂರನೇ ದಿನ ನಡೆದ ಜೈ ಕಿಸಾನ್ ಕಲಾ ತಂಡದ ಜನಪದ ಕಾರ್ಯಕ್ರಮ ಸೇರಿದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುನಿಲ್ ಹೆಗಡೆ, ಅಧ್ಯಕ್ಷರಾದ ಟಿ. ಎಸ್. ಬಾಲಮಣಿ, ಕಾರ್ಯದರ್ಶಿ ನರೇಂದ್ರ ಚೌಹಾಣ, ಖಜಾಂಚಿ ಅಶುತೋಶ ರಾಯ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ ಹಾಗೂ ಪ್ರಮುಖರು ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

About ಬಿ.ಎನ್‌. ವಾಸರೆ 581 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*