‘ಚಂದನ ವನದ ಚಿನ್ನದ ಹಕ್ಕಿ’

ಚಂದನ ಲೋಕದ ಚಿನ್ನದ ಹಕ್ಕಿ
ಬೆಳ್ಳಿತೆರೆಯ ಬಾನಲಿ ಇಣುಕಿ
ಕಿರುತೆರೆಯಲ್ಲಿ ಎಲ್ಲೆಡೆ ಮಿನುಗಿ.
ಕನ್ನಡಿಗರ ಹೃದಯವ ಕಲಕಿ
ಹಾರಿ ಹೋಯಿತೆ ಚಂದನ ಹಕ್ಕಿ ||

ಕನ್ನಡ ಪದಗಳ ಮುತ್ತನು ಪೋಣಿಸಿ
ಸಭಾಂಗಣವನ್ನೆ ಮೋಹಕ ಗೊಳಿಸಿ
ಸಭಿಕರ ಕರದಿ ಚಪ್ಪಾಳೆ ಗಿಟ್ಟಿಸಿ
ಕನ್ನಡ ಡಿಂಡಿಮ ಎದೆಯಲಿ ಮೊಳಗಿಸಿ
ಹೊರಟೇ ಹೋಯ್ತೆ ಹೃದಯವ ಕಲಕಿ||

ಚಂದನ ವಾಹಿನಿ ಸುದ್ದಿ ವಾಹಕಿ
ಕನ್ನಡ ಮಾತಿನ ಸ್ಪಷ್ಟೋದ್ಘೋಷಕಿ.
ಸಭಿಕರನೆಬ್ಬಿಸಿ ಕರತಾಡನವಾಡಿಸಿ.
ಕನ್ನಡನಾಡಿನ ಋಣವನು ತೀರಿಸಿ
ಹೊರಟೇ ಹೋಯಿತೆ ಚಂದನ ಹಕ್ಕಿ.||

ಸ್ವರ್ಗಲೋಕದ ಸಭೆಯೊಳಗೆ.
ಸುರಾಸುರರ ಅರಮನೆಯಂಗಳಕೆ ನಿರೂಪಣೆ ಕೊರತೆಯ ನೀಗಲು
ವಿಧಿಯಾಜ್ಞೆ ಕರೆಗಂಟೆ ಮೇರೆಗೆ
ತೇಲಿ ಹೋಯ್ತೆ ಬಾನಂಗಳದಲ್ಲಿ ಚುಕ್ಕಿ||

ಹುಟ್ಟಲಿ ಮತ್ತೆ ಕರುನಾಡಿನ ಗರ್ಭದಿ.
ಬೆಳಗಲಿ ಮನೆ ಮನೆಯಂಗಳದಲಿ.
ಕಣಕಣದಲ್ಲೂ ಕನ್ನಡ ಮೊಳಗಲಿ.
ಚಂದನವನದ ಚಿನ್ನದ ಧ್ವನಿ ಬೆರೆಯಲಿ
||

🖊️ಗೋಪಾಲ ಭಾಶಿ.

ಪರಿಚಯ: ಗೋಪಾಲ ನಾಯ್ಕ, ಭಾಶಿ ಇವರು ವೃತ್ತಿಯಲ್ಲಿ ಅದ್ಯಾಪಕರು. ಪ್ರವೃತ್ತಿಯಲ್ಲಿ ಬರಹಗಾರರು. ಉತ್ತಮ ಸಂಘಟಕತು. ಸಿದ್ದಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ಚಂದನ ವನದ ಚಿನ್ನದ ಹಕ್ಕಿ ಸೂಪರ್ ಸರ್

Leave a Reply

Your email address will not be published.


*