ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ : ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರ ಮನವಿ

{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ದಾಂಡೇಲಿ : ಮಳೆಗಾಲದ ಕಾರಣ ನೀರು ಶುಧೀಕರಿಸಿ ಬಿಡುವಲ್ಲಿ ಕೆಲ ತಾಂತ್ರಿಕ ಅಡಚಣೆಗಳು ಆಗುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯವಾದರೆ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ರಾಜಾರಾಮ ಪವಾರ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಮಳೆಗಾಲ ಪ್ರಾರಂಭವಾಗಿದ್ದು, ಕಾಳಿನದಿಯಲ್ಲಿ ಮಳೆಯ ನೀರು ಹರಿದು ಬರುತ್ತಿರುವುದರಿಂದ ದಾಂಡೇಲಿಯ ಪಟೇಲನಗರದ ನೀರು ಶುದ್ದೀಕರಣ ಘಟಕದಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಕುಡಿಯುವ ನೀರನ್ನು ಶುದ್ದೀಕರಣಗೊಳಿಸಲು ನೀರಿಗೆ ಆಲಂನ್ನು ಮಿಶ್ರಣಮಾಡಿ, ಪ್ರತಿನಿತ್ಯ ಫಿಲ್ಟರ್ ಬೆಡ್‌ನ್ನು ಸ್ವಚ್ಛಗೊಳಿಸಿ ನೀರನ್ನು ಕೊರೀಕರಣ ಮಾಡಿ ಶುದ್ದೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ನದಿಯಲ್ಲಿ
ಹರಿಯುವ ನೀರು ತುಂಬಾ ಮರಳು ಮಿಶ್ರಿತವಾಗಿರುವುದರಿಂದ ಜಲಶುದ್ದೀಕರಣ ಘಟಕದಿಂದ ನೀರನ್ನು ಶುದ್ದೀಕರಿಸಿ ಸಾರ್ವಜನಿಕ ನೀರು ಪೂರೈಕೆ ಮಾಡಲು ವಿಳಂಬವಾಗುತ್ತದೆ.

ಅಲ್ಲದೇ ತನ್ಮಧ್ಯೆ ಹೆಸ್ಕಾಂ ಇಲಾಖೆಯಿಂದ
ವಿದ್ಯುತ್‌ ಸಂಪರ್ಕವನ್ನು ಮೇಲಿಂದ ಮೇಲೆ ತಾಂತ್ರಿಕ ಸಮಸ್ಯೆಯಿಂದ ಕಡಿತಗೊಳಿಸುವುದರಿಂದ ನಗರದಲ್ಲಿ ಪ್ರತಿದಿನ ನೀರು ಪೂರೈಕೆಯಲ್ಲಿ ಸಮಯದ ವ್ಯತ್ಯಯ ಉಂಟಾಗುತ್ತಿರುವುದರಿಂದ ನೀರು ಸರಬರಾಜಿನಲ್ಲಿ ಅಡಚನಬೆಯಾಗುತ್ತಿದೆ. ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿಮಾಡಿದ್ದಾರೆ.

ಸಾಂಕ್ರಾಮಿಕ ರೋಗಗಳ ಆತಂಕ: ನೀರು ಕುದಿಸಿ ಆರಿಸಿ ಕುಡಿಯಿರಿ:

ಕಳೆದ 15 ದಿನಗಳಿಂದ ಬಿಟ್ಟು ಬಿಡದೆ ಮಳೆ ಹೆಚ್ಚಿನ ಪ್ರಮಣದಲ್ಲಿ ಬೀಳುತ್ತಿರುವುದರಿಂದ ಕೆಲವೆಡೆ ನೀರು ನಿಂತು ಡೆಂಗ್ಯೂ, ಕಾಲರಾ, ಚಿಕನ್‌ಗುನ್ಯಾ ಇಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವನೀಯತೆ
ಹೆಚ್ಚು ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಮನೆ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಡಬೇಕು, ತೆರೆದ ತೊಟ್ಟಿಗಳಲ್ಲಿ ಹಾಗೂ ಇನ್ನಿತರೆ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಾಗೂ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಮನವಿಮಾಡಿರುವ ಪೌರಾಯುಕ್ತರು ಈ ಬಗ್ಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ನಗರಸಭೆ
ವತಿಯಿಂದ ಕೈ ಗೊಳ್ಳಲಾಗುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆಯೂ ವಿನಂತಿಸಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*