“ನಾನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ….”

“ನಾನು ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿದ್ದೇನೆ. ಈ ಘಳಿಗೆಯಲ್ಲಿ ಯಾರು ನನ್ನವರಲ್ಲ ಎಂಬುದು ಅರ್ಥವಾಗುತ್ತಿದೆ…. ಧನ್ಯವಾದಗಳು ….”

ಹೀಗೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡವರು ನಾಡಿನ ಹಿರಿಯ ಪತ್ರಕರ್ತ ಶಶಿಧರ ಭಟ್ ರವರು. ಇವರ ಈ ನೋವಿನ ಬರಹಕ್ಕೆ ಅವರ ಫೇಸ್ಬುಕ್ ಖಾತೆಯಲ್ಲಿ ಸಾವಿರಾರು ಕಮೆಂಟ್ಸ್ ಗಳು ಬಂದಿದೆ. ಸಾವಿರಾರು ಜನರು ಸಹಾಯ ಹಸ್ತಕ್ಕೆ ಮುಂದಾಗಿದ್ದಾರೆ. ಸ್ಪಂದಿಸದ ಆಳುವ ವರ್ಗಕ್ಕೂ ಕೂಡ ಧಿಕ್ಕರಿಸಿ ಉಗಿದಿದ್ದಾರೆ. ಶಶಿಧರ ಭಟ್ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.

ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ಪುತ್ರಕರ್ತ ಶಶಿಧರ ಭಟ್ ಅವರು ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಹ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾಗಿರುವ ಶಶಿಧರ್ ಭಟ್ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಸಂಪಾದಕರಾಗಿ, ನಂತರದಲ್ಲಿ ತಮ್ಮದೇ ಆದ ‘ಸುದ್ದಿ ಟಿವಿ’ ಯ ಮುಖ್ಯಸ್ಥರಾಗಿ ಗಮನಸೆಳೆದವರು. ತಮ್ಮ ಹರಿತವಾದ ಬರಹ ಮತ್ತು ಮಾತುಗಳ ಮೂಲಕ ತಮ್ಮದೇ ಆದ ವಲಯವನ್ನು ಸೃಷ್ಟಿಸಿಕೊಂಡವರು. ಅವರ ಸಮಾಜಮುಖಿಯಾದ ಚಿಂತನೆ , ಪ್ರಗತಿಪರವಾದ ವಿಚಾರಧಾರೆ ಪತ್ರಿಕೋದ್ಯಮಕ್ಕೆ ಹೊಸ ರೂಪವನ್ನು ಕೊಟ್ಟಿದ್ದು ಸುಳ್ಳಲ್ಲ. ನೇರ, ನಿಷ್ಠುರವಾದಿಯಾಗಿದ್ದ ಶಶಿಧರ ಭಟ್ ತಮ್ಮ ಸುದ್ದಿ ಹಾಗೂ ನಿರೂಪಣೆಯ ಮೂಲಕ ಹಲವು ಭ್ರಷ್ಟ ಮತ್ತು ದುಷ್ಟ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿದ್ದವರು.

ಅವರ ವಿಚಾರ ಮತ್ತು ಸಿದ್ದಾಂತ ಹಾಗೂ ಮಾತುಗಳ ಬಗ್ಗೆ ಪರ ವಿರೋಧಗಳು ಇದ್ದರೂ ಕೂಡ ಯಾರೊಂದಿಗೂ ಯಾವ ಸಂಗತಿಯೊಂದಿಗೂ ರಾಜಿಯಾಗದೆ ಪ್ರತಿಕಾ ಬದುಕನ್ನ ನಡೆಸಿದವರು. ಹಲವಾರು ಪತ್ರಕರ್ತರನ್ನ ನಾಡಿಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆಗೆ ಶಶಿಧರ ಭಟ್ ರಂತಹ ಪತ್ರಕರ್ತ ನಿಜಕ್ಕೂ ಒಂದು ಹೆಮ್ಮೆ.

ಕೆಲ ದಿನಗಳಿಂದ ಆರೋಗ್ಯದಲ್ಲಿ ಒಂದಿಷ್ಟು ಅಸ್ವಸ್ಥಗೊಂಡಿದ್ದ ಶಶಿಧರ್ ಭಟ್ಟರನ್ನು ಇದೀಗ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ತೀವ್ರ ಘಟಕದಲ್ಲಿ ದಾಖಲಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ. ಇದೇ ಕಾರಣ ಸಂದರ್ಭದಲ್ಲಿ ಅವರು ತಮ್ಮ ಭಾವಚಿತ್ರವನ್ನು ತಮ್ಮ facebook ಖಾತೆಗೆ ಅಪ್ಲೋಡ್ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಸಾವಿರಾರು ಜನರು ಪ್ರತಿಕ್ರಿಯಿಸಿ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಶಶಿಧರ ಭಟ್ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.

ಆಸ್ಪತ್ರೆಯ ವೆಚ್ಚ ಭರಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು….

ಫೇಸ್ಬುಕ್ ಖಾತೆಯಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಸರ್ಕಾರದ ನಿರ್ಲಕ್ಷಕ್ಕೂ ಮುಗಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರನ್ನ ದೂರವಾಣಿಯಲ್ಲಿ ಮಾತನಾಡಿಸಿದ್ದೇನೆ. ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸರಿಯಾದ ಚಿಕಿತ್ಸೆ ನೀಡಲು ವೈದ್ಯರಿಗೂ ಸೂಚಿಸಿದ್ದೇನೆ. ಸಮಾಜದ ಒಳಿತಿಗಾಗಿ ನಿರ್ಭೀತ ಧ್ವನಿಯಾಗಿದ್ದ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ’ ಎಂದು ತಮ್ಮ Facebook ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೊನೆಗೂ ಸೋಶಿಯಲ್ ಮೀಡಿಯಾದ ಒಂದು ಚಳುವಳಿ ರೂಪದ ಕಾಮೆಂಟ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿದರಲ್ಲ … ಇದು ಒಳ್ಳೆಯ ಬೆಳವಣಿಗೆಯಾಗಿದೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

Leave a Reply

Your email address will not be published.


*