ಕ್ಯಾಮರಾ-ವಿಡಿಯೋ… ರಾತೋರಾತ್ರಿ ಆದೇಶ ಹಿಂಪಡೆದ ರಾಜ್ಯ ಸರ್ಕಾರ

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಅನುಮತಿಯಿಲ್ಲದೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಒಂದೇ ದಿನದಲ್ಲಿ ರಾತೋರಾತ್ರಿ ಹಿಂಪಡೆದಿದೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಮನವಿಯ ಮೇರೆಗೆ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಪರವಾನಗಿ ಇಲ್ಲದೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ನಡೆಸುವಂತಿಲ್ಲ ಎಂಬ ಆದೇಶವನ್ನು ಹೊರಡಿಸಿತ್ತು . ಇದಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪಾರ್ಹ ಚರ್ಚೆಗಳು ನಡೆದಿದ್ದವು . ರಾಜ್ಯ ಸರ್ಕಾರ ಭ್ರಷ್ಟರನ್ನು ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಮಾಡಿದ್ದರು.

ಸರಕಾರಿ ಕಚೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಬಳಕೆ ಮಾಡದೇ ಇದ್ದರೆ ಭ್ರಷ್ಟಾಚಾರ ಇನ್ನೂ ಹೆಚ್ಚುತ್ತದೆ. ಲಂಚಕೋರರ ಸಂಖ್ಯೆ ಇನ್ನೂ ಅಧಿಕವಾಗುತ್ತದೆ. ಯಾವ ಲಂಗುಲಗಾಮಿಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಅವ್ಯವಹಾರಗಳು, ಭ್ರಷ್ಟಾಚಾರಗಳು ನಡೆಯುತ್ತಿವೆ ಸರ್ಕಾರ ಇಂತಹ ವಿವಾದಿತ ಆದೇಶವನ್ನು ಹೊರಡಿಸಿದ್ದು ಸರಿಯಲ್ಲ. ಈ ಆದೇಶದ ಮೂಲಕ ಸರ್ಕಾರವೇ ಭ್ರಷ್ಟಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಅನೇಕ ಆಕ್ಷೇಪ ವ್ಯಾಪಕವಾಗಿ ಚರ್ಚೆಯಾಗ ತೊಡಗಿದ್ದವು.

ಸರಕಾರದ ಶಾಸಕರು ಹಾಗೂ ಸಚಿವರು ಕೂಡ ಈ ವಿವಾದಿತ ಹಾಗೂ ಸಂಘರ್ಷಕ್ಕೆ ಕಾರಣವಾಗುವ ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಗಡಿಬಿಡಿಯಲ್ಲಿ ಹೊರಡಿಸಿದ ಈ ಆದೇಶವನ್ನು ಪ್ರಶ್ನಿಸಿದ್ದರೆನ್ನಲಾಗಿದೆ.
ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ವ್ಯಾಪಕ ಆಕ್ಷ್ರಪಕ್ಕೆ ಅಂಜಿದ ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿದ್ದ ಆದೇಶವನ್ನು ರಾತೋರಾತ್ರಿ ಹಿಂಪಡೆದಿದೆ
.

ಸರಕಾರದ ಆದೇಶ ಪತ್ರ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*