ನಿರೀಕ್ಷೆಗೂ ಮುನ್ನವೇ ಭರ್ತಿಯಾದ ಬೊಮ್ನಳ್ಳಿ ಪಿಕ್ ಅಪ್ ಡ್ಯಾಂ

ಜಲಾಶಯದ ನೀರು ಹೊರಬಿಟ್ಟ ವಿಡಿಯೋ

ದಾಂಡೇಲಿ ತಾಲ್ಲೂಕಿನ ಬೊಮ್ನಳ್ಳಿಯಲ್ಲಿರುವ ಬೊಮ್ನಳ್ಳಿ ಪಿಕಪ್ ಡ್ಯಾಂ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳಿಂದ ಮೂರು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.

ಕಾಳಿ ನದಿಯ ಹರಿಯುವಿಕೆಯಲ್ಲಿ ಸೂಪಾ ಜಲಾಶಯದ ನಂತರ ಬರುವ ಎರಡನೆಯ ಜಲಾಶಯ ಇದಾಗಿದೆ. ಇದನ್ನ ಪಿಕಪ್ ಡ್ಯಾಂ ಎಂದೂ ಕರೆಯಲಾಗುತ್ತಿದ್ದು ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಬಿಕಾನಗರ ನಾಗಝರಿ ವಿದ್ಯುದಾಗರ ದಲ್ಲಿ ವಿದ್ಯುತ್ ಉತ್ಪಾದಿಸುವ ಸಂದರ್ಭದಲ್ಲಿ ಈ ನೀರನ್ನು ಬಳಸಲಾಗುತ್ತದೆ.

ಈ ವರ್ಷದ ಮಳೆಗಾಲ ಹಾಗೂ ಕಳೆದ ವರ್ಷದ ನೀರಿನ ಪ್ರಮಾಣವನ್ನು ಅವಲೋಕಿಸಿದರೆ ಬೊಮ್ನಳ್ಳಿ ಪಿಕಪ್ ಡ್ಯಾಮ್ ನಿರೀಕ್ಷೆಗೂ ಮುನ್ನವೇ ತುಂಬಿಕೊಂಡಿದೆ.

ಜುಲೈ 14 ರಂದು ಮುಂಜಾನೆ ಬೊಮ್ನಳ್ಳಿ ಜಲಾಶಯದ ಎರಡು ಗೇಟ್ ಗಳಿಂದ ನೀರನ್ನು ಹೊರಬಿಡಲಾಗಿದೆ. ಕರ್ನಾಟಕ ವಿದ್ಯುತ್ ನಿಗಮದ ಅಂಬಿಕಾ ನಗರ ವಲಯದ ಮುಖ್ಯ ಅಭಿಯಂತರರಾದ ಆರ್.ವೈ. ಶಿರಾಲಿ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳದಲ್ಲಿದ್ದು ನೀರನ್ನು ಹೊರಬಿಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ .

ಜಲಾಶಯಕ್ಕೆ 9ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವಿದ್ದು, 3 ಸಾವಿರ ಕ್ಯೂಸೆಕ್ಸ್ ನೀರು ಹೊರ ಹರಿವಿದೆ. ಜಲಾಶಯದ ಕೆಳಭಾಗದ ನದಿ ದಂಡೆಯ ಆ ಜನರಿಗೆ ಮೊದಲೇ ಮುನ್ಸೂಚನೆ ನೀಡಲಾಗಿದ್ದು, ನದಿಪಾತ್ರದ ಜನರಿಗೆ ಜಲಾಶಯದ ನೀರು ಹೊರ ಬಿಡುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯ ಭರ್ತಿಯಾಗುವ ಸಂದರ್ಭದಲ್ಲಿಯೇ ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಂದಿದ್ದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*