ಇಂವ ದೊಡ್ಡ ಸಾಯ್ಬ ಆಗನೇ. ನಂಗೆ ಬುದ್ದಿ ಹೇಳ್ತಾ. ಆಲ್ಲ, ನಾನು ಸಾಲಿಗೆ ಹೋಗ್ತೆ ಇಲ್ಲಾ ಬಿಡ್ತೆ, ನಾನು ಕಲಿತೆ ಇಲ್ಲಾ, ಕಲುದಿಲ್ಲ, ನಾನು ದಡ್ಡಾ ಆಗ್ಲಿ, ಇಲ್ಲ ಹುಸಾರಿ ಆಗ್ಲಿ.ಇಂವ ಯಾರು ಕೇಳುಕೆ ? ದೊಡ್ಡ ಕೊಚ್ಚಿನಾಬ. ನಾಮ್ಮ ಆಪ್ಪ, ಆಬ್ಬಿನೇ ಕೇಳುದಿಲ್ಲ, ಇಂವ ಯಾವ್ಲೆಕ ನಾಂಗೆ. ಇಂವ ದೊಡ್ಡ ಸಾಲಿ ಕಲ್ತಿ ಉದ್ದಾರ ಮಾಡ್ವಂವ.. ಮಾಡ್ಲಿ ನಾಂಗೆ ಎಂತಕೆ ಹೇಳ್ಬೇಕು.ನಾಂಗೆ ಎಂತ ಹೊಟ್ಟಿಗೆ ಹಾಕ್ತನಾ ಆಂವ .ಇಂವ ಕೊಚ್ಚಿನಾಬ ಆದ್ರೆ ಆವ್ನ ಮಾನಿಗಾಯ್ತು. ನಾಂಗೆಳುಕೆ ಇಂವ್ಯಾರು.ಇವತ್ತೆ ಕೈಗೆ ಸಿಗ್ಲಿ, ಸಿಕ್ಕಿದ್ರೆ ಮಾಂಡಿ ಮ್ಯಾಲ್ಕೊಟ್ಟಿ ಅಲ್ಲೆ ಮಲಗ್ಸಬಿಡ್ತೆ.ಕಾಡಿಗೆ ನೊಡ್ಕಂಡ್ರಾಯ್ತು.ಯಾರು ಎಂತ ಹೆಳ್ತುರು ಹೇಳಿ.ಹಿಂಗೆ ಹೇಳ್ಕಂತಿ ಮಾರು ಹೋಯ್ತೆ ಇದ್ದ.ಅಷ್ಟ್ರಲ್ಲಿ ಅವರಪ್ಪ ಒಂದ ಸೊಟ್ಟಿ ಬೆನ್ನ ಹಿಂದೆ ಇಟ್ಕಂಡಿ ಬರುದ್ನೊಡಿ,ಮಾರು ಬಿದ್ದಾಕೊಟ್ಟಿ ಓಡುಕೆ ಸುರು ಮಾಡ್ದ…
ಓಡ್ಬ್ಯಾಡ ನಿತ್ಕ.ತೆಗ್ದ ಸೊಟ್ಟಿ ಬಿಟ್ರೆ ತಾಲಿ ಬುಯ್ಡಿ ಉದ್ರಿ ಕೆಳ್ಗೆ ಬಿಳ್ಬೇಕು. ಈ ಸಾಲಿ ಇಲ್ಲ ಅಂಬೂದು ಲಾಯ್ಕಾಗಾದೆ.ನಿತ್ಕ ಎಲ್ಲೊದ್ರು ನಿನ್ನ ಬಿಡುದಿಲ್ಲ.ಸೊಕ್ಕ ಬಂದ್ಕ ಹೊಡಿತೆ.
ಮಾರುವಿನ ಹಿಂದೆ ಓಡುತ್ತಿರುವ ದೇವುನ ತಡೆದು, ದಾರಿಯಲ್ಲಿ ಹೋಗುತ್ತಿರುವ ಬೀರ ಕೇಳಿದ, ದೇವು ಎಂತಕೆ ಹಿಂಗೆ ಓಡ್ತೀಯಾ.ಇರುವ ಒಬ್ಬ ಪೊರ್ನ್ ಬಾಯ್ಲಾಕಂಬೇಕು ಅಂತ ಮಾಡಿದ್ಯಾ.ಅಂವ್ ಎಲ್ಲರೂ ಹೋಗಿ ಬಾವಿಲಾರ್ಕಂಡಿ ಜೆಂವ ತೆಕ್ಕಂಡ್ರೆ ಆವಾಗೆ ಎಂತ ಮಾಡ್ತೆ. ಆ ದ್ಯಾವ್ರು ಒಂದ ಪೊರ್ನ ಕೊಟ್ಟಾದೆ.ಆಂವ್ನ ಸಾಕುಕಾಗ್ದೆ ಹಿಂಗೆಲ್ಲಾ ಮಾಡ್ತ್ಯಾ.ಎಂತಾ ಆಯ್ತು ಹೇಳಾ.
ಆಲಾ, ಇವತ್ತೆ ಆವ್ನು ಕೈಗೆ ಸಿಕ್ಕಿದ್ರೆ ಕೊಂದ್ಬಿಡ್ತೆ. ಇಂವ್ ಹುಟ್ಲೆಲ ಅಂದ್ರೂ ತೊಂದ್ರಿ ಇಲ್ಲ. ಆಲ್ಲಾ ಮಾರಾಯ ಸಾಲಿ ಸುರು ಆಗ್ದೆ ಯೆಯ್ಡ ವರ್ಷ ಆಯ್ತ್ಬಂತು.ಕಾಳ ಅಕ್ಷರಾ ಓದುದಿಲ್ಲ. ಸಾಲಿಲಿ ಹಾಳಿ ಪುಸ್ತಕ ಕೊಟ್ಟರೆ,ಆ ಪುಸ್ತಕಾನ ಮುಟ್ಲೇಲ.ಕಲು ಮಕ್ಳು ಹಿಂಗ ಮಾಡ್ದ್ರೆಏನ್ ಮಾಡುದು. ನಾಂಗೆ ನೊಡ್ ನೋಡಿ ಬ್ಯಾಜಾರ ಬಂದ್ಬಿಟ್ಟದೆ. ಅದ್ಕೆ ಇವತ್ತೆ ಎಂತಾದರೂ ಒಂದೂ ಆಗ್ಲೆ ಬೇಕು. ನಾನ್ ತಾಲಿ ಎಲ್ಲಾ ಕೆಟ್ಟ ಹೊಗಾದೆ.ನೋಡ್ ಬೀರಾ ನೀನು ಇದ್ರಾಗೆ ತಾಲಿ ಹಾಕ್ಬೆಡ.ಅದೇನ ಆಗ್ತದ್ಯಾ ಆಗೊಗ್ಲಿ.
ಆಲ್ವಾ ದೇವು, ನಿಮ್ಮನಿ ಕಾತಿ ಹಿಂಗಾದ್ರೆ ನಮ್ಮಾನಿ ಕತೆ ಮತ್ತೊಂದ ನಮನಿ.ನಾ ಯಾರ್ಕೆಲಿ ಹೇಳ್ಕಂಡ್ಲಿ.ಮಾಸ್ತರ್ಕೆಲಿ ಇಲ್ಲಿ ಕಾತಿ ಹೇಳ್ದ್ರೆ ನೀವೆ ಸುದಾರ್ಸಂಬೇಕು.ಸಾಲಿಗೆ ಮಕ್ಳನ್ನ ಕರಿಸ್ವಾಂಗೆ ಇಲ್ಲಾ ಅಂತಾರೆ.ಸಾಲಿ ಒಂದ್ ಸುರು ಆದ್ರೆ ಸಾಕು ಅಂಬಂಗಾಗದೆ ನಮ್ಮ ಕಾತಿ.ಒಂದ್ಕೆಲ್ಸ ಮಾಡ್ವ ಬಾ,ಒದಲ್ಲಿ ಅಂಗ್ಡಿವರಿಗೆ ಹೋಗ್ಬರ್ವಾ. ನಾಂಕೇಲಿ ಎಪ್ಪತ್ರೂಪಾಯಿ ಆದೆ, ನಿಂಕೆಲಿ.. ನಂಕೇಲಿ.. ಆದೆ…ಆದೆ.. ಬಾ..ಬಾ..ಅಲ್ಲೊಗಿ ಬಂದ್ಕಂಡಿ ಕಾಡಿಗೆ ಮಾತಾಡ್ವಾ……
-ಪಿ.ಆರ್. ನಾಯ್ಕ, ಹೊಳೆಗದ್ದೆ
Be the first to comment