ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ – ೭

ವೆಂಕ್ಟೇಶ ನಿನ್ನಾಗೆ ಇಡಿ ಊರ್ತುಂಬಾ ಹುಡ್ಕದೆ. ಎಲ್ಲೂ ನೀ ಸಿಗ್ಲಿಲ್ಲ. ಕಾಡಿಗೆ ನಾನು ಗಾಳ ಹಾಕುಕೆ ಹೊಗ್ಬೇಕು ಹೇಳಿ ಗಾಳ್ಸೇಡಿ ಹುಡ್ಕದೆ. ಸಿಗ್ಲೇಲಾ. ಕಾಡಿಗೆ ಆಬ್ಬಿ ಹೇಳ್ತು , ಅಣ್ಣ ತಾಕಂಡೊಗ್ಯ ಅಂತು. ನಾನು ಮತ್ತೊಂದ ಸೇಡಿ ರೆಡಿ ಮಾಡಿ ಎರಿ ಹುಡ್ಕದೆ. ಎಲ್ಲೂ ಎರಿ ಸಿಗ್ಲಿಲ್ಲ. ಕಾಡಿಗೆ ಆಚಿಕೇರಿಗೆ ಆಡುಕೊಗಿ ಈಗ್ಮಾತ್ರೆ ಬಂದೆ.’

ನಿನ್ನಾಗ್ಮಾರಾಯ ನಮ್ಮಪ್ಗೆ,ಆಬ್ಬಿಗೆ ದೊಡ್ಜಗ್ಳ. ವಿಷ್ಯ ಎಂತದೂ ಇಲ್ಲ. ನಮ್ಮಣ್ಗೆ ದೊಡ್ಡ ಎಂಬ್ರಾಯ್ಡ ಮೊಬೈಲ್ ಬೇಕು ಹೇಳಿ ಆಪ್ಪನಕೈಲಿ ಹೇಳ್ದ. ಆಪ್ಪ , ಆಬ್ಬಿಕೈಲಿ ದುಡ್ಕೆಳ್ದ. ಅಬ್ಬಿ,ನಾಂಕೆಲಿ ಒಂದ್ವರಸಾವ್ರ ಆದೆ. ಅದು ಕೊಡ್ತೆ. ನೀ ತಂದ್ಕ ಅಂತು. ಅದ್ಕೆ ಆಣ್ಣಾ ಒಂದ್ವರಸಾವ್ರ ತಾಕಂಡಿ ಹೊಳಿಲಾಕು. ಒಂದ್ವರಸಾವ್ರಗೆ ಸಣ್ಣ ಬೆಂಕಿಪೆಟ್ಗಿಯಂತ ಮೊಬೈಲ್ ಬರ್ತದೆ. ನಾಂಗ ಅದಬ್ಯಾಡಾ ದೊಡ್ದ ಬೇಕು ಅಂದ. ಆ ಮೊಬೈಲ್ಗೆ ಕಾಡ್ಮಿಅಂದ್ರು ಎಂಟಸಾವ್ರ ಬೇಕು. ನೀವು ತೆಗ್ಸಕೊಟ್ರೆ ಸಾಲಿಗೆ ಹೊಗ್ತೆ , ಇಲ್ಲಾಂದ್ರೆ ಸಾಲಿಗೆ ಹೋಗುದಿಲ್ಲ ಅಂದ. ಅಷ್ಟ ಹೇಳ್ದಕೂಡ್ಲೆ ಆಪ್ಪ ಆಬ್ಬಿಕೇಲಿ ಜಗಳ ಸುರು ಮಾಡ್ಬಿಟ್ಟ. ಕಾಡಿಗೆ ಮಾತ್ಗೆ ಮಾತು ಬೆಳ್ದಿ ಇಬ್ರೂ ಹೊಡ್ದಾಡ್ಕಂಡ್ರು. ಆಪ್ಪ ಹನಿ ಹಾಕಂಡೆ ಇದ್ದ .ಬಾಗಿಲಿ ಸೊಣ್ಕನ ವಾಸ್ನೆ ಬರ್ತಿತ್ತು.’

‘ವೆಂಕಟೇಶ ಸಾಲಿ ಸುರು ಆದ್ರೆ ಲೈಕ್ ಆಗ್ತೀತ್ತು. ನಮ್ಮಣ್ಣ ಮಾರಾಯಾ ಹೈಸ್ಕೂಲ್ ಸಾಲಿಲಿ, ಸಾಲಿಗೆ ಎಯ್ಡನೇ ನಂಬರ್ ಬರ್ತಿದ್ದ. ನಾಂಗೆಲ್ಲ ಆವ್ನೆ ಹೇಳ್ಕೊಡ್ತೀದ್ದ. ಆದ್ರೆ ಈಗ ಏನೂ ಓದುದಿಲ್ಲ,ಬರೂದು ಇಲ್ಲ. ಬರಿ ಗಾಳ ಹಾಕುಕೆ ಹೋಗುದು, ಅಂಗ್ಡಿ ಬದಿಕೆ ತಿರ್ಗುದು. ಮಾನಿಲಂತೂ ದಿನಾ ಜಗ್ಳ. ಒಂದಿನ ಆಪ್ನಜಗ್ಳ, ಒಂದಿನಾ ಆಬ್ಬಿ ಜಾಗ್ಳ. ಈಗಂತೂ ಮೊಬೈಲ್ ತೆಗ್ಸಕೊಡ್ದಿದ್ರೆ ಆಣ್ಗೆ ಸಾಲಿನೆ ಇಲ್ಲ. ಮೊಬೈಲ ತೆಗ್ಸಕೊಟ್ರೆ ಸರಿ ಆಗ್ತಿದ್ನೊ ಎನೋ? ಆಲಾ ಯೆಂಕ್ಟೇಶ’.

ನಿಮ್ಮಾಣ್ಗೇ ಎಲ್ಲಾದ್ರೂ ಕೆಲ್ಸಗೆ ಹೋಗುಕೆ ಹೇಳು. ಆಂವಹ್ಯಾಂಗೂ ದೊಡ್ಡಾಗಾವ್ನೆ. ಎಲ್ಲಾದ್ರೂ ಕೆಲ್ಸಗೆ ತಾಕಂಡೆ ತಾಕಂತ್ರೂ.ಆ ದುಡ್ನಲ್ಲಿ ಮೊಬೈಲ್ ತಾಕಂಬೂಕೆ ಹೇಳು.’

ಮಾರು, ನಾನು ಆಬ್ಬಿ ಸಂಗ್ತಿಗೆ ಒಡಿನ್ಮನಿ ಕೆಲ್ಸಕ್ಕೆ ಹೋಗ್ತಿದ್ದೆ. ಆ ಒಡ್ತಿ ನಾಂಗೆ ತಿಂಬುಕೆಲ್ಲಾ ಕೊಟ್ರು. ಅವ್ರ ಮಾನಿಲಿ ಟಿವಿ ಎಲ್ಲಾ ಆದೆ. ನಾಂಗೆ ಲಾಯ್ಕ ಆಗದೆ.’

ಯೆಂಕ್ಟೇಶಾ…….ಯೆಂಕ್ಟೇಶಾ….’
‘ನಾನು ಬತ್ನಾ. ನಾಂಗೂ ಬೇಜಾರ ಬಂದೊಗದೆ. ಅಲ್ಲೆ ನಾವಿಬ್ರೂ ಆಟ ಆಡ್ಕಂತಿ ಇರ್ವಾ.’

‘ಆಹಾ…..ಆಹಾ…. ಅಲ್ಲಿ ಆಟ ಆಡುಕೆಲ್ಲಾ ಬಿಡುದಿಲ್ಲ. ಒಡ್ತಿ ಹೇಳ್ದ ಕೆಲ್ಸಾ ಎಲ್ಲಾ ಮಾಡ್ಬೇಕು. ಮಾನಿ ಮುಂದ್ನ ಜಡ್ಡಿ ಕಿಳ್ಬೇಕು. ತೋಟ್ದಲ್ಲಿ ಬಿದ್ದ ಆಡ್ಕಿ, ಕಾಯಿ ಹೆಕ್ಬೇಕು. ಕೊಟ್ಗಿ ಆಟ್ಟದ್ಮೆಲಿಂದ ಹುಲ್ತೆಗ್ದಿ ದನಗೆ ಹಾಕ್ಬೇಕು. ಕಾಡಿಗೆ ಹನ್ನೊಂದ್ಗೆಂಟಿಗೆ ಚಾ ಮತ್ತೆ ತಿಂಬೂಕೆ ಕೊಡ್ತುರ್ರು. ನಾ ಅಲ್ಲೆ ಚಾಕೂಡಿತೆ ಟಿವಿ ನೋಡ್ತೆ. ನಾಂಗೆ ಲಾಯ್ಕ ಆಗದೆ. ಸಾಲಿ ಸುರು ಆಗ್ದೀದ್ರು ಅಡ್ಡಿಲ್ಲಾ…….’

ಯೆಂಕ್ಟೇಶಾ ನಾಳಿಕಿಂದ ನಾನು ಬರ್ತೆ.ನೋಡ್ವಾ…ನಾನು ನಮ್ಮಬ್ಬಿಗೆ ಕೇಳ್ತೆ ಎಂದಾಗ ಮಾರು ಖುಷಿಯಿಂದ ಮೂರ್ಮಾರ ದೂರ ಹಾರ್ತಾ ಹಾರ್ತಾ ಓಡೇ ಬಿಟ್ಟಾ….’

-ಪಿ.ಆರ್. ನಾಯ್ಕ, ಹೊಳೆಗದ್ದೆ
ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*